ಶಬರಿಮಲೆಯತ್ತ 20 ಮಹಿಳೆಯರು ಸೇರಿ 40 ಚೆಕ್ ರಿಪಬ್ಲಿಕ್ ಭಕ್ತರು
ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರಿಬ್ಬರ ಪ್ರವೇಶ ವಿರೋಧಿಸಿ ಕೇರಳದಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿರುವ....

Published On :
ಕೊಚ್ಚಿ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರಿಬ್ಬರ ಪ್ರವೇಶ ವಿರೋಧಿಸಿ ಕೇರಳದಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿರುವ ಮಧ್ಯೆಯೇ 20 ಮಹಿಳೆಯರು ಸೇರಿದಂತೆ 40 ಚೆಕ್ ರಿಪಬ್ಲಿಕ್ ಭಕ್ತರು ಅಯ್ಯಪ್ಪಸ್ವಾಮಿಯ ದರ್ಶನಕ್ಕೆ ಆಗಮಿಸಿದ್ದಾರೆ.
ಶಬರಿಮಲೆ ಅಯ್ಯಪ್ಪಸ್ವಾಮಿ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಭಕ್ತರನ್ನು ಹೊಂದಿದ್ದು, ಚೆಕ್ ರಿಪಬ್ಲಿಕ್ ನಿಂದ ಥಾಮಸ್ ಪೀಟರ್ ನೇತೃತ್ವದ 40 ಸದಸ್ಯರ ತಂಡ ಕಳೆದ ಡಿಸೆಂಬರ್ 26ರಂದು ಭಾರತಕ್ಕೆ ಆಗಮಿಸಿದೆ.
ಚೆಕ್ ರಿಪಬ್ಲಿಕ್ ಭಕ್ತರು 18 ಪವಿತ್ರ ಮೆಟ್ಟಿಲುಗಳನ್ನು ಹತ್ತುವುದಕ್ಕಾಗಿ 41 ದಿನಗಳಿಂದ ಕಠಿಣ ವೃತ ಆಚರಿಸಿದ್ದಾರೆ. ಈ ವಾರ ಕನ್ಯಾಕುಮಾರಿಗೆ ಆಗಮಿಸಿದ್ದ ಈ ತಂಡ ಇದೀಗ ಅಯ್ಯಪ್ಪಸ್ವಾಮಿ ಮಾಲೆ ಧರಿಸಿ, ಇರುಮುಡಿಕಟ್ಟು ಹೊತ್ತು ಶಬರಿಮಲೆಗೆ ಆಗಮಿಸಿದ್ದಾರೆ.
ದಿನಮಲಾರ್ ಜೊತೆ ಮಾತನಾಡಿದ ಚೆಕ್ ಪ್ರಜೆ ಮೆರ್ಲಾಸ್ ಅವರು, ಅಯ್ಯಪ್ಪನ ಸ್ಪೂರ್ತಿಯಿಂದ ನಾವು ಕಳೆದ ಐದು ವರ್ಷಗಳಿಂದ ಶಬರಿಮಲೆಗೆ ಆಗಮಿಸುತ್ತಿದ್ದೇವೆ. ಇಲ್ಲಿನ ಪರಿಸ್ಥಿತಿ ಬಗ್ಗೆ ನಮಗೆ ಅರಿವಿದೆ. ದೇವಸ್ಥಾನದ ಸಂಪ್ರದಾಯವನ್ನು ನಾವು ಗೌರವಿಸುತ್ತೇವೆ. ಯಾರಿಗೂ ತೊಂದರೆಯಾಗದಂತೆ ದೇವರ ದರ್ಶನ ಪಡೆದು ನಮ್ಮ ದೇಶಕ್ಕೆ ಮರಳುತ್ತೇವೆ ಎಂದಿದ್ದಾರೆ.
ಆನ್ ಲೈನ್ ನೋಂದಣಿ ಪ್ರಕಾರ, ಚೆಕ್ ರಿಪಬ್ಲಿಕ್ ನಿಂದ 20 ಮಹಿಳೆಯರು ಹಾಗೂ 20 ಪುರುಷರು ಜನವರಿ 7ರಂದು ಶಬರಿಮಲೆ ದರ್ಶನ ಪಡೆಯಲು ಟಿಕೆಟ್ ಪಡೆದಿದ್ದಾರೆ. ಈ ಎಲ್ಲಾ ಭಕ್ತರು 50 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


