ದೇಶ

'ಹೌದು ನಾನು ಕೆಟ್ಟ ಹಣಕಾಸು ಸಚಿವೆ..!'; ರೊಚ್ಚಿಗೆದ್ದ ಸಚಿವೆ ನಿರ್ಮಲಾ ಹೇಳಿದ್ದೇನು..?

ಕೇಂದ್ರ ಸಚಿವ ಅಮಿತ್​ ಶಾಗೆ ಉದ್ಯಮಿ ರಾಹುಲ್​ ಬಜಾಜ್​ ಕೇಳಿದ ಪ್ರಶ್ನೆ ವಿಪಕ್ಷಗಳಿಗೆ ಬ್ರಹ್ಮಾಸ್ತ್ರವಾಗಿ ಮಾರ್ಪಟ್ಟಿದ್ದು, ಈ ಕುರಿತ ಟೀಕೆಗಳಿಗೆ ಕೆಂಡಾಮಂಡಲರಾಗಿರುವ ಕೇಂದ್ರ ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್ ತಿರುಗೇಟು ನೀಡಿದ್ದಾರೆ.

'ಹೌದು ನಾನು ಕೆಟ್ಟ ಹಣಕಾಸು ಸಚಿವೆ..!'; ರೊಚ್ಚಿಗೆದ್ದ ಸಚಿವೆ ನಿರ್ಮಲಾ ಹೇಳಿದ್ದೇನು..?
ಸಂಗ್ರಹ ಚಿತ್ರ
Published On :

ನವದೆಹಲಿ: ಕೇಂದ್ರ ಸಚಿವ ಅಮಿತ್​ ಶಾಗೆ ಉದ್ಯಮಿ ರಾಹುಲ್​ ಬಜಾಜ್​ ಕೇಳಿದ ಪ್ರಶ್ನೆ ವಿಪಕ್ಷಗಳಿಗೆ ಬ್ರಹ್ಮಾಸ್ತ್ರವಾಗಿ ಮಾರ್ಪಟ್ಟಿದ್ದು, ಈ ಕುರಿತ ಟೀಕೆಗಳಿಗೆ ಕೆಂಡಾಮಂಡಲರಾಗಿರುವ ಕೇಂದ್ರ ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್ ತಿರುಗೇಟು ನೀಡಿದ್ದಾರೆ.

ಈ ಕುರಿತಂತೆ ಸಂಸತ್ ನಲ್ಲಿ ಮಾತನಾಡಿದ ನಿರ್ಮಲಾ, ಕೇಂದ್ರ ಸರ್ಕಾರದ ಕುರಿತ ಟೀಕೆಗೆ ಉತ್ತರಿಸಲು ಹಾಗೂ ಅದನ್ನು ಕೇಳಿಸಿಕೊಳ್ಳಲು ನಾವು ಸದಾ ಸಿದ್ಧರಾಗಿರುತ್ತೇವೆ ಎಂದು ಹೇಳಿದ್ದಾರೆ. 'ರಾಹುಲ್ ಬಜಾಜ್​ ಅವರು ಪ್ರಶ್ನೆ ಕೇಳುವಾಗ ನಾನು ಕೂಡ ವೇದಿಕೆಯಲ್ಲಿದ್ದೆ. ನಾವು ತುಂಬಾ ಖುಷಿಯಿಂದಲೇ ಅವರ ಪ್ರಶ್ನೆ ಹಾಗೂ ಟೀಕೆಗೆ ಉತ್ತರಿಸಿದೆವು. ಅದು ಬಿಟ್ಟು ನೀವು ಮಾತಾಡುವ ಹಂಗಿಲ್ಲ ಅಂತ ನಾವು ಹೇಳಿಲ್ಲವಲ್ಲ. ಅಮಿತ್​ ಶಾ ಅವರು ಕೂಡ ಸರಿಯಾದ ಪ್ರತಿಕ್ರಿಯೆ ನೀಡುವ ಮೂಲಕ ನೀವು ಏನೇ ಪ್ರಶ್ನೆ ಕೇಳಿದರೂ ಖುಷಿಯಿಂದಲೇ ಅದಕ್ಕೆ ಉತ್ತರ ಕೊಡುತ್ತೇವೆ ಎನ್ನುವಂತಿತ್ತು ಎಂದು ಪ್ರಶಂಸಿದರು.

ಅಂತೆಯೇ ಕೆಟ್ಟ ಹಣಕಾಸು ಸಚಿವೆ ಎಂಬ ಟೀಕೆಗಳಿಗೆ ಉತ್ತರಿಸಿದ ನಿರ್ಮಲಾ, 'ಹೌದು.. ನಿಮ್ಮಲ್ಲಿ ನಾನೊಬ್ಬಳು ಕೆಟ್ಟ ಹಣಕಾಸು ಸಚಿವೆ ಅಂತ ಹೇಳಿದ್ದೇನೆ. ನಿಮ್ಮ ಐಡಿಯಾಗಳನ್ನ ಕೊಡಿ, ನಾವು ಈ ಬಗ್ಗೆ ಕೂಡ ಕೆಲಸ ಮಾಡುತ್ತೇವೆ, ನಿಮ್ಮ ಮಾತನ್ನ ಕೂಡ ನಾವು ಕೇಳುತ್ತೇವೆ. ಬೇರೆಯವರ ಮಾತನ್ನ ಮೋದಿ ಸರ್ಕಾರ ಮಾತ್ರ ಕೇಳುತ್ತೆ, ಇನ್ಯಾವ ಪಕ್ಷಗಳೂ ಕೇಳಲ್ಲ ಎಂದು ಕಾಂಗ್ರೆಸ್ ವಿರುದ್ಧ ಪರೋಕ್ಷ ಟೀಕಾ ಪ್ರಹಾರ ಮಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.