ದೇಶ

ಬೆಂಕಿಯೊಂದಿಗೆ ಸರಸ ಬೇಡ, ಕಾಶ್ಮೀರ ಜನತೆ ತ್ರಿವರ್ಣ ಧ್ವಜದ ಬದಲು ಬೇರೆ ಧ್ವಜ ಹಿಡಿಯಬೇಕಾಗುತ್ತದೆ: ಮುಫ್ತಿ ಎಚ್ಚರಿಕೆ

ನಿಮ್ಮ ವಕ್ರ ನಿರ್ಧಾರದಿಂದಾಗಿ ಕಾಶ್ಮೀರ ಜನತೆ ತ್ರಿವರ್ಣ ಧ್ವಜದ ಬದಲಿಗೆ ಬೇರೆ ಧ್ವಜ ಹಿಡಿಯಬೇಕಾಗುತ್ತದೆ ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಬೆಂಕಿಯೊಂದಿಗೆ ಸರಸ ಬೇಡ, ಕಾಶ್ಮೀರ ಜನತೆ ತ್ರಿವರ್ಣ ಧ್ವಜದ ಬದಲು ಬೇರೆ ಧ್ವಜ ಹಿಡಿಯಬೇಕಾಗುತ್ತದೆ: ಮುಫ್ತಿ ಎಚ್ಚರಿಕೆ
ಮೆಹಬೂಬ ಮುಫ್ತಿ (ಸಂಗ್ರಹ ಚಿತ್ರ)
Published On :
ಶ್ರೀನಗರ: ನಿಮ್ಮ ವಕ್ರ ನಿರ್ಧಾರದಿಂದಾಗಿ ಕಾಶ್ಮೀರ ಜನತೆ ತ್ರಿವರ್ಣ ಧ್ವಜದ ಬದಲಿಗೆ ಬೇರೆ ಧ್ವಜ ಹಿಡಿಯಬೇಕಾಗುತ್ತದೆ ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಕಾಶ್ಮೀರಗರಿಗೆ ವಿಶೇಷ ಹಕ್ಕು ನೀಡುವ ಆರ್ಟಿಕಲ್ 35ಎ ಅನ್ನು ಹಿಂದಕ್ಕೆ ಪಡೆಯುತ್ತದೆ ಎಂಬ ಊಹಾಪೋಹ ಇದೀಗ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದು, ಈ ಬಗ್ಗೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಬೆಂಕಿಯೊಂದಿಗೆ ಸರಸವಾಡಬೇಡಿ.. ನಿಮ್ಮ ನಿರ್ಧಾರದಿಂದ ಕಾಶ್ಮೀರ ಜನತೆ ತ್ರಿವರ್ಣ ಧ್ವಜದ ಬದಲಿಗೆ ಕಾಶ್ಮೀರ ಜನತೆ ಬೇರೆ ಧ್ವಜ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಕೇಂದ್ರ ಸರ್ಕಾರ ಕಾಶ್ಮೀರ ಜನತೆಗೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 35ಎ ಅನ್ನು ನಿಷೇಧಿಸಲು ಹೊರಟಿದೆ. ಆದರೆ ಇದರ ಗಂಭೀರ ಪರಿಣಾಮ ಏನಾಗಬಹುದು ಎಂಬ ಅರಿವೇ ಕೇಂದ್ರ ಸರ್ಕಾರಕ್ಕೆ ಇದ್ದಂತೆ ಕಾಣುತ್ತಿಲ್ಲ. ಮೋದಿ ಸರ್ಕಾರ ಬೆಂಕಿಯೊಂದಿಗೆ ಸರಸವಾಡಬಾರದು. 
ಆರ್ಟಿಕಲ್ 35ಎ ರದ್ದಾದರೆ, ಕಾಶ್ಮೀರ ಜನತೆ ತ್ರಿವರ್ಣ ಧ್ವಜದ ಬದಲಿಗೆ ಬೇರೆ ಧ್ವಜ ಹಿಡಿಯುವಂತೆ ನೀವೇ ಒತ್ತಡ ಹೇರಬೇಡಿ. 1947ರ ನಂತರ ಈ ವರೆಗೂ ಅಂತಹ ಪರಿಸ್ಥಿತಿ ನಿರ್ಮಾಣವಾಗಿಲ್ಲ, ಮುಂದೆಯೂ ನಿರ್ಮಾಣವಾಗಬಾರದು ಎಂಬುದು ನಮ್ಮ ಅನಿಸಿಕೆ. ಆದರೆ ಕೇಂದ್ರ ಸರ್ಕಾರ ತನ್ನ ಸರ್ವಾಧಿಕಾರಿ ಧೋರಣೆ ಮುಂದುವರೆಸಿ ಆರ್ಟಿಕಲ್ 35ಎ ರದ್ದು ಮಾಡಿದರೆ ಖಂಡಿತಾ ಆಗ  ಕಾಶ್ಮೀರ ಜನತೆ ತಿರುಗಿಬಿದ್ದು, ಬೇರೆ ಧ್ವಜ ಹಿಡಿಯುತ್ತಾರೆ ಎಂದು ಮುಫ್ತಿ ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.