ದೇಶ

ರೈತರೇ ಚಿಂತೆ ಬೇಡ, 2019ಕ್ಕೆ ಭಾರತಕ್ಕೆ ಮುಂಗಾರು ಮಳೆ ಕೊರತೆ ಇಲ್ಲ: ಸ್ಕೈಮೆಟ್ ವರದಿ

2019ರಲ್ಲಿ ಮುಂಗಾರುಮಳೆ ಚುರುಕಾಗಿರಲಿದ್ದು, ಈ ಬಾರಿ ದೇಶಾದ್ಯಂತ ಭಾಗಶಃ ಮಳೆ ಕೊರತೆ ಇರುವ ಸಾಧ್ಯತೆ ಕಡಿಮೆ ಇದೆ ಎಂದು ಹವಾಮಾನ ವರದಿ ಹೇಳಿದೆ.

ರೈತರೇ ಚಿಂತೆ ಬೇಡ, 2019ಕ್ಕೆ ಭಾರತಕ್ಕೆ ಮುಂಗಾರು ಮಳೆ ಕೊರತೆ ಇಲ್ಲ: ಸ್ಕೈಮೆಟ್ ವರದಿ
ಸಂಗ್ರಹ ಚಿತ್ರ
Published On :
ನವದೆಹಲಿ: 2019ರಲ್ಲಿ ಮುಂಗಾರುಮಳೆ ಚುರುಕಾಗಿರಲಿದ್ದು, ಈ ಬಾರಿ ದೇಶಾದ್ಯಂತ ಭಾಗಶಃ ಮಳೆ ಕೊರತೆ ಇರುವ ಸಾಧ್ಯತೆ ಕಡಿಮೆ ಇದೆ ಎಂದು ಹವಾಮಾನ ವರದಿ ಹೇಳಿದೆ.
ಈ ಬಗ್ಗೆ ಹವಾಮಾನ ವರದಿ ಸಂಸ್ಥೆ ಸ್ಕೈಮೆಟ್ ವರದಿ ಬಿಡುಗಡೆ ಮಾಡಿದ್ದು, ಈ ವರ್ಷ ಭಾರತದಲ್ಲಿ ಮುಂಗಾರು ಮಳೆ ಸಾಧಾರಣವಾಗಿ ಇರುವ ಸಾಧ್ಯತೆ ಇದೆ ಎಂದು ಹೇಳಿದೆ. ದೇಶದ ಏಕೈಕ ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್, 'ರೈತರು ಚಿಂತೆಗೀಡಾಗುವ ಅವಶ್ಯಕತೆ ಇಲ್ಲ. ಈ ಬಾರಿ ವಾಡಿಕೆಗಿಂತ ಉತ್ತಮ ಮಳೆಯ ನಿರೀಕ್ಷೆ ಇದೆ. ಈ ಮೂಲಕ ಈ ವರ್ಷ ಬೆಳೆ ಉತ್ತಮವಾಗಿರಲಿದ್ದು, ದೇಶದ ಆರ್ಥಿಕ ಬೆಳವಣಿಗೆ ಹೆಚ್ಚಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ.
ಅಂತೆಯೇ ಈ ವರ್ಷ ಕೃಷಿ ಆದಾಯ ಮತ್ತು ಬೆಳವಣಿದೆ ಸುಮಾರು 2 ಟ್ರಿಲಿಯನ್ ಬಿಲಿಯನ್ ಡಾಲರ್ ಗೆ ಹೆಚ್ಚಳವಾಗಲಿದೆ ಎಂದೂ ಸ್ಕೈಮೆಟ್ ವರದಿಯಲ್ಲಿ ತಿಳಿಸಿದ್ದು, ಶೇ.50ಕ್ಕಿಂತ ಹೆಚ್ಚು ಭಾರತದಾದ್ಯಂತ ಸಾಧಾರಣ ಉತ್ತಮ ಮಳೆಯಾಗಲಿದೆ. ಈ ಬಾರಿ ಕಳೆದ ವರ್ಷದಂತ ಅತೀವೃಷ್ಟಿಯ ಸಾಧ್ಯತೆ ಕಡಿಮೆ ಎಂದೂ ವರದಿಯಲ್ಲಿ ಹೇಳಲಾಗಿದ್ದು, ಒಟ್ಟಾರೆ 4 ತಿಂಗಳ ಅವಧಿಯಲ್ಲಿ 89ಸಿಎಂ ಮಳೆಯಾಗುವ ನಿರೀಕ್ಷೆ ಇದೆ ಎಂದು ಸ್ಕೈಮೆಟ್ ಸಿಇಒ ಜತಿನ್ ಸಿಂಗ್ ಹೇಳಿದ್ದಾರೆ.
ಅಂತೆಯೇ ಈ ಬಾರಿ ಶೇ.96 ರಿಂದ ಶೇ.104ರಷ್ಟು ಮಳೆಯಾಗುವ ನಿರೀಕ್ಷೆ ಇದ್ದು, ಮಾನ್ಸೂನ್ ತಿಂಗಳ ಅವಧಿಯಲ್ಲಿ ಶೇ.70ರಷ್ಟು ಮಳೆ ನಿರೀಕ್ಷಿಸಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.