ದೇಶ

ಬ್ಯಾಡ್ಮಿಂಟನ್ ಆಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ - ವೈರಲ್

ಇತ್ತೀಚಿಗೆ ಬಿರ್ ಬೂಮ್ ಗೆ ಭೇಟಿ ನೀಡಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇತರರೊಂದಿಗೆ ಬ್ಯಾಡ್ಮಿಂಟನ್ ಆಡಿದ್ದಾರೆ. ಈ ವಿಡಿಯೋವನ್ನು ಇಂದು ತಮ್ಮ ಇನ್ಸಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಬ್ಯಾಡ್ಮಿಂಟನ್ ಆಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ - ವೈರಲ್
ಮಮತಾ ಬ್ಯಾನರ್ಜಿ
Published On :

ನವದೆಹಲಿ: ಇತ್ತೀಚಿಗೆ ಬಿರ್ ಬೂಮ್ ಗೆ ಭೇಟಿ ನೀಡಿದ್ದ  ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇತರರೊಂದಿಗೆ ಬ್ಯಾಡ್ಮಿಂಟನ್ ಆಡಿದ್ದಾರೆ. ಈ ವಿಡಿಯೋವನ್ನು ಇಂದು ತಮ್ಮ ಇನ್ಸಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

"ಕ್ರೀಡೆಯನ್ನು ನಾವು ಪ್ರೀತಿಸಬೇಕು, ಹಳ್ಳಿಯೊಂದರಲ್ಲಿನ ಟೋಕನ್ ಗೇಮ್ " ಎಂಬ ಅಡಿಬರಹ ನೀಡಿ  ಈ ವಿಡಿಯೋವನ್ನು  ಪೋಸ್ಟ್ ಮಾಡಿದ್ದಾರೆ.  ಸಾಂಪ್ರದಾಯಿಕ ಬಿಳಿ ಸೀರೆ ಧರಿಸಿ, ಕೈ ತುಂಬ ಶಾಲು ಹೊದಿಕೊಂಡು ಇತರ ಮೂವರೊಂದಿಗೆ ಬ್ಯಾಡ್ಮಿಂಟನ್ ಆಡುವ ಮೂಲಕ ಕ್ರೀಡಾಪಟುಗಳಲ್ಲಿ ಉತ್ಸಾಹ ತುಂಬಿದ್ದಾರೆ.

ಈ ವಿಡಿಯೋ   ಹಂಚಿಕೆಯಾದ ಒಂದು ಗಂಟೆ ಅವಧಿಯಲ್ಲೇ ಫೇಸ್ ಬುಕ್ ನಲ್ಲಿ 2500 ಬಾರಿ ಷೇರ್ ಆಗಿದ್ದು, 250ಕ್ಕೂ ಹೆಚ್ಚು ಮಂದಿ ಲೈಕ್ ಕೊಟ್ಟಿದ್ದಾರೆ.

ರಾಜಕೀಯದಲ್ಲಿ ಮುತ್ಸದಿತನದಿಂದ ದೇಶದಲ್ಲಿಯೇ ಮನೆಮಾತನಾಗಿರುವ ಮಮತಾ ಬ್ಯಾನರ್ಜಿ, ಉತ್ತಮ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದು, ಪ್ರಶಂಸೆಯ ಸುರಿಮಳೆಯಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.