ಜನರು ಬೆಂಕಿ ಹಚ್ಚುವಂತೆ ಮಾಡುವುದು, ಹಿಂಸಾಚಾರ ಸೃಷ್ಟಿಸುವುದು ನಾಯಕತ್ವವಲ್ಲ: ಸೇನಾ ಮುಖ್ಯಸ್ಥ ರಾವತ್
ಜನರನ್ನು ತಪ್ಪು ಹಾದಿಗೆಳೆದು ಬೆಂಕಿ ಹಚ್ಚುವಂತೆ ಮಾಡಿಸುವುದು, ಹಿಂಸಾಚಾರ ಸೃಷ್ಟಿಸುವುದು ನಾಯಕತ್ವವಲ್ಲ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಗುರುವಾರ ಹೇಳಿದ್ದಾರೆ.

ನವದೆಹಲಿ: ಜನರನ್ನು ತಪ್ಪು ಹಾದಿಗೆಳೆದು ಬೆಂಕಿ ಹಚ್ಚುವಂತೆ ಮಾಡಿಸುವುದು, ಹಿಂಸಾಚಾರ ಸೃಷ್ಟಿಸುವುದು ನಾಯಕತ್ವವಲ್ಲ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಗುರುವಾರ ಹೇಳಿದ್ದಾರೆ.
ಪೌರತ್ವ ಕಾಯ್ದೆ ವಿರುದ್ಧ ದೇಶದಾದ್ಯಂತ ನಡೆಯುತ್ತಿರುವ ಪ್ರತಿಭಟನೆ ಹಾಗೂ ಹಿಂಸಾಚಾರ ಕುರಿತಂತೆ ಕಾರ್ಯಕ್ರಮವೊಂದರಲ್ಲಿ ಪ್ರತಿಕ್ರಿಯೆ ನೀಡಿರುವ ರಾವತ್ ಅವರು, ಜನರು ಬೆಂಕಿ ಹಚ್ಚುವಂತೆ ಮಾಡುವುದು, ಹಿಂಸಾಚಾರದಲ್ಲಿ ತೊಡಗಿಕೊಳ್ಳುವಂತೆ ಮಾಡುವುದು ನಾಯಕತ್ವವಲ್ಲ ಎಂದು ಹೇಳಿದ್ದಾರೆ.
ವಿಶ್ವವಿದ್ಯಾಲಯಗಳು, ಕಾಲೇಜುಗಳು ವಿದ್ಯಾರ್ಥಿಗಳು ಸಂಘಟನೆಗೊಂಡು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದಾರೆ. ಬೆಂಕಿ ಹಚ್ಚುತ್ತಿದ್ದಾರೆ, ನಗರಗಳಲ್ಲಿ ಹಿಂಸಾಚಾರ ಸೃಷ್ಟಿಸುತ್ತಿದ್ದಾರೆ. ಇದು ನಾಯಕತ್ವವಲ್ಲ. ಉತ್ತಮ ರೀತಿಯಲ್ಲಿ ಮುನ್ನಡೆಯುವುದು ನಾಯಕತ್ವ. ಹೀಗಾಗಯೇ ನಾಯಕತ್ವ ಎಂಬುದು ಅತ್ಯಂತ ಕಠಿಣವಾಗಿರುತ್ತದೆ. ನೀವು ಮುಂದಡಿ ಇಡುವಾಗ, ನಿಮ್ಮನ್ನು ನೋಡಿ ಸಾಕಷ್ಟು ಜನರು ಹೆಜ್ಜೆ ಇಡುತ್ತಾರೆ. ಇದು ಅಷ್ಟು ಸುಲಭದ ಕೆಲಸವಲ್ಲ. ನೋಡುವುದಕ್ಕೆ ಕೇಳುವುದಕ್ಕೆ ಅತ್ಯಂತ ಸುಲಭವೆನಿಸುತ್ತದೆ. ಜನರನ್ನು ಉತ್ತಮ ಹಾದಿಗೆ ಕರೆದೊಯ್ಯುವವರೇ ನಾಯಕ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


