ನಾವು ಭಾರತೀಯರು, ನಮ್ಮಲ್ಲಿ ಜಾತಿ, ಧರ್ಮ ಅಸ್ತಿತ್ವದಲ್ಲಿಲ್ಲ: ಸಿಆರ್ ಪಿಎಫ್ ಅಧಿಕಾರಿ
ನಾವು ಭಾರತೀಯರು, ನಮ್ಮಲ್ಲಿ ಯಾವುದೇ ಜಾತಿ ಮತ್ತು ಧರ್ಮ ಅಸ್ತಿತ್ವದಲ್ಲಿಲ್ಲ ಎಂದು ವಿಶ್ವದ ಅತಿ ದೊಡ್ಡ ಸೇನಾಪಡೆಯ ಮುಖ್ಯ ವಕ್ತಾರರು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.

Published On :
ನವದೆಹಲಿ: ನಾವು ಭಾರತೀಯರು, ನಮ್ಮಲ್ಲಿ ಯಾವುದೇ ಜಾತಿ ಮತ್ತು ಧರ್ಮ ಅಸ್ತಿತ್ವದಲ್ಲಿಲ್ಲ ಎಂದು ವಿಶ್ವದ ಅತಿ ದೊಡ್ಡ ಸೇನಾಪಡೆಯ ಮುಖ್ಯ ವಕ್ತಾರರು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮವೊಂದು ಪುಲ್ವಾಮಾ ಉಗ್ರ ದಾಳಿಯಲ್ಲಿ ಹುತಾತ್ಮರಾದ 40 ಸಿಆರ್ ಪಿಎಫ್ ಯೋಧರ ಜಾತಿ ಬಗ್ಗೆ ವರದಿ ಮಾಡಿದಕ್ಕೆ ಪ್ರತಿಕ್ರಿಯಿಸಿರುವ ಸಿಆರ್ ಪಿಎಫ್ ಮುಖ್ಯ ವಕ್ತಾರ ಹಾಗೂ ಡಿಐಜಿ ಎಂ ದಿನಕರನ್ ಅವರು, ಸಿಆರ್ ಪಿಎಫ್ ನಲ್ಲಿರುವ ನಮ್ಮನ್ನು ಭಾರತೀಯರೆಂದು ಗುರುತಿಸಿ. ಅದಕ್ಕು ಹೆಚ್ಚು, ಕಮ್ಮಿ ಯಾವುದು ಬೇಡ. ಜಾತಿ, ಬಣ್ಣ ಮತ್ತು ಧರ್ಮದ ಆಧಾರದ ಮೇಲೆ ವಿಭಜನೆ ನಮ್ಮ ರಕ್ತದಲ್ಲೇ ಇಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಹುತಾತ್ಮ ಯೋಧರನ್ನು ಅವಮಾನಿಸುವ ಅಂತಹ ಮಾಧ್ಯಮ ವರದಿಗಳನ್ನು ತಡೆ ಹಿಡಿಯಬೇಕು ಎಂದು ದಿನಕರನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


