ಪೌರತ್ವ ಮಸೂದೆ: 'ಸುಪ್ರೀಂ'ಗೆ ದೂರು ನೀಡಲು ವಿಪಕ್ಷಗಳ ಚಿಂತನೆ
ರಾಜ್ಯಸಭೆಯಲ್ಲಿ ನಿನ್ನೆ ಅಂಗೀಕಾರಗೊಂಡಿರುವ ಪೌರತ್ವ ( ತಿದ್ದುಪಡಿ) ಕಾಯ್ದೆ ವಿರುದ್ಧ ಸುಪ್ರೀಂಕೋರ್ಟ್ ಗೆ ದೂರು ನೀಡಲು ಪ್ರತಿಪಕ್ಷಗಳು ಚಿಂತನೆ ನಡೆಸಿವೆ.

ನವದೆಹಲಿ: ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ 9 ಗಂಟೆ ಧೀರ್ಘ ಚರ್ಚೆಯ ನಂತರ ಪೌರತ್ವ (ತಿದ್ದುಪಡಿ) ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದೆ.
ಆಯ್ಕೆ ಸಮಿತಿಗೆ ಕಳುಹಿಸಲು ಪ್ರತಿಪಕ್ಷಗಳು ಕೈಗೊಂಡ ನಿರ್ಣಯವನ್ನು ಸದನ ತಿರಸ್ಕರಿಸಿದ ಬಳಿಕ ಮಸೂದೆಯನ್ನು ಕಾನೂನಾಗಿ ಮಾರ್ಪಾಡಿಸಲಾಗಿದ್ದು, ಮಸೂದೆಯನ್ನು ನ್ಯಾಯಾಂಗ ಪರಿಶೀಲನೆಗೆ ಒಪ್ಪಿಸದ ಸರ್ಕಾರದ ನಿಲುವನ್ನು ವಿರೋಧಿಸಿ ಸುಪ್ರೀಂಕೋರ್ಟಿಗೆ ದೂರು ಸಲ್ಲಿಸಲು ಪ್ರತಿಪಕ್ಷಗಳು ಚಿಂತನೆ ನಡೆಸಿವೆ.
ಅಸ್ಸಾಂ ಹಾಗೂ ಈಶಾನ್ಯ ಭಾಗದಲ್ಲಿ ತೀವ್ರ ಪ್ರತಿಭಟನೆಯ ನಡುವೆಯೂ 125 ಮತಗಳ ಬೆಂಬಲದೊಂದಿಗೆ ಪೌರತ್ವ ಪೌರತ್ವ ಮಸೂದೆ ಅಂಗೀಕಾರಗೊಂಡಿತ್ತು.ರಾಜ್ಯಸಭೆಯಲ್ಲಿ ಕೇಂದ್ರಸರ್ಕಾರ ಬಹುಮತದ ಕೊರತೆ ಅನುಭವಿಸುತ್ತಿದ್ದರೂ ವೈಎಸ್ ಆರ್ ಕಾಂಗ್ರೆಸ್, ಟಿಡಿಪಿ ಹಾಗೂ ಬಿಜೆಡಿಯ ಬೆಂಬಲದಿಂದ ಮಸೂದೆ ಅನುಮೋದನೆ ಪಡೆದುಕೊಂಡಿತು. ಶಿವಸೇನೆ ಮತದಾನದ ಸಂದರ್ಭ ಸಭಾತ್ಯಾಗ ನಡೆಸಿತು.
ಇದೊಂದು ಕರಾಳ ರಾತ್ರಿ ಎಂದು ಪ್ರತಿಪಕ್ಷಗಳು ಪ್ರತಿಪಾದಿಸಿದರೆ, ನಾವು ಆರು ಧರ್ಮಗಳನ್ನು ಒಳಗೊಂಡಿದೇವೆ. ಮೆಚ್ಚುಗೆ ಏನೂ ಇಲ್ಲ. ಮುಸ್ಲಿಂರತ್ತ ಮಾತ್ರ ಗಮನ ಹರಿಸಲಾಗಿದೆ.ಪಾಕಿಸ್ತಾನ, ಬಾಂಗ್ಲಾದೇಶ, ಅಘ್ಪಾನಿಸ್ತಾನಗಳಲ್ಲಿ ಮುಸ್ಲಿಂರು ಅಲ್ಪಸಂಖ್ಯಾತರಾ? ಮುಸ್ಲಿಂರು ಇದ್ದರೆ ಮಾತ್ರ ಜಾತ್ಯತೀತನಾ? ಕಳೆದ ಐದು ವರ್ಷಗಳಲ್ಲಿ ಸುಮಾರು 500 ಮುಸ್ಲಿಂರು ಭಾರತದ ಪೌರತ್ವ ಪಡೆದುಕೊಂಡದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಗೆ ತಿಳಿಸಿದರು.
ಪೌರತ್ವ ತಿದ್ದುಪಡಿ ಮೂಲಕ ಸಂವಿಧಾನಕ್ಕೆ ಧಕ್ಕೆ ತರಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಆರೋಪಿಸಿದರೆ, ನಾಜಿ ಜರ್ಮನಿ ರೀತಿಯಲ್ಲಿ ಮಸೂದೆಯನ್ನು ಕಾನೂನಾಗಿ ಮಾರ್ಪಡಿಸಲಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಸಂಸದ ಡೇರಿಕ್ ಓ ಬ್ರಿಯಾನ್ ಟೀಕಿಸಿದರು. ಮುಸ್ಲಿಂರು ಭಯಭೀತಿಯ ವಾತಾವರಣದಲ್ಲಿ ಬದುಕುವಂತಾಗಿದೆ. ಪೌರತ್ವ ತಿದ್ದುಪಡಿ ಮಸೂದೆ ಸಂವಿಧಾನದ ಪ್ರಸ್ತಾವಕ್ಕೆ ವಿರೋಧವಾಗಿದೆ ಎಂದು ಬಿಎಸ್ಪಿಯ ಸಂಸದ ಎಸ್. ಸಿ. ಮಿಶ್ರಾ ಅಭಿಪ್ರಾಯಪಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


