ದೇಶ

ಹೊಸ ವರ್ಷಕ್ಕೆ ಶಾಕ್! ಜನವರಿ 1ರಿಂದ ರೈಲ್ವೆ ಪ್ರಯಾಣ ದರ ಹೆಚ್ಚಳ

ಹೊಸ ವರ್ಷದ ಮುನ್ನಾದಿನ ರೈಲ್ವೆ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಶ್ಕಿಂಗ್ ನ್ಯೂಸ್ ಕೊಟ್ಟಿದೆ. ರಾಇಲ್ವೆ ಇಲಾಖೆ ತನ್ನೆಲ್ಲಾ ರೈಲ್ವೆ ಸೇವೆಗಳ ಶುಲ್ಕ ಹೆಚ್ಚಳ ಮಾಡಿ ಘೊಷಣೆ ಹೊರಡಿಸಿದೆ. ಉಪನಗರ ರೈಲುಗಳನ್ನು ಹೊರತುಪಡಿಸಿ,ಉಳಿದೆಲ್ಲಾ ರೈಲ್ವೆ ಸೇವೆಗಳಲ್ಲಿ ಶುಲ್ಕ ಏರಿಕೆ ನಾಳೆ (ಜನವರಿ 1, 2020) ರಿಂದ ಜಾರಿಗೆ ಬರಲಿದೆ.

ಹೊಸ ವರ್ಷಕ್ಕೆ ಶಾಕ್! ಜನವರಿ 1ರಿಂದ ರೈಲ್ವೆ ಪ್ರಯಾಣ ದರ ಹೆಚ್ಚಳ
ಸಂಗ್ರಹ ಚಿತ್ರ
Published On :

ನವದೆಹಲಿ: ಹೊಸ ವರ್ಷದ ಮುನ್ನಾದಿನ ರೈಲ್ವೆ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಶ್ಕಿಂಗ್ ನ್ಯೂಸ್ ಕೊಟ್ಟಿದೆ. ರಾಇಲ್ವೆ ಇಲಾಖೆ ತನ್ನೆಲ್ಲಾ ರೈಲ್ವೆ ಸೇವೆಗಳ ಶುಲ್ಕ ಹೆಚ್ಚಳ ಮಾಡಿ ಘೊಷಣೆ ಹೊರಡಿಸಿದೆ. ಉಪನಗರ ರೈಲುಗಳನ್ನು ಹೊರತುಪಡಿಸಿ,ಉಳಿದೆಲ್ಲಾ ರೈಲ್ವೆ ಸೇವೆಗಳಲ್ಲಿ ಶುಲ್ಕ ಏರಿಕೆ ನಾಳೆ (ಜನವರಿ 1, 2020) ರಿಂದ ಜಾರಿಗೆ ಬರಲಿದೆ.

ಮಂಗಳವಾರ ಇಲಾಖೆ ಹೊರಡಿಸಿದ್ದ ಆದೇಶದಂತೆ ಸಾಮಾನ್ಯ, ನಾನ್ ಎಸಿ ರಲು ದರಗಳು ಪ್ರತಿ ಕಿ.ಮೀ ಪ್ರಯಾಣಕ್ಕೆ 1 ಪೈಸೆ ಏರಿಕೆಯಾಗಿದೆ. 

ರೈಲ್ವೆ ಮೇಲ್ / ಎಕ್ಸ್‌ಪ್ರೆಸ್ ಎಸಿ ರಹಿತ ರೈಲುಗಳ ದರದಲ್ಲಿ ಎರಡು ಪೈಸೆ / ಕಿಮೀ ಹೆಚ್ಚಳ ಮತ್ತು ಎಸಿ ತರಗತಿಗಳ ದರದಲ್ಲಿ ನಾಲ್ಕು ಪೈಸೆ / ಕಿಮೀ ಹೆಚ್ಚಳವನ್ನು ಇಲಾಖೆ ಘೋಷಿಸಿದೆ.

ಪ್ರೀಮಿಯಂ ರೈಲುಗಳಾದ ಶತಾಬ್ದಿ, ರಾಜಧಾನಿ ಮತ್ತು ಡುರೊಂಟೊ ರೈಲುಗಳ ಶುಲ್ಕವೂ ಹೆಚ್ಚಳವಾಗಲಿದೆ. 

1,447 ಕಿ.ಮೀ ದೂರ ಕ್ರಮಿಸುವ ವ ದೆಹಲಿ-ಕೋಲ್ಕತಾ ರಾಜಧಾನಿ ಎಕ್ಸ್ಪ್ರೆಸ್ ಪ್ರತಿ ಕಿ.ಮೀ.ಗೆ 4 ಪೈಸೆ ದರ ಹೆಚ್ಚಳ ಮಾಡಲಾಗಿದೆ. ಎಂದರೆ ಅಂದಾಜು 58 ರು. ಹೆಚ್ಚಳವಾಗಲಿದೆ.

ಇನ್ನು ಆದೇಶದಂತೆ ರಿಸರ್ವೇಷನ್  ಶುಲ್ಕ ಮತ್ತು ಸೂಪರ್‌ಫಾಸ್ಟ್ ಶುಲ್ಕದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಮತ್ತು ದರಗಳ ಹೆಚ್ಚಳವು ಈಗಾಗಲೇ ಕಾಯ್ದಿರಿಸಿದ ಟಿಕೆಟ್‌ಗಳಿಗೆ ಅನ್ವಯಿಸುವುದಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.