ರಾಷ್ಚ್ರಪತಿ ಕೋವಿಂದ್ ದಕ್ಷಿಣ ಭಾರತ ಭೇಟಿ: ತೀವ್ರ ಭದ್ರತೆ
ದಕ್ಷಿಣ ಭಾರತ ಪ್ರವಾಸವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೈಗೊಳ್ಳಲಿರುವ ಹಿನ್ನಲೆಯಲ್ಲಿ ಹೈದರಾಬಾದ್ ಪೊಲೀಸರು ರಾಜ್ಯಾದ್ಯಂತ ತೀವ್ರ ಭದ್ರತೆ ಕೈಗೊಳ್ಳಲಾಗಿದೆ.

ಹೈದರಾಬಾದ್(ತೆಲಂಗಾಣ): ದಕ್ಷಿಣ ಭಾರತ ಪ್ರವಾಸವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೈಗೊಳ್ಳಲಿರುವ ಹಿನ್ನಲೆಯಲ್ಲಿ ಹೈದರಾಬಾದ್ ಪೊಲೀಸರು ರಾಜ್ಯಾದ್ಯಂತ ತೀವ್ರ ಭದ್ರತೆ ಕೈಗೊಳ್ಳಲಾಗಿದೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದಿನಿಂದ ಡಿಸೆಂಬರ್ 28ರವರೆಗೆ ದಕ್ಷಿಣ ಪ್ರವಾಸ ಕೈಗೊಳ್ಳಲಿದ್ದಾರೆ.
ಈ ಹಿನ್ನಲೆಯಲ್ಲಿ ನಗರ ಪೊಲೀಸರು ಅಲ್ವಾಲ್, ಬೊಲರಮ್, ಹಕಿಂಪೆಟೆ ಪ್ರದೇಶಗಳಲ್ಲಿ ಸಕಲ ಭದ್ರತಾ ವ್ಯವಸ್ಥೆ ಕೈಗೊಂಡಿದೆ. ಹೈದರಾಬಾದ್ ಪೊಲೀಸರಿಗೆ ಈ ಸಂಬಂಧ ಅನೇಕ ಸಲಹೆಗಳನ್ನು ನೀಡಲಾಗಿದೆ.
ಹೈದರಾಬಾದ್ ನಲ್ಲಿ ರಾಷ್ಟ್ರಪತಿಗಳು ಇದೇ 22ರಂದು ಇರಲಿದ್ದು ಅಂದು ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಮೊಬೈಲ್ ಆಪ್ ನ್ನು ಬಿಡುಗಡೆಗೊಳಿಸಲಿದ್ದಾರೆ. ಡಿಸೆಂಬರ್ 23ರಂದು ಪುದುಚೆರಿ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಭಾಗವಹಿಸಲಿದ್ದಾರೆ. ನಂತರ ಕನ್ಯಾಕುಮಾರಿಯಲ್ಲಿ ವಿವೇಕಾನಂದ ಸ್ಮಾರಕ ಮತ್ತು ವಿವೇಕಾನಂದ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ.
ಡಿಸೆಂಬರ್ 27ಕ್ಕೆ ರಾಷ್ಟ್ರಪತಿಗಳು ಹಿರಿಯ ಗಣ್ಯರು, ಸಚಿವರು, ಅಧಿಕಾರಿಗಳು, ಪ್ರಮುಖ ನಾಗರಿಕರು, ಶಿಕ್ಷಣತಜ್ಞರು ಮೊದಲಾದವರಿಗೆ ಸಿಕಂದರಾಬಾದ್ ನ ರಾಷ್ಟ್ರಪತಿ ನಿಲಯದಲ್ಲಿ ಅತಿಥಿ ಸತ್ಕಾರ ಏರ್ಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


