ಚೆನ್ನೈ: ಕಸದ ತೊಟ್ಟಿಯಲ್ಲಿ ಮಹಿಳೆಯ ಶವದ ಅವಯವ ಪತ್ತೆ, ಸಹಾಯಕ ನಿರ್ದೇಶಕ ಬಂಧನ
ಸಿನಿಮಾದ ಸಹಾಯಕ ನಿರ್ದೇಶಕರೊಬ್ಬರ ಪತ್ನಿಯ ಶವದ ಅವಯವಗಳು ಕಸದ ಟ್ರಕ್ ನಲ್ಲಿ ಕಂಡುಬಂದ...

ಚೆನ್ನೈ: ಸಹಾಯಕ ನಿರ್ದೇಶಕರೊಬ್ಬರ ಪತ್ನಿಯ ಶವದ ಅವಯವಗಳು ಕಸದ ಟ್ರಕ್ ನಲ್ಲಿ ಕಂಡುಬಂದ ಘಟನೆ ಚೆನ್ನೈ ನಗರ ವ್ಯಾಪ್ತಿಯಲ್ಲಿ ನಡೆದಿದೆ. ಮಹಿಳೆ ಅಸುನೀಗಿ 16 ದಿನಗಳ ನಂತರ ಶರೀರದ ಅವಯವಗಳು ಕಸದ ತೊಟ್ಟಿಯಲ್ಲಿ ಸಿಕ್ಕಿವೆ.
ಈ ಆಘಾತಕಾರಿ ಘಟನೆ ಬೆಳಕಿಗೆ ಬಂದದ್ದು ಜನವರಿ 20ರಂದು, ಕಸವನ್ನು ಸಾಗಿಸುವ ಕೂಲಿ ಕಾರ್ಮಿಕರು ಚೆನ್ನೈ ನಗರಪಾಲಿಕೆ ವ್ಯಾಪ್ತಿಯ ಪೆರುಂಗುಡಿ ಕಸದ ರಾಶಿ ತೊಟ್ಟಿಯಲ್ಲಿ ಕಸ ಹಾಕುವಾಗ ಮಹಿಳೆಯ ಮೃತದೇಹದ ಅವಯವಗಳು ಸಿಕ್ಕಿವೆ. ಕೂಡಲೇ ಪೊಲೀಸರಿಗೆ ವಿಷಯ ತಿಳಿಸಲಾಯಿತು. ಆರಂಭದಲ್ಲಿ ಪೊಲೀಸರಿಗೆ ಮಹಿಳೆ ಯಾರೆಂದು ಗೊತ್ತಾಗಲಿಲ್ಲ. ಸಾರ್ವಜನಿಕರಿಂದ ಮಾಹಿತಿ ಕೇಳಿದ್ದರು.
ನಿನ್ನೆ ಪೊಲೀಸರಿಗೆ ಮಹಿಳೆ ಸಂಧ್ಯಾ ಎಂದು ಸಹಾಯಕ ನಿರ್ದೇಶಕ ಬಾಲಕೃಷ್ಣ ಅವರ ಪತ್ನಿ ಎಂದು ಗೊತ್ತಾಗಿದೆ. ಪತಿ-ಪತ್ನಿಯ ಮಧ್ಯೆ ಹೊಂದಾಣಿಕೆ ಇಲ್ಲದೆ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿ ವಿಚಾರಣೆ ನಡೆಯುತ್ತಿತ್ತು.
ಸಹಾಯಕ ನಿರ್ದೇಶಕ ಬಾಲಕೃಷ್ಣ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ತೂತುಕುಡಿ ಮೂಲದ ಸಂಧ್ಯಾ ಈ ಹಿಂದೆ ಚೆನ್ನೈನ ಜಫ್ಫರ್ ಖಾನ್ ಪೇಟೆಯಲ್ಲಿ ವಾಸವಾಗಿದ್ದರು. ಕೊಡ್ಡಂಬಕ್ಕಮ್ ಪ್ರದೇಶದಿಂದ ಸಂಗ್ರಹಿಸಿದ ಕಸದಲ್ಲಿ ಮಹಿಳೆಯ ಶವದ ಅವಯವಗಳು ಸಿಕ್ಕಿದ್ದವು.
ಪೊಲೀಸರ ಬಳಿ ದಾಖಲಾಗಿದ್ದ ಕಾಣೆಯಾದ ಮಹಿಳೆಯ ದೂರನ್ನು ಆಧರಿಸಿ ಮೃತ ಮಹಿಳೆಯ ಅವಯವವನ್ನು ಪೊಲೀಸರು ಗುರುತುಹಿಡಿದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


