ದೇಶ

ವಿಡಿಯೋ ವೈರಲ್ ಸಂಕಟ: ಎಣ್ಣೆ ಪಾರ್ಟಿ ಮಾಡಿದ 4 ವಿದ್ಯಾರ್ಥಿನಿಯರಿಗೆ ಕಾಲೇಜಿನಿಂದ ಗೇಟ್ ಪಾಸ್!

ಎಣ್ಣೆ ಪಾರ್ಟಿ ಮಾಡಿ ಸಖತ್ ಆಗಿ ಕುಡಿದು ತೂರಾಡಿದ್ದು ನಾಲ್ವರು ಪಿಯು ವಿದ್ಯಾರ್ಥಿನಿಯರನ್ನು ಕಾಲೇಜು ಆಡಳಿತ ಮಂಡಳಿ ವಜಾ ಮಾಡಿದೆ.

ವಿಡಿಯೋ ವೈರಲ್ ಸಂಕಟ: ಎಣ್ಣೆ ಪಾರ್ಟಿ ಮಾಡಿದ 4 ವಿದ್ಯಾರ್ಥಿನಿಯರಿಗೆ ಕಾಲೇಜಿನಿಂದ ಗೇಟ್ ಪಾಸ್!
ಕಾಲೇಜು ವಿದ್ಯಾರ್ಥಿನಿಯರು
Published On :

ಚೆನ್ನೈ: ಎಣ್ಣೆ ಪಾರ್ಟಿ ಮಾಡಿ ಸಖತ್ ಆಗಿ ಕುಡಿದು ತೂರಾಡಿದ್ದು ನಾಲ್ವರು ಪಿಯು ವಿದ್ಯಾರ್ಥಿನಿಯರನ್ನು ಕಾಲೇಜು ಆಡಳಿತ ಮಂಡಳಿ ವಜಾ ಮಾಡಿದೆ. 

ತಮಿಳುನಾಡಿನ ಮೈಲಾಡುತುರೈನಲ್ಲಿರುವ ಖಾಸಗಿ ಕಾಲೇಜಿನ ಶಿಸ್ತು ಸಲಹಾ ಸಮಿತಿಯು ನಾಲ್ವರು ವಿದ್ಯಾರ್ಥಿನಿಯರನ್ನು ವಜಾ ಮಾಡಿದೆ. ಕಾಲೇಜು ವಿದ್ಯಾರ್ಥಿನಿಯ ಹುಟ್ಟುಹಬ್ಬ ಆಚರಿಸಿದ್ದರು. ಈ ವೇಳೆ ಸಹಪಾಠಿಗಳ ಸಹ ಜೊತೆ ಸೇರಿ ನಾಲ್ವರು ವಿದ್ಯಾರ್ಥಿನಿಯರು ಎಣ್ಣೆ ಸೇವಿಸಿದ್ದರು.

ಖುಷಿಯ ಸಂಭ್ರಮಕ್ಕಾಗಿ ಸಹ ವಿದ್ಯಾರ್ಥಿಗಳೇ ಇದನ್ನು ವಿಡಿಯೋ ಮಾಡಿದ್ದರು. ತಿಂಗಳ ಹಿಂದೆ ನಡೆದಿದ್ದ ಈ ಪಾರ್ಟಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಡಿಸೆಂಬರ್ 24ರಂದು ಕಾಲೇಜು ಆಡಳಿತ ಮಂಡಳಿಯ ಗಮನಕ್ಕೆ ಬಂದಿತ್ತು. 

ಕಾಲೇಜು ಹೊರಗಡೆ ಈ ಘಟನೆ ನಡೆದಿದ್ದರು ವಿದ್ಯಾರ್ಥಿನಿಯರ ಈ ವರ್ತನೆ ಇತರರಿಗೆ ಬಲವಾದ ಸಂದೇಶ ರವಾನಿಸುವುದರಿಂದ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿರುವುದಾಗಿ ಕಾಲೇಜು ಮಂಡಳಿ ತಿಳಿಸಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.