ಏರೋ ಇಂಡಿಯಾ ಅಗ್ನಿ ಪ್ರಮಾದ: ಕಾರು ಮಾಲೀಕರಿಗೆ ಪರಿಹಾರ ನೀಡಲು ಸಿದ್ಧ ಎಂದ ವಿಮಾ ಕಂಪನಿಗಳು!
ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ವೇಳೆ ಸಂಭವಿಸಿದ್ದ ಅಗ್ನಿ ಪ್ರಮಾದದಲ್ಲಿ ಸುಟ್ಟು ಕರಕಲಾದ ಕಾರುಗಳಿಗೆ ವಿಮೆ ನೀಡಲು ತಾವು ಸಿದ್ಧ ಎಂದು ವಿಮಾ ಕಂಪನಿಗಳು ಮುಂದೆ ಬಂದಿವೆ.

Published On :
ಬೆಂಗಳೂರು: ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ವೇಳೆ ಸಂಭವಿಸಿದ್ದ ಅಗ್ನಿ ಪ್ರಮಾದದಲ್ಲಿ ಸುಟ್ಟು ಕರಕಲಾದ ಕಾರುಗಳಿಗೆ ವಿಮೆ ನೀಡಲು ತಾವು ಸಿದ್ಧ ಎಂದು ವಿಮಾ ಕಂಪನಿಗಳು ಮುಂದೆ ಬಂದಿವೆ.
ವಾರಾಂತ್ಯ ವಾದ್ದರಿಂದ ಇಂದು ವೈಮಾನಿಕ ಪ್ರದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷರು ಆಗಮಿಸಿದ್ದರು. ಅಂತೆಯೇ ಪಾರ್ಕಿಂಗ್ ಲಾಟ್ ನಲ್ಲೂ 500ಕ್ಕೂ ಹೆಚ್ಚು ವಾಹನಗಳು ಆಗಮಿಸಿದ್ದವು. ಈ ವೇಳೆ ಸುಮಾರು 300ಕ್ಕೂ ಅಧಿಕ ವಾಹನಗಳಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತುಕೊಂಡಿದ್ದು. ಸುಮಾರು 272 ಕಾರುಗಳು ಬೆಂಕಿಗಾಹುತಿಯಾಗಿವೆ. ಬಯಲು ಪ್ರದೇಶದಲ್ಲಿನ ಹುಲ್ಲಿಗೆ ಬೆಂಕಿ ತಗುಲಿ ನಿಲ್ಲಿಸಿದ್ದ ಕಾರುಗಳಿಗೆ ಹತ್ತಿಕೊಂಡಿದೆ. ಇದರ ಪರಿಣಾಮ ದುಬಾರಿ ಬೆಲೆಯ ಕಾರುಗಳು ಬೆಂಕಿಗೆ ಆಹುತಿಯಾಗಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.
ಇನ್ನು ಅಗ್ನಿ ದುರಂತದ ಮಾಹಿತಿ ತಿಳಿದ ಬೆನ್ನಲ್ಲೇ ವಿವಿಧ ವಿಮಾ ಕಂಪನಿಗಳಿಗೆ ಕಾರು ಮಾಲೀಕರು ದೂರು ನೀಡಿದ್ದು, ಈ ಸಂಬಂಧ ಸ್ಥಳಕ್ಕಾಗಮಿಸಿದ ವಿಮಾ ಕಂಪನಿಗಳ ಸಿಬ್ಬಂದಿ ಸ್ಥಳ ಮಹಜರು ಮಾಡಿದ್ದಾರೆ. ಅಂತೆಯೇ ಕಾರು ಮಾಲೀಕರಿಗೆ ವಿಮೆ ನೀಡುವ ಕುರಿತು ಆಶ್ವಾಸನೆ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಗಳು ಕಾರುಗಳ ವಿಮೆಯನ್ನು ಪರಿಶೀಲಿಸಿ ಅವಧಿಯಾಧಾರದ ಮೇಲೆ ವಿಮೆ ನೀಡಲಾಗುತ್ತದೆ. ಸಂಪೂರ್ಣ ಬೆಂಕಿಗಾಹುತಿಯಾದ ಕಾರುಗಳಿಗೆ ಗರಿಷ್ಟ ಶೇ.90ರಷ್ಟು ವಿಮೆ ಪರಿಹಾರ ಮತ್ತು ವಿಶೇಷ ಪ್ರಕರಣಗಳಲ್ಲಿ ಕಾರಿನ ಬದಲಿಗೆ ಹೊಸ ಕಾರು ನೀಡುವ ಸಾಧ್ಯತೆ ಕೂಡ ಇದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುBengaluruಅಗ್ನಿ ಅನಾಹುತfire accidentವಿಮಾ ಕಂಪನಿಗಳುInsurance companyAero India 2019ಏರೋ ಇಂಡಿಯಾ 2019
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


