ಸರ್ಜಿಕಲ್ ಸ್ಟ್ರೈಕ್ 2.0 ಎಫೆಕ್ಟ್: ಪಾಕ್ ನಲ್ಲಿ ಭಾರತೀಯ ಸಿನಿಮಾಗಳಿಗೆ ಸರ್ಕಾರದಿಂದ ನಿಷೇಧ!
ಭಾರತೀಯ ವಾಯುಸೇನೆ ಪಿಒಕೆಯಲ್ಲಿ ನಡೆಸಿದ ವಾಯುದಾಳಿ ಬಳಿಕ ಪಾಕಿಸ್ತಾನ ಸರ್ಕಾರ ಭಾರತೀಯ ಸಿನಿಮಾಗಳಿಗೆ ನಿಷೇಧ ಹೇರಿದೆ.

Published On :
ಇಸ್ಲಾಮಾಬಾದ್: ಭಾರತೀಯ ವಾಯುಸೇನೆ ಪಿಒಕೆಯಲ್ಲಿ ನಡೆಸಿದ ವಾಯುದಾಳಿ ಬಳಿಕ ಪಾಕಿಸ್ತಾನ ಸರ್ಕಾರ ಭಾರತೀಯ ಸಿನಿಮಾಗಳಿಗೆ ನಿಷೇಧ ಹೇರಿದೆ.
ಹೌದು.. ಭಾರತೀಯ ವಾಯುಸೇನೆಯ ದಾಳಿ ಬೆನ್ನಲ್ಲೇ ಭಾರತದ ವಿರುದ್ಧ ತಿರುಗಿಬಿದ್ದಿರುವ ಪಾಕಿಸ್ತಾನ, ಪಾಕಿಸ್ತಾನದಲ್ಲಿ ಇನ್ನು ಮುಂದೆ ಭಾರತೀಯ ಸಿನಿಮಾಗಳ ಬಿಡುಗಡೆಗೆ ಅವಕಾಶ ನೀಡುವುದಿಲ್ಲ. ಭಾರತೀಯ ಸಿನಿಮಾಗಳಿಗೆ ನಿಷೇಧ ಹೇರಲಾಗಿದೆ ಎಂದು ಹೇಳಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಚೌದರಿ ಫವಾದ್ ಹುಸೇನ್, ಪಾಕಿಸ್ತಾನದಲ್ಲಿ ಇನ್ನು ಮುಂದೆ ಎಲ್ಲ ರೀತಿಯ ಚಿತ್ರಗಳಿಗೆ ನಿಷೇಧ ಹೇರಲಾಗುತ್ತದೆ. ಕೇವಲ ಭಾರತೀಯ ಚಿತ್ರಗಳು ಮಾತ್ರವಲ್ಲ ಭಾರತದ ಕಥಾ ಹಂದರವುಳ್ಳ ಚಿತ್ರಗಳನ್ನೂ ನಿಷೇಧಿಸಲಾಗಿದೆ ಎಂದು ಹೇಳಿದರು. ಅಲ್ಲದೆ ಮೇಡ್ ಇನ್ ಇಂಡಿಯಾ ಜಾಹಿರಾತುಗಳಿಗೂ ನಿಷೇಧ ಹೇರಲಾಗಿದ್ದು, ಈ ಕುರಿತು ಜಾಹಿರಾತು ಪ್ರಸಾರ ಮಾಡುವ ಮಾಧ್ಯಮಗಳ ಮೇಲೂ ನಿಷೇಧ ಹೇರಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವದೆಹಲಿNew DelhiIndian Armyಪಾಕಿಸ್ತಾನIndian Air Forceಭಾರತೀಯ ಸೇನೆIAF strikes in Pakistanಐಎಎಫ್ ವಾಯುದಾಳಿBalakot Terror Campಬಾಲಾಕೋಟ್ ಉಗ್ರ ಕ್ಯಾಂಪ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


