ಪ್ರಧಾನಿ ಟೀ ಮಾರುತ್ತಿದ್ದರು, ಹೀಗಾಗಿ ಬಿಜೆಪಿಗೆ ಟೀ ಅಂದರೆ ಆಗಲ್ಲ: ಉದ್ಧವ್ ಠಾಕ್ರೆ ವ್ಯಂಗ್ಯ
ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಟೀ ಮಾರಾಟ ಮಾಡುತ್ತಿದ್ದರಲ್ಲ, ಹೀಗಾಗಿ ಅವರಿಗೆ ಟೀ ಎಂದರೆ ಆಗುವುದಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವ್ಯಂಗ್ಯವಾಡಿದ್ದಾರೆ.

ನಾಗಪುರ: ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಟೀ ಮಾರಾಟ ಮಾಡುತ್ತಿದ್ದರಲ್ಲ, ಹೀಗಾಗಿ ಅವರಿಗೆ ಟೀ ಎಂದರೆ ಆಗುವುದಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವ್ಯಂಗ್ಯವಾಡಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಯ ಚಳಿಗಾಲದ ಅಧಿವೇಶನಕ್ಕೂ ಮುನ್ನ ಸರ್ಕಾರ ಆಯೋಜಿಸುವ ಸಾಂಪ್ರದಾಯಿಕ ಔತಣಕೂಟಕ್ಕೆ (ಟೀ ಪಾರ್ಟಿ) ಬಿಜೆಪಿ ನಾಯಕರು ಗೈರುಹಾಜರಾಗಿದ್ದು ಉದ್ಧವ್ ಅವರನ್ನು ಕೆರಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯ ‘ನಾನೂ ಟೀ ಮಾರುತ್ತಿದ್ದೆ’ ಹೇಳಿಕೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಿಜೆಪಿ ಮಹಾರಾಷ್ಟ್ರ ಘಟಕವನ್ನು ವ್ಯಂಗ್ಯ ಮಾಡಲು ಬಳಸಿಕೊಂಡಿದ್ದಾರೆ.
‘ಹಿಂದುತ್ವದ ಪ್ರತಿಪಾದಕ ವೀರ್ ಸಾವರ್ಕರ್ ಅವರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವಮಾನಗೊಳಿಸಿದ್ದಾರೆ. ಅಂಥವರ ಜೊತೆಗೆ ಶಿವಸೇನಾ ಕೈಜೋಡಿಸಿದೆ’ ಎಂದು ದೂರಿದ್ದ ಬಿಜೆಪಿ ವಿವಿಧ ಕಾರಣಗಳನ್ನು ಮುಂದಿಟ್ಟು ಔತಣಕೂಟದಿಂದ ದೂರ ಉಳಿದಿತ್ತು.
‘ನಮ್ಮ ಪ್ರಧಾನಿಯ ಹಿನ್ನೆಲೆ ನಮಗೆ ಗೊತ್ತು. ಅವರು ಒಂದು ಕಾಲಕ್ಕೆ ಟೀ ಮಾರುತ್ತಿದ್ದರು. ಆದರೆ ನನಗೆ ನಮ್ಮ ರಾಜ್ಯದ ಬಿಜೆಪಿ ನಾಯಕರು ಟೀ ಕುಡಿಯಲು ಯಾಕೆ ಬರಲಿಲ್ಲವೋ ಅರ್ಥವಾಗಲಿಲ್ಲ. ಬಹುಶಃ ಪ್ರಧಾನಿಯೊಂದಿಗೆ ಮಹಾರಾಷ್ಟ್ರ ಬಿಜೆಪಿ ಘಟಕದ ನಾಯಕರಿಗೆ ಭಿನ್ನಾಭಿಪ್ರಾಯ ಇರಬಹುದು’ ಎಂದು ಠಾಕ್ರೆ ಲೇವಡಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


