ಪೌರತ್ವ ಮಸೂದೆಗೆ ವಿರೋಧ: 'ಭಾರತ ರತ್ನ' ತಿರಸ್ಕರಿಸಿದ ಭೂಪೇನ್ ಹಜಾರಿಕಾ ಪುತ್ರ!
ಪ್ರಸಿದ್ಧ ಗಾಯಕ-ಸಂಯೋಜಕ ಭೂಪನ್ ಹಜಾರಿಕಾ ಅವರಿಗೆ ಸಂದಿದ್ದ ಭಾರತ ರತ್ನ ಗೌರವವನ್ನುಅವರ ಪುತ್ರ ನಿರಾಕರಿಸಿದ್ದಾರೆ.

Published On :
ಗೌಹಾಟಿ: ಪ್ರಸಿದ್ಧ ಗಾಯಕ-ಸಂಯೋಜಕ ಭೂಪನ್ ಹಜಾರಿಕಾ ಅವರಿಗೆ ಸಂದಿದ್ದ ಭಾರತ ರತ್ನ ಗೌರವವನ್ನು ಅವರ ಪುತ್ರ ನಿರಾಕರಿಸಿದ್ದಾರೆ. ಹಜಾರಿಕಾ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿರುವ ಭಾರತ ರತ್ನ ಪುರಸ್ಕಾರ ನೀಡಿ ಈಶಾನ್ಯ ರಾಜ್ಯಗಳಲ್ಲಿ ಜಾರಿ ಮಾಡಲು ಉದ್ದೇಶಿಸಿರುವ ಪೌರತ್ವ ಮಸೂದೆಗೆ ಬೆಂಬಲಿಸಲು ಹುನ್ನಾರ ಹೆಣೆಯಲಾಗಿದೆ ಎಂದು ರಾಜಕೀಯ ವ್ಯಾಖ್ಯಾನಕಾರರು ಅಭಿಪ್ರಾಯಪಟ್ಟಿದ್ದಾರೆ.
ಹಜಾರಿಕಾ ಅವರ ಕುಟುಂಬದ ಇತರೆ ಸದಸ್ಯರು ಹಜಾರಿಕಾಗೆ ಸಂದ ಗೌರವಕ್ಕೆ ಹರ್ಷ ವ್ಯಕ್ತಪಡಿಸಿದ್ದರೆ ಅಮೆರಿಕಾದಲ್ಲಿ ನೆಲೆಸಿದ್ದ ಅವರ ಪುತ್ರ ತೇಜ್ ಮಾತ್ರ ತಾವು ಈ ಪ್ರಶಸ್ತಿಯನ್ನು ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ.
ಅಮೆರಿಕದಿಂದ ದೂರವಾಣಿ ಮೂಲಕ ಅಸ್ಸಾಮಿ ದಿನಪತ್ರಿಕೆಗೆ ಮಾತನಾಡಿದ ಅವರು ಪೌರತ್ವ ಮಸೂದೆ ನಮ್ಮ ತಂದೆಯವರ ನಂಬಿಕೆಗೆ ವಿರುದ್ಧವಾಗಿದೆ.ಇಂತಹಾ ಮಸೂದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿದೆ.ಇದು ನನ್ನಲ್ಲಿ ಅಸಮಾಧಾನವನ್ನು ಹುಟ್ಟಿಸಿದೆ, ಹೀಗಾಗಿ ನಾನು ನನ್ನ ತಂದೆಗೆ ನೀಡಲಾಗಿರುವ ಗೌರವವನ್ನು ತಿರಸ್ಕರಿಸುತ್ತೇನೆ ಎಂದಿದ್ದಾರೆ.
"ಅಸ್ಸಾಂನಲ್ಲಿ ನಡೆಯುತ್ತಿರುವ ಹೋರಾಟದ ಬಗ್ಗೆ ನನ್ನ ಅರಿವಿದೆ. ಹೋರಾಟದ ಕಾಲದಲ್ಲಿ ಯಾವಾಗಲೂ ಅಸ್ಸಾಂನ ಜನರ ಪರವಾಗಿ ನಿಂತಿದ್ದ ಹಜಾರಿಕಾ ಬಹುಶಃ ಗೌರವವನ್ನು ಸ್ವೀಕರಿಸಲು ಬಯಸುತ್ತಿರಲಿಲ್ಲ.ಹಾಗಾಗಿ, ಅವನ ಮಗನಾಗಿ ನಾನು ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನನ್ನ ಮನಸ್ಸಾಕ್ಷಿಯು ಅದನ್ನು ಒಪ್ಪಿಕೊಳ್ಳಲಾರದು." ತೇಜ್ ಹಜಾರಿಕಾ ಹೇಳಿದ್ದಾರೆ.
ಆದಾಗ್ಯೂ, ಅವರ ಹೇಳಿಕೆಗಳು ಕುಟುಂಬದ ಇತರ್ರ ಭಾವನೆಗಳೊಡನೆ ಕೂಡಿರಲಿಲ್ಲ."ಭೂಪೇನ್ ಹಜಾರಿಕಾಗೆ ನೀಡಿರುವ ಭಾರತ ರತ್ನ ಪ್ರಶಸ್ತಿ ಇಡೀ ಈಶಾನ್ಯ ರಾಜ್ಯಗಳಿಗೆ ಸಂದ ಗೌರವ. ಎಂದು ಕುಟುಂಬದ ಇತರರು ಹೇಳಿದ್ದಾರೆ.ಹಜಾರಿಕಾಗೆ ಭಾರತ ರತ್ನ ನೀಡಿದ ಬಗ್ಗೆ ನಾವು ಅತೃಪ್ತರಾಗಿದ್ದೇವೆಂದು ಹೇಳಲಾಗದು ಎಂದು ಅವರ ಅತ್ತಿಗೆ ಮನೀಶಾ ಹಜಾರಿಕಾ ಪತ್ರಿಕೆಗೆ ತಿಳೀಸಿದ್ದಾರೆ.
ಜನವರಿ 26ರ ಗಣರಾಜ್ಯೋತ್ಸವದಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ನಾನಾಜಿ ದೇಶಮುಖ್ ಹಾಗೂ ಹಿರಿಯ ಸಂಗೀತ ಸಂಯೋಜಕ ಭೂಪೇನ್ ಹಜಾರಿಕಾ ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ಘೋಷಣೆ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Bharat Ratnaಭಾರತ ರತ್ನBhupen Hazarikaಭೂಪೇನ್ ಹಜಾರಿಕಾTez HazarikaAssam Citizenship Billತೇಜ್ ಹಜಾರಿಕಾಅಸ್ಸಾಂ ಪೌರತ್ವ ಮಸೂದೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


