ದೇಶ

ಭೀಮಾ-ಕೊರೆಗಾಂವ್ ಕೇಸು; ಮುಂಬೈ ಹೈಕೋರ್ಟ್ ತೀರ್ಪನ್ನು ತಳ್ಳಿ ಹಾಕಿದ 'ಸುಪ್ರೀಂ' ಕೋರ್ಟ್

ಭೀಮಾ ಕೊರೆಗಾಂವ್ ಜಾತಿ ಹಿಂಸಾಚಾರ ಪ್ರಕರಣದಲ್ಲಿ ಮುಂಬೈ ಹೈಕೋರ್ಟ್ ನ ತೀರ್ಪನ್ನು ತಳ್ಳಿ ...

ಭೀಮಾ-ಕೊರೆಗಾಂವ್ ಕೇಸು; ಮುಂಬೈ ಹೈಕೋರ್ಟ್ ತೀರ್ಪನ್ನು ತಳ್ಳಿ ಹಾಕಿದ 'ಸುಪ್ರೀಂ' ಕೋರ್ಟ್
ಪುಣೆ ಸಮೀಪ ಭೀಮಾ ಕೊರೆಗಾಂವ್ ನಲ್ಲಿ ನಡೆದ ಹಿಂಸಾಚಾರದಲ್ಲಿ ಸುಟ್ಟು ಕರಕಲಾದ ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿಯ ಕಾರ್ಯಾಚರಣೆ
Published On :
ನವದೆಹಲಿ: ಭೀಮಾ ಕೊರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಮುಂಬೈ ಹೈಕೋರ್ಟ್ ನ ತೀರ್ಪನ್ನು ತಳ್ಳಿ ಹಾಕಿದ ಸುಪ್ರೀಂ ಕೋರ್ಟ್ ಐವರು ಕಾರ್ಯಕರ್ತರಿಗೆ ಜಾಮೀನು ನೀಡಲು ನಿರಾಕರಿಸಿದೆ. 
ಸುರೇಂದ್ರ ಗಡ್ಲಿಂಗ್, ಸುದೀರ್ ಧವಲೆ, ಮಹೇಶ್ ರಾವತ್, ರೊಮ ವಿಲ್ಸನ್ ಮತ್ತು ಸೊಮ ಸೇನ್ ತಪ್ಪಿನ ಲಾಭ ಪಡೆಯುವ ಅವಕಾಶವನ್ನು ಕಳೆದುಕೊಂಡಿದ್ದಾರೆ ಮತ್ತು ಅವರು ಸುಪ್ರೀಂ ಕೋರ್ಟ್ ನಲ್ಲಿ ಜಾಮೀನು ಪಡೆಯಲು ಸಾಮಾನ್ಯ ಅರ್ಜಿಯನ್ನೇ ಸಲ್ಲಿಸಬೇಕಾಗಿದೆ.
ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವ ಕಾಯ್ದೆಯಡಿ ತ್ವರಿತ ವಿಚಾರಣಾಧೀನ ನ್ಯಾಯಾಲಯ ಐವರು ಕಾರ್ಯಕರ್ತರ ಮೇಲೆ ಆರೋಪಪಟ್ಟಿ ಸಲ್ಲಿಸಲು 90 ದಿನಗಳ ಕಾಲಾವಕಾಶವನ್ನು ಮಹಾರಾಷ್ಟ್ರ ಪೊಲೀಸರಿಗೆ ನೀಡಿತ್ತು. ಕ್ರಿಮಿನಲ್ ವಿಧಾನ ದಂಡಸಂಹಿತೆಯಡಿ 90 ದಿನಗಳ ಕಾಲಾವಕಾಶ ಮುಗಿದಿದೆ.
ಮಹಾರಾಷ್ಟ್ರದ ಭೀಮಾ ಕೊರೆಗಾಂವ್ ಗ್ರಾಮದಲ್ಲಿ ಕಳೆದ ವರ್ಷ ಜನವರಿ 1ರಂದು ಜಾತಿ ಹಿಂಸಾಚಾರ ಸೃಷ್ಟಿಸಿದ ಆರೋಪದ ಮೇಲೆ ವಿವಿಧ ಕಡೆಗಳಿಂದ ಐವರು ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಇವರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.