ಅಸ್ಸಾಂ ಎನ್ ಆರ್ ಸಿ ಅಂತಿಮ ವರದಿ ಪ್ರಕಟ; 19 ಲಕ್ಷಕ್ಕೂ ಅಧಿಕ ಮಂದಿ ಭಾರತೀಯ ನಾಗರಿಕರೇ ಅಲ್ಲ!
ಅಸ್ಸಾಂ ರಾಷ್ಟ್ರೀಯ ನಾಗರಿಕರ ದಾಖಲಾತಿ(ಎನ್ ಆರ್ ಸಿ) ಅಂತಿಮ ವರದಿ ಹೊರಬಿದ್ದಿದ್ದು ಸುಮಾರು 19 ಲಕ್ಷಕ್ಕೂ ಅಧಿಕ ಮಂದಿಯ ಹೆಸರು ಈ ದಾಖಲಾತಿ ವರದಿಯಲ್ಲಿಲ್ಲ.

ಗುವಾಹಟಿ: ಅಸ್ಸಾಂ ರಾಷ್ಟ್ರೀಯ ನಾಗರಿಕರ ದಾಖಲಾತಿ(ಎನ್ ಆರ್ ಸಿ) ಅಂತಿಮ ವರದಿ ಹೊರಬಿದ್ದಿದ್ದು ಸುಮಾರು 19 ಲಕ್ಷಕ್ಕೂ ಅಧಿಕ ಮಂದಿಯ ಹೆಸರು ಈ ದಾಖಲಾತಿ ವರದಿಯಲ್ಲಿಲ್ಲ.
ಎನ್ ಆರ್ ಸಿ ದಾಖಲಾತಿಯಲ್ಲಿ ತಮ್ಮ ಹೆಸರು ಸೇರ್ಪಡೆಗೆ ಒಟ್ಟಾರೆ 3 ಕೋಟಿಯ 30 ಲಕ್ಷದ 27 ಸಾವಿರದ 661 ಮಂದಿ ಅರ್ಜಿ ಸಲ್ಲಿಸಿದ್ದರು. ಸಂವಿಧಾನ ವಿಧಿ 4(3)ರಡಿಯಲ್ಲಿ ಜನರು ಸಲ್ಲಿಸಿದ ದಾಖಲಾತಿಗಳನ್ನು ಪರಿಶೀಲಿಸಿದ ನಂತರ ಅಂತಿಮ ಎನ್ ಆರ್ ಸಿ ವರದಿಯಲ್ಲಿ 3 ಕೋಟಿಯ 11 ಲಕ್ಷದ 21 ಸಾವಿರದ 4 ಮಂದಿ ಭಾರತೀಯ ನಾಗರಿಕತೆಗೆ ಅರ್ಹರಾಗಿದ್ದು, ಅರ್ಜಿ ಸಲ್ಲಿಸದವರು ಹಾಗೂ ಅನರ್ಹ ಅರ್ಜಿಗಳು ಸೇರಿ 19 ಲಕ್ಷದ 6 ಸಾವಿರದ 657 ಮಂದಿ ಅಸ್ಸಾಂ ನಾಗರಿಕರ ಪಟ್ಟಿಯಿಂದ ಹೊರಬಿದ್ದಿದ್ದಾರೆ ಎಂಬ ಅಂಕಿಅಂಶದ ಮಾಹಿತಿ ಸಿಕ್ಕಿದೆ.
ಕಳೆದ ವರ್ಷ ಎನ್ ಆರ್ ಸಿ ಪ್ರಕಟಿಸಿದ್ದ ಕರಡು ವರದಿ ಮತ್ತು ಈ ವರ್ಷಾರಂಭದಲ್ಲಿ ಪ್ರಕಟಿಸಿದ್ದ ಮತ್ತೊಂದು ಕರಡು ವರದಿಯಲ್ಲಿ 41 ಲಕ್ಷದ 9 ಸಾವಿರ ಮಂದಿಯನ್ನು ನಾಗರಿಕ ದಾಖಲಾತಿ ಪಟ್ಟಿಯಿಂದ ಹೊರಗಿಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


