Chennai police

ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಅಸ್ಥಿರಗೊಳಿಸುವ 'ಪ್ರಾಜೆಕ್ಟ್ ಮೇಘಾಲಯ' ಸಂಚು: ಹಲವು ಪತ್ರಕರ್ತರ ವಿಚಾರಣೆ
ಟಿವಿಕೆ ಪಕ್ಷದ ಉತ್ತಂಗರೈ ಕ್ಷೇತ್ರದ ಶಾಸಕ ಎನ್. ಇಳಯರಾಜ ಅವರು ನೀಡಿದ ದೂರಿನ ಆಧಾರದ ಮೇಲೆ ಈ ತನಿಖೆ ಆರಂಭವಾಗಿದೆ. ಪಕ್ಷದ ವಿಪ್ ಉಲ್ಲಂಘಿಸಿ ಮತ ಚಲಾಯಿಸಲು ತಮಗೆ ಬರೋಬ್ಬರಿ 35 ಕೋಟಿ ಲಂಚದ ಆಮಿಷ ಒಡ್ಡಲಾಗಿತ್ತು ಎಂದು ಶಾಸಕರು ಆರೋಪಿಸಿದ್ದಾರೆ.

ತೆಲುಗು ವಿರೋಧಿ ಹೇಳಿಕೆಗಳ ಆರೋಪ: ನಟಿ ಕಸ್ತೂರಿ ಬಂಧನ
ಹೈದರಾಬಾದ್‌ನಲ್ಲಿರುವ ಸ್ನೇಹಿತನ ಮನೆಯಲ್ಲಿ ಆಶ್ರಯ ಪಡೆದು ಬಂಧನದಿಂದ ತಪ್ಪಿಸಿಕೊಳ್ಳಲು ಆಕೆ ಯತ್ನಿಸುತ್ತಿದ್ದರು.

ಸದ್ಗುರು ಜಗ್ಗಿ ವಾಸುದೇವ್ ಸ್ಥಾಪಿತ ಈಶಾ ಫೌಂಡೇಶನ್‌ಗೆ ನುಗ್ಗಿದ 150 ಪೊಲೀಸ್ ಅಧಿಕಾರಿಗಳು, ವಿಡಿಯೋ!
ಸಹಾಯಕ ಸಬ್ ಇನ್ಸ್‌ಪೆಕ್ಟರ್ ಶ್ರೇಣಿಯ ಅಧಿಕಾರಿ, ಮೂವರು ಡಿಎಸ್‌ಪಿಗಳ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪ್ರತಿಷ್ಠಾನದ ವಿರುದ್ಧ ದಾಖಲಾದ ಎಲ್ಲಾ ಕ್ರಿಮಿನಲ್ ಪ್ರಕರಣಗಳ ವರದಿಯನ್ನು ಪರಿಶೀಲಿಸುವಂತೆ ಮದ್ರಾಸ್ ಹೈಕೋರ್ಟ್ ಆದೇಶದ ಬೆನ್ನಲ್ಲೇ ಈ ದಾಳಿ ನಡೆಸಲಾಗಿದೆ.

ತಮಿಳುನಾಡು: ರಾಸಾಯನಿಕಗಳ ಪ್ರಯೋಗ ನಡೆಸುತ್ತಿದ್ದಾಗ ಸ್ಫೋಟ; 17 ವರ್ಷದ ವಿದ್ಯಾರ್ಥಿ ಸಾವು
ಕೆಲವು ರಾಸಾಯನಿಕಗಳ ಪ್ರಯೋಗ ನಡೆಸುತ್ತಿದ್ದಾಗ ಸಂಭವಿಸಿದ ಸ್ಫೋಟದಲ್ಲಿ 17 ವರ್ಷದ 12 ನೇ ತರಗತಿ ವಿದ್ಯಾರ್ಥಿ ಸಾವಿಗೀಡಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯಾರ್ಥಿಯು ಕೊಳತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿದ್ದನು ಮತ್ತು ಶೈಕ್ಷಣಿಕ ಆಸಕ್ತಿಯಿಂದ ಈ ಪ್ರಯೋಗವನ್ನು ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ನಿ ಮೇಲೆ ದೌರ್ಜನ್ಯ; ತಲೆಮರೆಸಿಕೊಂಡ ಕನ್ನಡದ ಜನಪ್ರಿಯ ಧಾರಾವಾಹಿಯ ನಾಯಕ ರಾಹುಲ್ ರವಿ
ಕನ್ನಡದ ಜನಪ್ರಿಯ ಧಾರಾವಾಹಿ ನಂದಿನಿಯ ಹೀರೋ ರಾಹುಲ್ ರವಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ಸದ್ಯ ರಾಹುಲ್ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಪತ್ನಿಗೆ ಕಿರುಕುಳ ನೀಡಿದ ಆರೋಪದ ಮೇಲೆ ದೂರು ದಾಖಲಾಗಿದ್ದು, ಚೆನ್ನೈ ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ತ್ರಿಶಾ ಬಗ್ಗೆ ಅಶ್ಲೀಲ ಹೇಳಿಕೆ: ಕ್ಷಮೆ ಕೇಳಲ್ಲ ಎಂದ ಮನ್ಸೂರ್ ಅಲಿ ಖಾನ್; ಚೆನ್ನೈ ಪೊಲೀಸರಿಂದ ಕೇಸ್ ದಾಖಲು!
ತ್ರಿಷಾ ಬಗೆಗಿನ ಮತ್ತು ಒಟ್ಟಾರೆ ನಟಿಯರ ಬಗ್ಗೆ ಆಡಿದ್ದ ಈ ಮಾತು ಭಾರೀ ವಿವಾದಕ್ಕೆ ಕಾರಣವಾಗಿತ್ತು. ತ್ರಿಷಾ ಸೇರಿದಂತೆ ಹಲವರು ನಟನೆ ನಡೆಯನ್ನು ಖಂಡಿಸಿದ್ದರು. ನಟನ ವ್ಯಕ್ತಿತ್ವವನ್ನು ಅವನ ಮಾತು ತೋರಿಸುತ್ತಿದೆ ಎಂದು ರಿಯ್ಯಾಕ್ಟ್ ಮಾಡಿದ್ದರು

ಲೈಂಗಿಕ ಕಿರುಕುಳ ಆರೋಪ: ಚೆನ್ನೈ ಕಲಾಕ್ಷೇತ್ರದ ಸಹಾಯಕ ಪ್ರೊಫೆಸರ್ ಬಂಧನ
ಲೈಂಗಿಕ ಕಿರುಕುಳ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತಮಿಳುನಾಡು ರಾಜ್ಯದ ಪ್ರತಿಷ್ಠಿತ ಶಾಸ್ತ್ರೀಯ ಕಲೆಗಳ ಸಂಸ್ಥೆಯಾದ ಕಲಾಕ್ಷೇತ್ರದ ಸಹಾಯಕ ಪ್ರೊಫೆಸರ್ ಒಬ್ಬರನ್ನು ಚೆನ್ನೈ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆಂದು ಸೋಮವಾರ ತಿಳಿದುಬಂದಿದೆ.

ಚೆನ್ನೈ: ಹೈಕೋರ್ಟ್ ಮಾಜಿ ನ್ಯಾಯಮೂರ್ತಿ ಸಿ.ಎಸ್. ಕರ್ಣನ್ ಬಂಧನ
ಕಲ್ಕತ್ತಾ ಹೈಕೋರ್ಟ್ ಮಾಜಿ ನ್ಯಾಯಾಧೀಶ ಜಸ್ಟಿಸ್ ಸಿ ಎಸ್ ಕರ್ಣನ್ ಅವರನ್ನು ಸೈಬರ್ ಕ್ರೈಮ್ ಪೊಲೀಸರು ಬುಧವಾರ ಚೆನ್ನೈನಲ್ಲಿ ಬಂಧಿಸಿದ್ದಾರೆ.

ತನ್ನ ಸ್ವಂತ ಮನೆಯನ್ನೇ ದೋಚಿ ಪರಾರಿಯಾದ ತಮಿಳು ನಟಿ!
ವಿಚಿತ್ರ ಪ್ರಕರಣವೊಂದರಲ್ಲಿ ತನ್ನ ಪತಿಯ ಮನೆಯನ್ನೇ ದೋಚಿದ್ದ ಕಿರುತೆರೆ ನಟಿಯೊಬ್ಬಳಿಗಾಗಿ ಚೆನ್ನೈ ಪೋಲೀಸರು ಶೋಧ ನಡೆಸಿದ್ದಾರೆ. ತಮಿಳು ನಟ ಸುಚಿತ್ರಾ ಮತ್ತು ಅವರ ಪತಿ ತಮ್ಮ ಸ್ವಂತ ಮನೆಯನ್ನೇ ದೋಚಿದ ಪ್ರಕರಣದಲ್ಲಿ ಆರೋಪಿಗಳಗಿದ್ದಾರೆ.

