ದೇಶ

ತನ್ನ ಅಶ್ಲೀಲ ವೀಡಿಯೋ ನೊಡಿ ಬೈಯ್ದ ತಂದೆ ವಿರುದ್ಧವೇ ಲೈಂಗಿಕ ಕಿರುಕುಳ ಆರೋಪ ಮಾಡಿದ ಪುತ್ರಿ!

ಮಗಳು ಆಕೆಯ ಗೆಳಯನೊಡನೆ ಇರುವ ಅಶ್ಲೀಲ ವೀಡಿಯೋವನ್ನು ಕಂಡ ತಂದೆ ಮಗಳಿಗೆ ಗದರಿದ್ದಕ್ಕೆ ಕೋಪಗೊಂಡ ಮಗಳು ತಂದೆ ವಿರುದ್ಧವೇ ಲೈಂಗಿಕ ದೌರ್ಜನ್ಯದ ಕೇಸು ದಾಖಲಿಸಿರುವ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.

ತನ್ನ ಅಶ್ಲೀಲ ವೀಡಿಯೋ ನೊಡಿ ಬೈಯ್ದ ತಂದೆ ವಿರುದ್ಧವೇ ಲೈಂಗಿಕ ಕಿರುಕುಳ ಆರೋಪ ಮಾಡಿದ ಪುತ್ರಿ!
ಸಂಗ್ರಹ ಚಿತ್ರ
Published On :

ರಾಂಚಿ: ಮಗಳು ಆಕೆಯ ಗೆಳಯನೊಡನೆ ಇರುವ ಅಶ್ಲೀಲ ವೀಡಿಯೋವನ್ನು ಕಂಡ ತಂದೆ ಮಗಳಿಗೆ ಗದರಿದ್ದಕ್ಕೆ ಕೋಪಗೊಂಡ ಮಗಳು ತಂದೆ ವಿರುದ್ಧವೇ ಲೈಂಗಿಕ ದೌರ್ಜನ್ಯದ ಕೇಸು ದಾಖಲಿಸಿರುವ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.

ದೈನಿಕ್ ಭಾಸ್ಕರ್ ವರದಿಯಂತೆ ತನ್ನ ಕೆಟ್ಟು ಹೋದ ಮೊಬೈಲ್ ಅನ್ನು ರಿಪೇರಿ ಮಾಡಿಕೊಡುವಂತೆ ಮಗಳು ತಂದೆಗೆ ನಿಡಿದಾಗ ಈ ಅಶ್ಲೀಲ ವಿಡಿಯೋ ಬೆಳಕಿಗೆ ಬಂದಿದೆ. ಮತ್ತು ತನ್ನ ಮಗಳು ಆಕೆಯ ಗೆಳಯನೊಡನೆ ಇರುವ ವಿಡಿಯೋ ನೋಡಿ ಆತ ಕೋಪಗೊಂಡಿದ್ದಾನೆ. ಬಳಿಕ ಮಗಳನ್ನು ಕರೆದು ಗದರಿದ್ದಾನೆ. 

ಇದಾದ ನಂತರ ಆಕೆಗೆ ಒಬ್ಬಳೇ ಹೊರಹೋಗದಂತೆ ನಿರ್ಬಂಧ ವಿಧಿಸಿದ ತಂದೆ ಒಂದೊಮ್ಮೆ ಹೊರಹೋಗಬೇಕಾದರೆ ತಾಯಿಯೊಡನೆ ಹೋಗುವಂತೆಯೂ ಹೇಳಿ ಕಟ್ಟಪ್ಪಣೆ ಮಾಡಿದ್ದಾನೆ.

Story image

ಇನ್ನು ಮೊಬೈಲ್ ನಲ್ಲಿದ್ದ ಆ ವೀಡಿಯೋವನ್ನು ನಾಲ್ಕೈದು ತಿಂಗಳ ಹಿಂದೆ ಚಿತ್ರೀಕರಿಸಲಾಗಿತ್ತು.

ತಂದೆ ವಿರುದ್ಧ ದೂರು

ಇದಾಗಿ ಆಕೆ ತನ್ನ ತಂದೆಯು ತನಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ತನ್ನ ವ್ಯಾಪ್ತಿಯ ಮಹಿಳಾ ಪೋಲೀಸ್ ಠಣೆಗೆ ಕರೆ ಮಾಡಿ ದೂರು ಸಲ್ಲಿಸಿದ್ದಾಳೆ. ಆದರೆ ಪೋಲೀಸ್ ಅಧಿಕಾರಿ ವಿಂಧ್ಯಾವಾಸಿನಿ ಸಿನ್ಹಾ ಅವರು ಲಿಖಿತ ದೂರು ನೀಡುವಂತೆ ಕೇಳಿದಾಗ ಆಕೆ ತನ್ನ ಚಿಕ್ಕಪ್ಪನೊಡನೆ ಹೋಗಿ ತಂದೆ ವಿರುದ್ಧ ಗಿಕ ಕಿರುಕುಳ ಆರೋಪ ಹೊರಿಸಿ ಎಫ್ಐಆರ್ ದಾಖಲಿಸಿದ್ದಾಳೆ.

ಬಾಲಕಿ ಒಂದೊಂದು ಬಾರಿ ಒಂದೊಂದು ರೀತಿ ಹೇಳಿಕೆ ನಿಡಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಪೋಲೀಸರು ಹೇಳಿದ್ದಾರೆ. ಸಧ್ಯ ಪ್ರಕರಣದ ತನಿಖೆ ನಡೆಯುತ್ತಿದ್ದು  ಆರೋಪಗಳು ನಿಜವಾಗಿದ್ದರೆ, ತಂದೆಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.ಬಾಲಕಿ ತನ್ನ ತಂದೆಯೊಂದಿಗೆ ಇರಲು ಇಷ್ಟಪಡುವುದಿಲ್ಲ ಎಂದು ಹೇಳಿದ್ದಾಳೆ ಮತ್ತು ಚಿಕ್ಕಪ್ಪನೊಂದಿಗೆ ವಾಸಿಸಲು ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.