1999 ವಿಮಾನ ಹೈಜಾಕ್ ಮಾಡಿದ್ದ ಉಗ್ರ ಯುಸೂಫ್ ಅಜರ್ ನ್ನು ವೈಮಾನಿಕ ದಾಳಿಯಲ್ಲೇ ಉಡಾಯಿಸಿದ ಭಾರತ!
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ಪಾಕಿಸ್ತಾನದ ಒಳಗೆ ನುಗ್ಗಿ ಪಾಪಿ ಉಗ್ರರ ರುಂಡ ಚೆಂಡಾಡಿದ್ದು, ಪಾಕಿಸ್ತಾನದ ಖೈಬರ್ ಪಖ್ತೂನ್ಖ್ವಾ ಪ್ರಾಂತ್ಯದ ಬಾಲಕೋಟ್ ನಲ್ಲಿರುವ ಜೈಶ್-ಇ-ಮೊಹಮ್ಮದ್ ಉಗ್ರ

Published On :
ನವದೆಹಲಿ: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ಪಾಕಿಸ್ತಾನದ ಒಳಗೆ ನುಗ್ಗಿ ಪಾಪಿ ಉಗ್ರರ ರುಂಡ ಚೆಂಡಾಡಿದ್ದು, ಪಾಕಿಸ್ತಾನದ ಖೈಬರ್ ಪಖ್ತೂನ್ಖ್ವಾ ಪ್ರಾಂತ್ಯದ ಬಾಲಕೋಟ್ ನಲ್ಲಿರುವ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟಯ ಅತಿ ದೊಡ್ಡ ತರಬೇತಿ ಕ್ಯಾಂಪ್ ನ್ನು ಬಾಂಬ್ ಹಾಕಿ ಉಡಾಯಿಸಿದೆ.
ಈ ಬಾಲಕೋಟ್ ನಲ್ಲಿರುವ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಅತಿ ದೊಡ್ಡ ತರಬೇತಿ ಕ್ಯಾಂಪ್ ಗೆ ಜೈಶ್-ಇ-ಮೊಹಮ್ಮದ್ ನ ಮುಖ್ಯಸ್ಥ ಮಸೂದ್ ಅಜರ್ ನ ಭಾವಮೈದ ಮೌಲಾನ ಯೂಸೂಫ್ ಅಜರ್ ನೇತೃತ್ವ ವಹಿಸಿಕೊಂಡಿದ್ದ.
1994 ರಲ್ಲಿ ಮಸೂದ್ ಅಜರ್ ನನ್ನು ಭಾರತ ಬಂಧಿಸಿದ್ದ ನಂತರ ಆತನನ್ನು ಬಿಡುಗಡೆ ಮಾಡಲು ಆಗ್ರಹಿಸಿ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ 1999 ರಲ್ಲಿIC 814 ವಿಮಾನವನ್ನು ಹೈಜಾಕ್ ಮಾಡಿತ್ತು. ಈ ವಿಮಾನ ಹೈಜಾಕ್ ಯೋಜನೆಯ ಮಾಸ್ಟರ್ ಮೈಂಡ್ ಆಗಿದ್ದವನು ಮೌಲಾನ ಯೂಸೂಫ್ ಅಜರ್.
ಅಂದು ವಿಮಾನ ಹೈಜಾಕ್ ಮಾಡಿ ಮಸೂದ್ ಅಜರ್ ನ್ನು ಬಿಡುಗಡೆ ಮಾಡಿಸಿದ್ದ ಮೌಲಾನ ಯೂಸೂಫ್ ಅಜರ್ ನ್ನು ಭಾರತ ಫೆ.25 ರಂದು ಮಧ್ಯರಾತ್ರಿ ನಡೆಸಿದ ವೈಮಾನಿಕ ದಾಳಿಯಲ್ಲಿ ಬಾಂಬ್ ಹಾಕಿ ಉಡಾಯಿಸಿದೆ. ಯೂಸೂಫ್ ಅಜರ್ ಜೊತೆಗೆ ಇನ್ನೂ ಅನೇಕ ಉಗ್ರರು ಸುಟ್ಟು ಭಸ್ಮವಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Indian Air ForceBombingKandahar hijackIAF strikes in PakistanYusuf Azharಪಾಕ್ ನಲ್ಲಿ ಭಾರತೀಯ ವೈಮಾನಿಕ ದಾಳಿಯೂಸೂಫ್ ಅಜರ್ಕಂದಹಾರ್ ವಿಮಾನ ಹೈಜಾಕ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


