ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ವೇಳೆ ರಾಹುಲ್ ಗಾಂಧಿ ಮೊಬೈಲ್ ಬಳಕೆ? ಫೋಟೋ ವೈರಲ್!
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ಭೀಕರ ದಾಳಿಯಲ್ಲಿ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದು ಇದು ಭಾರತೀಯ ಎದೆಯಲ್ಲಿ...

Published On :
ನವದೆಹಲಿ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ಭೀಕರ ದಾಳಿಯಲ್ಲಿ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದು ಇದು ಭಾರತೀಯ ಎದೆಯಲ್ಲಿ ಬೆಂಕಿಯ ಜ್ವಾಲೆ ಎಳುವಂತೆ ಮಾಡಿದೆ. ಈ ಮಧ್ಯೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು. ಹುತಾತ್ಮರಾದ ಯೋಧರ ಶೋಕಾಚರಣೆಯಲ್ಲಿ ಭಾಗಿಯಾಗಿದ್ದ ರಾಹುಲ್ ಗಾಂಧಿ ಅವರು ಮೊಬೈಲ್ ಬಳಸುತ್ತಿದ್ದರು. ಯೋಧರ ಸಾವಿಗೆ ಇಡೀ ದೇಶವೇ ಮಮ್ಮಲು ಮರುಗುತ್ತಿದ್ದರೆ ಇತ್ತ ರಾಹುಲ್ ಗಾಂಧಿ ಮೊಬೈಲ್ ನೋಡುತ್ತಿದ್ದಾರೆ ಅವರಿಗೆ ಎಲ್ಲಿ ಹೇಗೆ ವರ್ತಿಸಬೇಕು ಎಂದು ತಿಳಿದಿಲ್ಲ ಎಂದು ನಟ ಪರೇಶ್ ರಾವಲ್ ಫೋಟೋವನ್ನು ಹಾಕಿ ಈ ಸಂದೇಶ ಬರೆದಿದ್ದಾರೆ.
ಇನ್ನೊಂದೆಡೆ ಯಾರಿಗೆ ಯಾವ ರೀತಿ ಗೌರವ ಕೊಡಬೇಕು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಿ ಕಲಿಯಬೇಕು. ರಾಹುಲ್ ಗಾಂಧಿ ಹಾಗೂ ಮೋದಿ ನಡುವಿನ ವ್ಯತ್ಯಾಸ ಇದೆ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪರ ವಿರೋಧ ಟೀಕೆಗಳು ವ್ಯಕ್ತವಾಗಿದ್ದು ಪರೇಶ್ ರಾವತ್ ಓರ್ವ ಮುರ್ಖ. ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇವರೆಲ್ಲಾ ನಮ್ಮ ಸಂಸದರು ಎಂದು ಖಾರವಾಗಿ ರೀಟ್ವೀಟ್ ಮಾಡಿದ್ದಾರೆ.
ಇನ್ನು ಫೋಟೋದಲ್ಲಿ ಇರುವಂತೆ ರಾಹುಲ್ ಗಾಂಧಿ ಮೊಬೈಲ್ ಬಳಕೆ ಮಾಡಿರುವುದು ನಿಜ. ಆದರೆ ಅದು ಅವರು ಹುತಾತ್ಮ ಯೋಧರಿಗೆ ಗೌರವ ವಂದನೆ ಅರ್ಪಿಸಿದ ಬಳಿಕ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Narendra Modiನರೇಂದ್ರ ಮೋದಿCongressಕಾಂಗ್ರೆಸ್Indian ArmyRahul Gandhiರಾಹುಲ್ ಗಾಂಧಿಭಾರತೀಯ ಸೇನೆPulwama Terror AttackPulwama Martyrsಪುಲ್ವಾಮಾ ಹುತಾತ್ಮ ಯೋಧರು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


