ಬಂಗಾಳವನ್ನೇ ನಾಶ ಮಾಡಲು ಬಿಜೆಪಿ ಸಜ್ಜು: ಮಮತಾ ಬ್ಯಾನರ್ಜಿಆರೋಪ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೋಲ್ಕತಾ ಪೋಲಿಸ್ ಕಮಿಷನರ್ ನಿವಾಸದ ಹೊರಗಡೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ್ದು "ಬಿಜೆಪಿ....

Published On :
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೋಲ್ಕತಾ ಪೋಲಿಸ್ ಕಮಿಷನರ್ ನಿವಾಸದ ಹೊರಗಡೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ್ದು "ಬಿಜೆಪಿ (ಭಾರತೀಯ ಜನತಾ ಪಕ್ಷ) ಬಂಗಾಳವನ್ನು ಹಾಳು ಮಾಡಲು ಹೊರಟಿದೆ. ನಾನು ಬ್ರಿಗೇಡ್ ರ್ಯಾಲಿಗೆ ಅವಕಾಶ ನೀಡಿಲ್ಲ ಎಂಬ ಏಕೈಕ ಕಾರಣಕ್ಕೆ ಅವರು ಬಂಗಾಳವನ್ನೇ ನಾಶ ಮಾಡಲು ಹೊರಟಿದ್ದಾರೆ." ಎಂದರು.
ಪ್ರಧಾನಿ ಮೋದಿಯವರ ನಿನ್ನೆಯ ಭಾಷಣವನ್ನು ನೀವೇಲ್ಲಾ ಕೇಳಿದ್ದೀರಿ. ಅದರಲ್ಲಿ ಅವರು ಹಾಕಿರುವ ಬೆದರಿಕೆಗಳ ಕುರಿತೂ ನಿಮಗೆ ಅರಿವಿದೆ. ಪ್ರಧಾನಿ ಆಡಿರುವ ಭಾಷೆಯ ಕುರಿತಂತೆ ನಾನೇನೂ ಹೇಳುವ ಅಗತ್ಯವಿಲ್ಲ ಎಂದ ಟಿಎಂಸಿ ನಾಯಕಿ ಬಿಜೆಪಿ ಇದಾಗಲೇ ತನ್ನ ಎಕ್ಸ್ಪೈರಿ ದಿನಾಂಕದ ಆಚೆಗೆ ಹೋಗಿದೆ ಎಂದಿದ್ದಾರೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಮೋದಿ ಅವರ ಆದೇಶದ ಅನುಸಾರ ಕಾರ್ಯನಿರ್ವಹಿಸಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಆರೋಪಿಸಿದ್ದಾರೆ. ಕೇಂದ್ರೀಯ ತನಿಖಾ ದಳವನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದೂ ಅವರು ಹೇಳಿದರು.
ನಾವು ಪೋಲೀಸ್ ಬಲಕ್ಕೆ ರಕ್ಷಣೆ ನೀಡಬೇಕಾಗಿರುವುದು ನಮ್ಮ ಜವಾಬ್ದಾರಿ. ನೋಟೀಸ್ ನೀಡದೆ ನೀವು ಕೊಲ್ಕತ್ತಾ ಪೊಲೀಸ್ ಆಯುಕ್ತರ ಮನೆಗೆ ಬರುತ್ತಿದ್ದೀರಿ. ನಾವು ಸಿಬೈಐ ನವರನ್ನು ಬಂಧಿಸಬಹುದು, ಆದರೆ ಇದಿಘ ಬಿಟ್ಟಿದ್ದೇವೆ.
ರಾಜೀವ್ ಕುಮಾರ್ (ಕೊಲ್ಕತ್ತಾ ಪೋಲಿಸ್ ಕಮೀಷನರ್) ಅವರು ವಿಶ್ವದಲ್ಲೇ ಅತ್ಯುತ್ತಮ ಅಧಿಕಾರಿ ಎಂದು ನಾನು ಭಾವಿಸುತ್ತೇನೆ. ನಾನು ಸಿಬಿಐ ಅಧಿಕಾರಿಗಳ ಬಗ್ಗೆ ಗೌರವ ಹೊಂದಿದ್ದೇನೆ. ಆದರೆ ಇಂದು ನಾನು ಬಹಳ ದುಃಖಿತಳಾಗಿದ್ದೇನೆ.ಒದು ಒಕ್ಕೂಟ ವ್ಯವಸ್ಥೆಯ ನಾಶಕ್ಕೆ ಕಾರಣವಾಗಲಿದೆ" ,ಮಮತಾ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Kolkataಕೊಲ್ಕತ್ತಾMamata Banerjeeಮಮತಾ ಬ್ಯಾನರ್ಜಿKolkata Police CommissionerModi vs Didiಕೊಲ್ಕತ್ತಾ ಪೊಲೀಸ್ ಕಮಿಷನ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


