ದೇಶ

ಭೂಕಂಪ ಎಂದು ಭಾವಿಸಿದ್ದೆವು, ವಿಮಾನಗಳ ಕಂಡಾಗ ಯುದ್ಧವೆಂದು ಆತಂಕವಾಯಿತು: ಪಿಒಕೆ ಸ್ಥಳೀಯರು

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ದಾಳಿ ಉಭಯ ದೇಶಗಳ ಗಡಿ ಭಾಗದ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದು, ಐಎಎಫ್ ನಡೆಸಿದ ವಾಯುದಾಳಿಯನ್ನು ಕಣ್ಣಾರೆ ಕಂಡ ಪಿಒಕೆ ಗ್ರಾಮಸ್ಥರು ತಮ್ಮ ಆತಂಕವನ್ನು ಸುದ್ದಿಸಂಸ್ಥೆಯೊಂದಿಗೆ ಹಂಚಿಕೊಂಡಿದ್ದಾರೆ.

ಭೂಕಂಪ ಎಂದು ಭಾವಿಸಿದ್ದೆವು, ವಿಮಾನಗಳ ಕಂಡಾಗ ಯುದ್ಧವೆಂದು ಆತಂಕವಾಯಿತು: ಪಿಒಕೆ ಸ್ಥಳೀಯರು
ಸಂಗ್ರಹ ಚಿತ್ರ
Published On :
ಇಸ್ಲಾಮಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ದಾಳಿ ಉಭಯ ದೇಶಗಳ ಗಡಿ ಭಾಗದ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದು, ಐಎಎಫ್ ನಡೆಸಿದ ವಾಯುದಾಳಿಯನ್ನು ಕಣ್ಣಾರೆ ಕಂಡ ಪಿಒಕೆ ಗ್ರಾಮಸ್ಥರು ತಮ್ಮ ಆತಂಕವನ್ನು ಸುದ್ದಿಸಂಸ್ಥೆಯೊಂದಿಗೆ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಬಿಬಿಸಿ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಸ್ಥಳೀಯರೊಬ್ಬರು, ರಾತ್ರಿ ಮಲಗಿದ್ದಾಗ ಬಾರಿ ಪ್ರಮಾಣದ ಶಬ್ಧ ಕೇಳಿಸಿತು. ಬಳಿಕ ಭೂಮಿ ನಡುಗಲಾರಂಭಿಸಿತು. ಭೂಕಂಪ ಎಂದು ಭಾವಿಸಿ ಹೊರಗೆ ಓಡಿ ಬಂದೆ. 
ಒಟ್ಟಾರೆ ದಾಳಿ ಐದರಿಂದ ಹತ್ತು ನಿಮಿಷದಲ್ಲಿ ಮುಗಿದುಹೋಗಿರಬೇಕು. ನಾವು ಮಲಗಿದ್ದಾಗ ಬೆಚ್ಚಿಬೀಳುಂಥ ಬಾಂಬ್​ ಶಬ್ದವಾಯಿತು. ಏನಾಯಿತು ಎಂದು ಹೊರ ಬಂದು ನೋಡಿದಾಗ ಭಾರತದ ಕಡೆಯಿಂದ ವಿಮಾನಗಳು ಕಂಗ್ರಾ ಎಂದು ನಾವು ಕರೆಯುವ ಜಾಗದ ಮೇಲೆ ದಾಳಿ ನಡೆಸಿದವು. ನೋಡ ನೋಡುತ್ತಿದ್ದಂತೆಯೇ ಈ ಭಾಗದ ಸುಮಾರು 10ಕ್ಕೂ ಹೆಚ್ಚು ಮನೆಗಳ ಮೇಲೆ ಬಾಂಬ್ ಬಿತ್ತು. ಇಡೀ ಪ್ರದೇಶ ಬೆಂಕಿಯ ಜ್ವಾಲೆಗೆ ಸಿಲುಕಿತು. ಬಾಂಬ್​ ಸ್ಫೋಟಗೊಂಡ ನಂತರ ಆ ವಿಮಾನಗಳು ವಾಪಸ್​ ಹೊರಟವು. ಹತ್ತು ನಿಮಿಷದ ತರುವಾಯ ಪಾಕಿಸ್ತಾನ ಪಡೆಗಳು ದಾಳಿ ನಡೆಸಿದ ಶಬ್ದವಾಯಿತು ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.  
ಬೆಳಗ್ಗೆ ಬಾಂಬ್ ಸ್ಫೋಟವಾದ ಸ್ಥಳಕ್ಕೆ ತೆರಳಿದಾಗ ಅಲ್ಲಿ ದೊಡ್ಡ ಕಂದಕ ನಿರ್ಮಾಣವಾಗಿತ್ತು. ಆದರೆ ಅದೃಷ್ಟವಶಾತ್ ಯಾವುದೇ ರೀತಿಯ ಸಾವುನೋವು ಸಂಭವಿಸಿರಲಿಲ್ಲ ಎಂದು ಹೇಳಿದ್ದಾರೆ.
'ಆಗಸದಲ್ಲಿ 5ಕ್ಕೂ ಹೆಚ್ಚು ಯುದ್ಧ ವಿಮಾನಗಳು ದಾಳಿ ಮಾಡುತ್ತಿದ್ದ ದೃಶ್ಯ ಕಂಡೆ. ಸರಿ ಹೊತ್ತಲ್ಲಿ ವಿಮಾನಗಳ ಹಾರಾಟ ಶಬ್ದ ಕೇಳಿಸಿತು. ಗಡಿ ಭಾಗದಲ್ಲಿ ವಾಸವಿರುವ ಕಾರಣ ಇದು ಮಾಮೂಲಿಯಂತದ್ದು ಏನೋ ಎಂದು ಭಾವಿಸಿದ್ದೆವು. ಆದರೆ, ಈ ಬಾರಿ ನಮ್ಮ ಊಹೆ ಸುಳ್ಳಾಗಿತ್ತು... ಎಂದು ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.