100 ಪ್ರಮುಖ ಮಾರ್ಗಗಳಲ್ಲಿ ವಿಶ್ವ ದರ್ಜೆಯ ಖಾಸಗಿ ರೈಲುಗಳ ಸಂಚಾರ
ದೆಹಲಿ-ಲಕ್ನೋ ಮಧ್ಯೆ ಓಡಾಡುತ್ತಿರುವ ತೇಜಸ್ ಎಕ್ಸ್ ಪ್ರೆಸ್ ಯಶಸ್ವಿಯಾದ ಹಿನ್ನಲೆಯಲ್ಲಿ ಉತ್ತೇಜನಗೊಂಡಿರುವ ರೈಲ್ವೆ ಇಲಾಖೆ 100 ಪ್ರಮುಖ ಮಾರ್ಗಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ವಿಶ್ವದರ್ಜೆಯ ರೈಲುಗಳನ್ನೂಒಡಿಸಲು ಮುಂದಾಗಿದೆ.

ನವದೆಹಲಿ: ದೆಹಲಿ-ಲಕ್ನೋ ಮಧ್ಯೆ ಓಡಾಡುತ್ತಿರುವ ತೇಜಸ್ ಎಕ್ಸ್ ಪ್ರೆಸ್ ಯಶಸ್ವಿಯಾದ ಹಿನ್ನಲೆಯಲ್ಲಿ ಉತ್ತೇಜನಗೊಂಡಿರುವ ರೈಲ್ವೆ ಇಲಾಖೆ 100 ಪ್ರಮುಖ ಮಾರ್ಗಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ವಿಶ್ವದರ್ಜೆಯ ರೈಲುಗಳನ್ನೂಒಡಿಸಲು ಮುಂದಾಗಿದೆ.
ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ ರೈಲುಗಳು ಸಂಚಾರ ಮಾಡಲಿದ್ದು, ರೈಲ್ವೇಯಲ್ಲಿ 22,500 ಕೋಟಿ ರೂಪಾಯಿ ಹೂಡಿಕೆ ಆಹ್ವಾನಿಸುವ ಆಶಯ ಸಹ ಹೊಂದಲಾಗಿದೆ. ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಅವರ ನೇತೃತ್ವದಲ್ಲಿ ಸಭೆ ನಡೆದ ಬಳಿಕ ರೈಲ್ವೇ ಮಂಡಳಿ ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ ದೇಶದ ಹಲವು ಕಡೆ ಖಾಸಗಿ ಹೂಡಿಕೆ ಆಹ್ವಾನಿಸಲು ನಿರ್ಧರಿಸಿದ್ದು ಸದ್ಯ ಈ ಕುರಿತು ಪ್ರಸ್ತಾವನೆಯನ್ನು ಅಂತಿಮಗೊಳಿಸಲಾಗಿದೆ.
ಹೂಡಿಕೆಗಾಗಿ ಟ್ರಾವೆಲ್ಸ್ ಕಂಪೆನಿಗಳು, ಇತರ ಕಂಪೆನಿಗಳು, ಟೂರ್ ಆಪರೇಟರ್ಗಳನ್ನು ಆಹ್ವಾನಿಸಲಾಗುತ್ತಿದ್ದು, ಕನಿಷ್ಠ 12 ರೈಲುಗಳಿಗೆ, ಗರಿಷ್ಠ 30 ರೈಲುಗಳಿಗೆ ಬಿಡ್ ಸಲ್ಲಿಸಹುದಾಗಿದೆ. ಸದ್ಯ ದೆಹಲಿ-ಲಕ್ನೋ ಮಧ್ಯೆ ಓಡಾಡುತ್ತಿರುವ ತೇಜಸ್ ಎಕ್ಸ್ ಪ್ರೆಸ್ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಉತ್ತೇಜನಗೊಂಡ ರೈಲ್ವೇ ಖಾಸಗಿ-ಸಾರ್ವಜನಿಕ ಸಹಭಾಗಿತ್ವದ ರೈಲುಗಳನ್ನು ಓಡಿಸಲು ಗುತ್ತಿಗೆ ನೀಡಲು ಮುಂದಾಗಿದ್ದು, ರೈಲುಗಳ ಸಂಚಾರದಿಂದ ಬರುವ ಆದಾಯದಲ್ಲಿ ಕಂಪೆನಿಗಳು ರೈಲ್ವೆ ಇಲಾಖೆಗೆ ಆದಾಯದ ಪಾಲು ಸಹ ಕೊಡಬೇಕಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


