ದೇಶ

ಪುಲ್ವಾಮಾ ದಾಳಿ: ಪಾಕ್ ಜತೆ ಶಾಂತಿ ಮಾತುಕತೆಯೇ ಪರಿಹಾರವೆಂದ ಸಿಧು!

ಗುರುವಾರ ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಗೆ ಇಡೀ ದೇಶ ತೀವ್ರ ಖಂಡನೆ ವ್ಯಕ್ತಪಡಿಸುತ್ತಿದೆ. ಜನರು ಆಕ್ರೋಶಭರಿತರಾಗಿ ಪಾಕ್ ವಿರುದ್ಧ ಹರಿಹಾಯುತ್ತಿದ್ದಾರೆ. ಆದರೆ ಪಂಜಾಬ್ ಸರ್ಕಾರದ ....

ಪುಲ್ವಾಮಾ ದಾಳಿ: ಪಾಕ್ ಜತೆ ಶಾಂತಿ ಮಾತುಕತೆಯೇ ಪರಿಹಾರವೆಂದ ಸಿಧು!
ಪುಲ್ವಾಮಾ ದಾಳಿ: ಪಾಕ್ ಜತೆ ಶಾಂತಿ ಮಾತುಕತೆಯೇ ಪರಿಹಾರವೆಂದ ಸಿಧು!
Published On :
ಅಮೃತಸರ್: ಗುರುವಾರ ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಗೆ ಇಡೀ ದೇಶ ತೀವ್ರ ಖಂಡನೆ ವ್ಯಕ್ತಪಡಿಸುತ್ತಿದೆ. ಜನರು ಆಕ್ರೋಶಭರಿತರಾಗಿ ಪಾಕ್ ವಿರುದ್ಧ ಹರಿಹಾಯುತ್ತಿದ್ದಾರೆ. ಆದರೆ ಪಂಜಾಬ್ ಸರ್ಕಾರದ ಸಚಿವ, ಕಾಂಗ್ರೆಸ್ ನಾಯಕ  ನವಜೋತ್ ಸಿಂಗ್ ಸಿಧು ಪಾಕಿಸ್ತಾನದ ಜತೆ ಮಾತುಕತೆ ನಡೆಸಿ ಎಂದು ಸಲಹೆ  ನಿಡಿದ್ದಾರೆ.
40ಕ್ಕೆ ಹೆಚ್ಚು ಯೋಧರನ್ನು ಬಲಿಪಡೆದ ಉಗ್ರರ ಕೃತ್ಯಕ್ಕೆ  ಭಾರತ ಸೇರಿದಂತೆ ಜಗತ್ತಿನೆಲ್ಲೆಡೆ ತೀವ್ರ ಖಂಡನೆ ವ್ಯಕ್ತವಾಗಿದೆ. ಪ್ರಧಾನಿ ಮೋದಿ ತಾವು ಯೋಧರ ಬಲಿದಾನ ವ್ಯರ್ಥವಾಗಲು ಬಿಡಲ್ಲ ಎಂದಿದ್ದಾರೆ. ಅ;ಲ್ಲದೆ ಸೇನೆಗೆ ಸಂಪೂರ್ಣ ಸ್ವಾತಂತ್ರವನ್ನೂ ನೀಡಲಾಗಿದೆ.
ಇತ್ತ ಸಿಧು ಮಾತ್ರ ಪಾಕ್ ಜತೆ ಮಾತುಕತೆಯ ಸಲಹೆ ನೀಡಿದ್ದಾರೆ. ಪುಲ್ವಾಮದಲ್ಲಿ ನಡೆದ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮೇಲೆ ಆರೋಪ ಮಾಡುವುದು ಸರಿಯಲ್ಲ ದಾಳಿ ನಡೆದದ್ದು ಖಂಡನಾರ್ಹ, ಆದರೆ ಕೆಲವೇ ಜನರು ಮಾಡಿದ ಕೆಲಸಕ್ಕೆ ಒಂದು ರಾಷ್ಟ್ರದ ಮೇಲೆ ಆರೊಪಿಸುವುದು ಸಲ್ಲ.ಇದಕ್ಕೆಲ್ಲಾ ಶಾಂತಿ ಮಾತುಕತೆಯಷ್ಟೇ ಪರಿಹಾರವಾಗಬಲ್ಲದು ಎಂದು ಹೇಳಿರುವ ಸಿಧು ಪಾಕಿಸ್ತಾನದ ಪರ ಮೃದು ಧೋರಣೆ ತಳೆದಿದ್ದಾರೆ.
"ಯಾರೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಲಲು ಬಯಸುತ್ತಿಲ್ಲ, ಇದೇ ಕಾರಣ ಇಂತಹಾ ಘಟನೆಗಳು ಮತ್ತೆ ಮರುಕಳಿಸುತ್ತಿದೆ.ಭಯೋತ್ಪಾಧನೆಯಿಂದ ಏನೂ ಸಾಧಿಸಲಾಗದು, ಶಾಂತಿ ಮಾತುಕತೆಯೊಂದೆ ಎಲ್ಲಕ್ಕೆ ಪರಿಹಾರ." ಸಿಧು ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.