ದೇಶ

ಬಡವರು, ಅಲ್ಪಸಂಖ್ಯಾತರ ವಿರುದ್ಧವಾಗಿ ಎನ್ ಪಿಆರ್, ಎನ್ ಆರ್ ಸಿ: ಫಾರಂ ಭರ್ತಿ ಮಾಡಲ್ಲ- ಅಖಿಲೇಶ್

ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ದೇಶದ ಬಡ ಜನರು ಹಾಗೂ ಅಲ್ಪಸಂಖ್ಯಾತರ ವಿರುದ್ಧವಾಗಿದ್ದು, ಯಾವುದೇ ಕಾರಣಕ್ಕೂ ತಾವು ಎನ್ ಪಿಆರ್ ಫಾರಂ ತುಂಬಲ್ಲ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.

ಬಡವರು, ಅಲ್ಪಸಂಖ್ಯಾತರ ವಿರುದ್ಧವಾಗಿ ಎನ್ ಪಿಆರ್, ಎನ್ ಆರ್ ಸಿ: ಫಾರಂ ಭರ್ತಿ ಮಾಡಲ್ಲ- ಅಖಿಲೇಶ್
ಅಖಿಲೇಶ್ ಯಾದವ್
Published On :

ಲಖನೌ: ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ದೇಶದ ಬಡ ಜನರು ಹಾಗೂ ಅಲ್ಪಸಂಖ್ಯಾತರ ವಿರುದ್ಧವಾಗಿದ್ದು, ಯಾವುದೇ ಕಾರಣಕ್ಕೂ ತಾವು ಎನ್ ಪಿಆರ್ ಫಾರಂ ತುಂಬಲ್ಲ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.

ಪಕ್ಷದ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್ ಆರ್ ಸಿ ಅಥವಾ ಉದ್ಯೋಗದಲ್ಲಿ ಯಾವುದೇ ಪಡೆಯಬೇಕೆಂಬುದು ಪ್ರಶ್ನೆಯಾಗಿದೆ. ನಾನೇ ಮೊದಲ ವ್ಯಕ್ತಿಯಾಗಿ ಫಾರಂ ಭರ್ತಿ ಮಾಡಲ್ಲ, ನೀವು ನನ್ನಗೆ ಬೆಂಬಲ ಕೋರುತ್ತೀರಾ ಅಥವಾ ಕೋರುವುದಲ್ಲವೇ ?ನೀವು ಫಾರಂ ಭರ್ತಿ ಮಾಡುತ್ತೀರಾ ಅಥವಾ ಮಾಡಲ್ವ ಎಂದು ಪಕ್ಷದ ಯುವ ನಾಯಕರನ್ನು ಪ್ರಶ್ನಿಸಿದರು.

ಲಾಠಿಚಾರ್ಜ್ ಮಾಡುವ ಪೊಲೀಸರೇ ನಿಮ್ಮ ತಂದೆ ತಾಯಿ, ಪ್ರಮಾಣ ಪತ್ರಗಳನ್ನು ಕೂಡಾ ನೀಡಬೇಕಾಗುತ್ತದೆ. ದೇಶವನ್ನು ಉಳಿಸಲು ಎಲ್ಲಾ ಭಾರತೀಯರು ಮುಂದಾಗಬೇಕಾಗಿದೆ ಎಂದು ಅವರು ಕರೆ ನೀಡಿದರು.

ಸಿಎಎ ಮತ್ತು ಎನ್ ಆರ್ ಸಿ ಜಾರಿಯಾದರೆ  ದೇಶದಲ್ಲಿ ಆರ್ಥಿಕತೆ ಕ್ಷೀಣತೆ, ಮತ್ತಿತರ ಮೂಲ ಸಮಸ್ಯೆಗಳ ಬಗ್ಗೆ  ಸಾರ್ವಜನಿಕರು ಏನನ್ನು ಪ್ರಶ್ನೆ ಮಾಡದಂತಾಗುತ್ತದೆ.  ಐಸಿಯು ನಿಂದ ದೇಶದ ಆರ್ಥಿಕತೆ ಹೊರಬರಬೇಕಾಗಿದೆ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.