ಪ್ರೇಮಿಗಳ ದಿನ: ಪ್ರೀತಿಸಿದವಳಿಗಾಗಿ ಸ್ನೇಹಿತನನ್ನು ಕೊಂದ ಪ್ರೇಮಿ!
ವಿಶ್ವಾದ್ಯಂತ ಇಂದು ಪ್ರೇಮಿಗಳು ಪ್ರೇಮಿಗಳ ದಿನದ ಸಂಭ್ರಮದಲ್ಲಿದ್ದರೆ ಅತ್ತ ತಮಿಳುನಾಡಿನಲ್ಲಿ ಪೀತಿಸಿದವಳಿಗಾಗಿ ವಿದ್ಯಾರ್ಥಿಯೋರ್ವ ತನ್ನ ಸ್ನೇಹಿತನಿಗೆ ಚಾಕಿವಿನಂದ ಇರಿದಿದ್ದಾನೆ.

Published On :
ಚೆನ್ನೈ: ವಿಶ್ವಾದ್ಯಂತ ಇಂದು ಪ್ರೇಮಿಗಳು ಪ್ರೇಮಿಗಳ ದಿನದ ಸಂಭ್ರಮದಲ್ಲಿದ್ದರೆ ಅತ್ತ ತಮಿಳುನಾಡಿನಲ್ಲಿ ಪೀತಿಸಿದವಳಿಗಾಗಿ ವಿದ್ಯಾರ್ಥಿಯೋರ್ವ ತನ್ನ ಸ್ನೇಹಿತನಿಗೆ ಚಾಕಿವಿನಂದ ಇರಿದಿದ್ದಾನೆ.
ಹೌದು ಚೆನ್ನೈನ ಸೆಂಟ್ರಲ್ ಲೈಬ್ರರಿ ಬಳಿ ಈ ಘಟನೆ ನಡೆದಿದ್ದು, ಇಬ್ಬರೂ ಐಐಟಿ ಮದ್ರಾಸ್ ವಿದ್ಯಾರ್ಥಿಗಳಾಗಿದ್ದು, ಇಬ್ಬರು ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಹುಡುಗಿ ವಿಚಾರವಾಗಿ ಇಬ್ಬರೂ ಜಗಳ ಮಾಡಿಕೊಂಡಿದ್ದು ಜಗಳ ತಾರಕಕ್ಕೇರಿ ಓರ್ವ ವಿದ್ಯಾರ್ಥಿ ತನ್ನ ಸ್ನೇಹಿತನಿಗೆ ಚಾರುವಿನಿಂದ ಇರಿದಿದ್ದಾನೆ.
ಚಾಕು ಇರಿದ ವಿದ್ಯಾರ್ಥಿಯನ್ನು ಮನೋಜ್ ಎಂದು ಗುರುತಿಸಲಾಗಿದ್ದು, ಸಂತ್ರಸ್ಥ ವಿದ್ಯಾರ್ಥಿಯನ್ನು ಆತನ ಸ್ನೇಹಿತ ಪ್ರಮೋದ್ ಕೌಶಿಕ್ ಎಂದು ಹೇಳಲಾಗಿದೆ. ಇಬ್ಬರೂ ಹರ್ಯಾಣ ಮೂಲದವರಾಗಿದ್ದು, ನಿನ್ನೆ ಸಂಜೆ ಲೈಬ್ರರಿ ಆವರಣದಲ್ಲಿ ಹುಡುಗಿಯ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಸ್ತುತ ಚಾಕು ಇರಿತಕ್ಕೊಳಗಾದ ಕೌಶಿಕ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಕೊಟ್ಟೂರು ಪುರಂ ಪೊಲೀಸರು ಮನೋಜ್ ನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


