ದೇಶ

ಭಾರತೀಯ ವಾಯುಸೇನೆಗೆ ಆನೆಬಲ: ಅವಶ್ಯವಿದ್ದರೆ ನಾವೂ ಯುದ್ಧ ವಿಮಾನವನ್ನು ಹಾರಿಸುತ್ತೇವೆ: ಖಾಸಗಿ ಪೈಲಟ್‌ಗಳು!

ಪಾಕಿಸ್ತಾನ ಮತ್ತು ಭಾರತ ನಡುವೆ ಪರಿಸ್ಥಿತಿ ಬಿಗಡಾಯಿಸುತ್ತಿದ್ದು ಈ ಮಧ್ಯೆ ಯುದ್ಧದ ಕಾರ್ಮೋಡ ಹರಡಿರುವ ಬೆನ್ನಲ್ಲೇ ಇದೀಗ ಭಾರತೀಯ ವಾಯುಸೇನೆಗೆ ಆನೆಬಲ ಸಿಕ್ಕಂತಾಗಿದೆ.

ಭಾರತೀಯ ವಾಯುಸೇನೆಗೆ ಆನೆಬಲ: ಅವಶ್ಯವಿದ್ದರೆ ನಾವೂ ಯುದ್ಧ ವಿಮಾನವನ್ನು ಹಾರಿಸುತ್ತೇವೆ: ಖಾಸಗಿ ಪೈಲಟ್‌ಗಳು!
ಸಂಗ್ರಹ ಚಿತ್ರ
Published On :
ನವದೆಹಲಿ: ಪಾಕಿಸ್ತಾನ ಮತ್ತು ಭಾರತ ನಡುವೆ ಪರಿಸ್ಥಿತಿ ಬಿಗಡಾಯಿಸುತ್ತಿದ್ದು ಈ ಮಧ್ಯೆ ಯುದ್ಧದ ಕಾರ್ಮೋಡ ಹರಡಿರುವ ಬೆನ್ನಲ್ಲೇ ಇದೀಗ ಭಾರತೀಯ ವಾಯುಸೇನೆಗೆ ಆನೆಬಲ ಸಿಕ್ಕಂತಾಗಿದ್ದು ಅವಶ್ಯವಿದ್ದರೆ ನಾವೂ ಯುದ್ಧ ವಿಮಾನವನ್ನು ಹಾರಿಸುತ್ತೇವೆ ಎಂದು ಖಾಸಗಿ ಪೈಲಟ್ಸ್ ಹೇಳಿದ್ದಾರೆ.
ಪಾಕಿಸ್ತಾನ ಜತೆ ಯುದ್ಧ ಮಾಡುವುದಾದರೆ ನಾವೂ ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳನ್ನು ಉಡಾವಣೆ ಮಾಡುತ್ತೇವೆ ಎಂದು ಭಾರತೀಯ ಸೇನೆ ಹಾಗೂ ಕೇಂದ್ರ ಸರ್ಕಾರಕ್ಕೆ ಭಾರತೀಯ ವಾಣಿಜ್ಯ ಪೈಲಟ್ಸ್ ಅಸೋಸಿಯೇಷನ್(ಐಸಿಪಿಎ) ಹೇಳಿದೆ.
ನಿನ್ನೆ ಪಾಕಿಸ್ತಾನದ ಮೂರು ಎಫ್-16 ವಿಮಾನಗಳು ಗಡಿ ದಾಟಿ ಭಾರತದೊಳಗೆ ಬಂದು ವಿಧ್ವಂಸಕ ಕೃತ್ಯ ಎಸಗಲು ಮುಂದಾಗಿದ್ದವು. ಈ ವೇಳೆ ಭಾರತೀಯ ವಾಯುಸೇನೆಯ ಯುದ್ಧ ವಿಮಾನ ಅವರಿಗೆ ಪ್ರತಿರೋಧ ತೋರಿ ಅವುಗಳನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದ್ದವು. ಅಲ್ಲದೆ ಒಂದು ಎಫ್-16 ವಿಮಾನವನ್ನು ಹೊಡೆದುರುಳಿಸುವ ಮೂಲಕ ಪಾಕಿಸ್ತಾನಕ್ಕೆ ಕಟು ಸಂದೇಶವನ್ನು ರವಾನಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.