ಹೇಡಿ ಕೃತ್ಯ, ರಕ್ತ ಕುದಿಯುತ್ತಿದೆ: ಯೋಧರ ಪ್ರತಿ ರಕ್ತದ ಹನಿಗೂ ಪ್ರತೀಕಾರ ತೆಗೆದುಕೊಳ್ಳುತ್ತೇವೆ: ಕೇಂದ್ರ ಸಚಿವ ವಿಕೆ ಸಿಂಗ್
ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಯೋಧರ ರಕ್ತ ಹರಿದಿರುವುದಕ್ಕೆ ಇಡೀ ದೇಶವೇ ಪ್ರತೀಕಾರದ ಮಾತನ್ನಾಡುತ್ತಿದೆ.

Published On :
ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಯೋಧರ ರಕ್ತ ಹರಿದಿರುವುದಕ್ಕೆ ಇಡೀ ದೇಶವೇ ಪ್ರತೀಕಾರದ ಮಾತನ್ನಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಯೋಧರ ಮೇಲಿನ ಭಯೋತ್ಪಾದಕರ ದಾಳಿಗೆ ತಕ್ಕ ಪ್ರತೀಕಾರ ತೆಗೆದುಕೊಳ್ಳಲೇಬೇಕೆಂಬ ಧ್ವನಿ ಕೇಳಿಬಂದಿದ್ದು ಈ ನಡುವೆ ವಿಕೆ ಸಿಂಗ್ ಸಹ ಪ್ರತೀಕಾರ ತೆಗೆದುಕೊಳ್ಳುವ ಮಾತನ್ನಾಡಿದ್ದಾರೆ.
ಸಿಆರ್ ಪಿಎಫ್ ಯೋಧರ ಮೇಲಿನ ದಾಳಿಯನ್ನು ಖಂಡಿಸಿ, ಟ್ವೀಟ್ ನಲ್ಲಿ ಹುತಾತ್ಮರಾದ ಯೋಧರಿಗೆ ಸಂತಾಪ ಸೂಚಿಸಿರುವ ಕೇಂದ್ರ ಸಚಿವ ವಿ.ಕೆ ಸಿಂಗ್, ನಿವೃತ್ತ ಯೋಧನಾಗಿ, ಭಾರತೀಯ ಪ್ರಜೆಯಾಗಿ ಈ ಹೇಡಿತನದ ದಾಳಿಗೆ ನನ್ನ ರಕ್ತ ಕುದಿಯುತ್ತಿದೆ. ಕೆಚ್ಚೆದೆಯ ಯೋಧರು ಪುಲ್ವಾಮದಲ್ಲಿ ಜೀವತೆತ್ತಿದ್ದಾರೆ. ಅವರ ನಿಸ್ವಾರ್ಥ ಬಲಿದಾನಕ್ಕೆ, ರಕ್ತದ ಪ್ರತಿ ಹನಿಗೂ ಪ್ರತೀಕಾರ ತೆಗೆದುಕೊಳ್ಳುತ್ತೇವೆ ಜೈ ಹಿಂದ್ ಎಂದು ವಿ.ಕೆ ಸಿಂಗ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
CRPFಜಮ್ಮು-ಕಾಶ್ಮೀರjammu-kashmirಭಯೋತ್ಪಾದಕ ದಾಳಿಪುಲ್ವಾಮVK Singhವಿ.ಕೆ ಸಿಂಗ್Pulwamaಸಿಆರ್ ಪಿಎಫ್ ಯೋಧರುPulwama Terror Attack
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


