ದೇಶಕ್ಕೆ ಬುಲೆಟ್ ಟ್ರೈನ್ ಬೇಕಿಲ್ಲ: ದೇಶ ಕಾಯುವ ಸೈನಿಕರಿಗೆ ಬುಲೆಟ್ ಪ್ರೂಫ್ ಜಾಕೆಟ್ ಬೇಕಿದೆ: ಅಖಿಲೇಶ್
ದೇಶಕ್ಕೆ ಏನು ಬೇಕು, ಏನು ಬೇಡ ಎಂಬುದು ದೇಶ ಆಳುವವರಿಗೆ ತಿಳಿದಿರಬೇಕು, ದೇಶಕ್ಕೆ ಬೇಕಾಗಿರುವುದು ಬುಲೆಟ್ ಟ್ರೈನ್ ಅಲ್ಲ ದೇಶ ಕಾಯುವ ಯೋಧರಿಗೆ ಬುಲೆಟ್ ಪ್ರೂಫ್ ...

Published On :
ಲಕ್ನೋ: ದೇಶಕ್ಕೆ ಏನು ಬೇಕು, ಏನು ಬೇಡ ಎಂಬುದು ದೇಶ ಆಳುವವರಿಗೆ ತಿಳಿದಿರಬೇಕು, ದೇಶಕ್ಕೆ ಬೇಕಾಗಿರುವುದು ಬುಲೆಟ್ ಟ್ರೈನ್ ಅಲ್ಲ ದೇಶ ಕಾಯುವ ಯೋಧರಿಗೆ ಬುಲೆಟ್ ಪ್ರೂಫ್ ಜಾಕೆಟ್ ಬೇಕಾಗಿದೆ ಎಂದು ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಖಿಲೇಶ್ ಯಾದವ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು, ಎನ್ ಡಿಎ ಸರ್ಕಾರಕ್ಕೆ ದೇಶಕ್ಕೆ ಬುಲೆಟ್ ರೈಲು ತರಬೇಕೆಂಬ ಮಹತ್ವಾಕಾಂಕ್ಷೆ ಇದೆ, ಆದರೇ ಇಂದಿನ ಪರಿಸ್ಥಿತಿಯಲ್ಲಿ ದೇಶಕ್ಕೆ ಬೇಕಾಗಿರುವುದು ಬುಲೆಟ್ ಟ್ರೈನ್ ಅಲ್ಲ, ಮುಖ್ಯವಾಗಿ ಯೋಧರಿಗೆ ಬುಲೆಟ್ ಪ್ರೂಫ್ ಜಾಕೆಟ್ ಬೇಕಾಗಿದೆ ಎಂದು ತಿಳಿಸಿದ್ದಾರೆ.
ಪುಲ್ವಾಮಾ ಉಗ್ರರ ದಾಳಿಯಲ್ಲಿ ಗುಪ್ತಚರ ಇಲಾಖೆ ವೈಫಲ್ಯ ಎದ್ದು ಕಾಣುತ್ತಿದೆ, ಇಡೀ ದೇಶವೇ ಯೋಧರ ಭದ್ರತೆ ಹಾಗೂ ರಕ್ಷಣೆ ಮೇಲೆ ನಿಂತಿದೆ, ಗಡಿಯಲ್ಲಿ ಭದ್ರತಾ ಪಡೆಗಳ ಸಾಮರ್ಥ್ಯ ಮತ್ತಷ್ಟು ಬಲಪಡಿಸಲು ಚಂತ್ರಗಾರಿಕೆ ರೂಪಿಸಬೇಕು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Akhilesh Yadavಅಖಿಲೇಶ್ ಯಾದವ್ಬುಲೆಟ್ ಪ್ರೂಫ್ ಜಾಕೆಟ್ಸೈನಿಕರುsoldiersbullet trainಬುಲೆಟ್ ಟ್ರೈನ್bullet proof jackests
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


