ಲೋಕಸಮರಕ್ಕೆ ಸಮೀಪದಲ್ಲೇ ಬಿಜೆಪಿಗೆ ವೈಮಾನಿಕ ದಾಳಿಯಿಂದ ಮರುಜೀವ !
ಪುಲ್ವಾಮಾ ಉಗ್ರ ದಾಳಿಯ ನಂತರ ತೀವ್ರ ಒತ್ತಡಕ್ಕೆ ಸಿಲುಕಿದ್ದ ಬಿಜೆಪಿಯ ಆತ್ಮವಿಶ್ವಾಸ ವೈಮಾನಿಕ ದಾಳಿಯ ನಂತರ ಇಮ್ಮಡಿಗೊಂಡಿದೆ....

Published On :
ನವದೆಹಲಿ: ಪುಲ್ವಾಮಾ ಉಗ್ರ ದಾಳಿಯ ನಂತರ ತೀವ್ರ ಒತ್ತಡಕ್ಕೆ ಸಿಲುಕಿದ್ದ ಬಿಜೆಪಿಯ ಆತ್ಮವಿಶ್ವಾಸ ವೈಮಾನಿಕ ದಾಳಿಯ ನಂತರ ಇಮ್ಮಡಿಗೊಂಡಿದೆ.
ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿಯ ಸುದ್ದಿ ತಿಳಿಯುತ್ತಿದ್ದಂತೆಯೇ ಬೀದಿಗಿಳಿದ ಬಿಜೆಪಿ ಕಾರ್ಯಕರ್ತರು, ಸಿಹಿ ಹಂಚಿ ಸಂಭ್ರಮಿಸಿದರು.
ಲೋಕಸಭೆ ಚುನಾವಣೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇರುವಾಗ ಪುಲ್ವಾಮಾ ಉಗ್ರರ ದಾಳಿ ಬಿಜೆಪಿಗೆ ಆಘಾತ ಉಂಟು ಮಾಡಿತ್ತು.
ಬಿಜೆಪಿ ಚಾಣಾಕ್ಯ ಅಮಿತ್ ಶಾ ಬುಧವಾರ ತಮ್ಮ ಆಪ್ತರ ಜೊತೆ ಸಭೆ ನಡೆಸಲಿದ್ದಾರೆ, ಚುನಾವಣಾ ಕಾರ್ಯತಂತ್ರಗಳನ್ನು ರೂಪಿಸಲಿದ್ದಾರೆ,
ಈಗ ನಡೆದಿರುವ ವೈಮಾನಿಕ ದಾಳಿಯಿಂದ ಪಾಕಿಸ್ತಾನದಲ್ಲಿ ಮೋದಿ ಬಗ್ಗೆ ಭಾರೀ ಭಯ ವ್ಯಕ್ತವಾಗಿದೆ ಎಂದು ಬಿಜೆಪಿ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ದೃಡ ನಾಯಕತ್ವ ವಿಷಯವನ್ನು ಮುಂದಿಟ್ಟುಕೊಂಡು ಬಿಜೆಪಿ 2019ರ ಲೋಕಸಭೆ ಚುನಾವಣೆ ಎದುರಿಸಲು ಸಿದ್ಧವಾಗುತ್ತಿದೆ, ಪಾಕಿಸ್ತಾನ ವಿರುದ್ಧ ದೇಶದ ಜನರಲ್ಲಿ ಮಡುಗಟ್ಟಿರುವ ಆಕ್ರೋಶವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವುದು ಬಿಜೆಪಿ ತಂತ್ರವಾಗಿದೆ ಹೀಗಾಗಿ ವೈಮಾನಿಕ ದಾಳಿಯ ನಂತರ ಬಿಜೆಪಿ ಮತ್ತೆ ರಾಷ್ಟ್ರೀಯತೆ ಮಂತ್ರ ಪಠಿಸುತ್ತಿದೆ.
ಇದೆಲ್ಲದರ ನಡುವೆಯೂ ದೇಶದಲ್ಲಿ ನಿರುದ್ಯೋಗ, ಕೃಷಿಕರ ಸಮಸ್ಯೆಗಳು ಬಿಜೆಪಿ ಬೆನ್ನಿಗೆ ತಾಗಿ ನಿಂತಿವೆ, ಇದೆಲ್ಲಾದರ ನಡುವೆ ಮೋದಿ ಬ್ರಾಂಡ್ ಹೇಗೆ ಕೆಲಸ ನಿರ್ವಹಿಸಲಿದೆ ಎಂಬುದನ್ನು ಕಾದು ನೋಡಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Narendra Modiನರೇಂದ್ರ ಮೋದಿbjpಬಿಜೆಪಿPakistanಪಾಕಿಸ್ತಾನವೈಮಾನಿಕ ದಾಳಿloksabha electionಲೋಕಸಭೆ ಚುನಾವಣೆAir strike
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


