ಶಬರಿಮಲೆ ವಿವಾದ: ಪಿಣರಾಯ್ ವಿಜಯನ್ ನಿಲುವು ಸರಿ- ನಟ ವಿಜಯ್ ಸೇತುಪತಿ
ಶಬರಿಮಲೆ ವಿವಾದಕ್ಕೆ ಸಂಬಂಧಿಸಿದಂತೆ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರ ನಿಲುವನ್ನು ಕಾಲಿವುಡ್ ನಟ ವಿಜಯ್ ಸೇತುಪತಿ ಶ್ಲಾಘಿಸಿದ್ದಾರೆ. ನಾನೂ ಅವರ ದೊಡ್ಡ ಅಭಿಮಾನಿ ಎಂದು ಹೇಳಿದ್ದಾರೆ.

ಚೆನ್ನೈ: ಶಬರಿಮಲೆ ವಿವಾದಕ್ಕೆ ಸಂಬಂಧಿಸಿದಂತೆ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರ ನಿಲುವನ್ನು ಕಾಲಿವುಡ್ ನಟ ವಿಜಯ್ ಸೇತುಪತಿ ಶ್ಲಾಘಿಸಿದ್ದಾರೆ. ನಾನೂ ಅವರ ದೊಡ್ಡ ಅಭಿಮಾನಿ ಎಂದು ಹೇಳಿದ್ದಾರೆ.
ಟವಿ ಶೋ ವೊಂದರಲ್ಲಿ ಪಿಣರಾಯ್ ವಿಜಯನ್ ಜೊತೆಗೆ ವೇದಿಕೆ ಹಂಚಿಕೊಂಡಿರುವ ವಿಜಯ್ ಸೇತುಪತಿ, ಕೇರಳ ಮುಖ್ಯಮಂತ್ರಿ ಯಾವಾಗಲೂ ಶಾಂತ ಸ್ವಭಾವದಿಂದ ಇರುವ ಪ್ರಬುದ್ಧ ವ್ಯಕ್ತಿಯಾಗಿದ್ದಾರೆ. ಹೆಡ್ ಮಾಸ್ಟರ್ ರೀತಿಯಲ್ಲಿ ವೇದಿಕೆಗೆ ಆಗಮಿಸುತ್ತಾರೆ. ಅವರು ನಡೆದು ಹೋಗುವಾಗ ನಿಶಬ್ದ ವಾತವಾರಣವಿರುತ್ತದೆ ಎಂದು ಹೊಗಳಿದ್ದಾರೆ.
ವೇದಿಕೆಯಲ್ಲಿದ್ದಾಗ ನನ್ನ ಕಡೆ ತಿರುಗಿ ಏಕೆ ಮೊದಲು ಮಾತನಾಡಲಿಲ್ಲ ಎಂಬುದನ್ನು ಕೇಳಿ ನಿಜಕ್ಕೂ ಆಶ್ಚರ್ಯವಾಯಿತು. ಶಾಸಕರು ಅಥವಾ ಸಂಸದರು ಈ ರೀತಿಯ ಸಹಕಾರ ನೀಡದಿದ್ದರೂ ಮುಖ್ಯಮಂತ್ರಿ ಅವರ ಮಾತು ನಿಜಕ್ಕೂ ಬೆರಗೂ ಮೂಡಿಸಿತು ಎಂದು ವಿಜಯ್ ಸೇತುಪತಿ ಹೇಳಿದ್ದಾರೆ.
ತಮಿಳುನಾಡು ಗಾಜಾ ಚಂಡಮಾರುತಕ್ಕೆ ತುತ್ತಾದ ಸಂದರ್ಭದಲ್ಲಿ ಕೇರಳದಲ್ಲಿ ಸಂಕಷ್ಟವಿದ್ದರೂ 10 ಕೋಟಿ ರೂಪಾಯಿ ಪರಿಹಾರ ಹಣ ಒದಗಿಸಿದ್ದಾರೆ. ಇದನ್ನು ಯಾವಾಗಲೂ ಮರೆಯಲು ಸಾಧ್ಯವಿಲ್ಲ ಎಂದು ಹೊಗಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


