ಪುಲ್ವಾಮಾ ದಾಳಿ; ಫೋಟೋಶೂಟ್ ನಿರತ ಮೋದಿ 'ಪ್ರೈಮ್ ಟೈಮ್ ಮಿನಿಸ್ಟರ್': ರಾಹುಲ್ ಗಾಂಧಿ
ಪುಲ್ವಾಮಾದಲ್ಲಿ ಭಯೋತ್ಪಾದಕರು ಯೋಧರ ರಕ್ತಪಾತ ಹರಿಸಿದ್ದರೆ ಇತ್ತ ಪ್ರಧಾನಿ ನರೇಂದ್ರ ಮೋದಿ ಮಾತ್ರ ಫೋಟೋಶೂಟ್ ನಲ್ಲಿ ತೊಡಿಗಿದ್ದು ಅವರು ಪ್ರೈಮ್ ಟೈಮ್ ಮಿನಿಸ್ಟರ್ ಎಂದು ಕಾಂಗ್ರೆಸ್...

Published On :
ನವದೆಹಲಿ: ಪುಲ್ವಾಮಾದಲ್ಲಿ ಭಯೋತ್ಪಾದಕರು ಯೋಧರ ರಕ್ತಪಾತ ಹರಿಸಿದ್ದರೆ ಇತ್ತ ಪ್ರಧಾನಿ ನರೇಂದ್ರ ಮೋದಿ ಮಾತ್ರ ಫೋಟೋಶೂಟ್ ನಲ್ಲಿ ತೊಡಿಗಿದ್ದು ಅವರು ಪ್ರೈಮ್ ಟೈಮ್ ಮಿನಿಸ್ಟರ್ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.
40ಕ್ಕೂ ಹೆಚ್ಚು ಭಾರತೀಯ ಯೋಧರು ಉಗ್ರ ದಾಳಿಯಲ್ಲಿ ಮೃತಪಟ್ಟಿದ್ದು ಇದಕ್ಕೆ ದೇಶವೇ ಕಂಬನಿ ಮಿಡಿಯುತ್ತಿದ್ದರೆ ಪ್ರಧಾನಿಗಳು ಮಾತ್ರ ಸಂಜೆಯವರೆಗೂ ಫೋಟೋಶೂಟ್ ನಲ್ಲಿ ನಿರತರಾಗಿದ್ದರು. ಇವರು ದೇಶದ ಪ್ರಧಾನಿಯಲ್ಲ ಪ್ರೈಮ್ ಟೈಮ್ ಪ್ರಧಾನಿಯೆಂದು ರಾಹುಲ್ ಗಾಂಧಿ ಜರಿದಿದ್ದಾರೆ.
ಪುಲ್ವಾಮಾದಲ್ಲಿ ಉಗ್ರ ದಾಳಿ ಮೂರು ಗಂಟೆಗಳ ಬಳಿಕವೂ ಪ್ರಧಾನಿ ಮೋದಿಯವರು ಫೋಟೋಶೂಟ್ ನಲ್ಲಿ ತೊಡಗಿದ್ದರು. ಅವರಿಗೆ ದೇಶದ ಭದ್ರತೆಗಿಂತ ಅವರ ಫೋಟೋಶೂಟ್ ಮುಖ್ಯವಾಗಿತ್ತು ಎಂದರು.

ಫೆಬ್ರವರಿ 14ರಂದು ಪ್ರಧಾನಿ ಅವರು ಕೊರ್ಬೆಟ್ ನ್ಯಾಷನಲ್ ಪಾರ್ಕ್ ನಲ್ಲಿ ಫೋಟೋಶೂಟ್ ಮಾಡಿಸಿದ್ದು ವಿವಿಧ ಭಂಗಿಯಲ್ಲಿ ಫೋಟೋಗಳಿಗೆ ಪೋಸ್ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Narendra Modiನರೇಂದ್ರ ಮೋದಿRahul Gandhiರಾಹುಲ್ ಗಾಂಧಿPulwama attackಪುಲ್ವಾಮಾ ದಾಳಿPrime Time Ministerಪ್ರೈಮ್ ಟೈಮ್ ಮಿನಿಸ್ಟರ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


