600ಕ್ಕೂ ಹೆಚ್ಚು ಯುವತಿಯರ ಬಟ್ಟೆ ಬಿಚ್ಚಿಸಿ ನಗ್ನ ಫೋಟೋ, ವಿಡಿಯೋ ಮಾಡಿದ್ದ ಟೆಕ್ಕಿ, ಅದನ್ನು ಏನ್ಮಾಡ್ತಿದ್ದ ಗೊತ್ತ?
ಕರ್ನಾಟಕ ಸೇರಿದಂತೆ ಸುಮಾರು 600ಕ್ಕೂ ಹೆಚ್ಚು ಯುವತಿಯರಿಗೆ ಉದ್ಯೋಗಿ ಕೊಡಿಸುವ ನೆಪದಲ್ಲಿ ಅವರನ್ನು ಬೆತ್ತಲೆ ಗೊಳಿಸಿ ನಗ್ನ ಫೋಟೋ ಮತ್ತು ವಿಡಿಯೋಗಳನ್ನು ಮಾಡಿಕೊಳ್ಳುತ್ತಿದ್ದ ಟೆಕ್ಕಿಯೊರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಹೈದರಾಬಾದ್: ಕರ್ನಾಟಕ ಸೇರಿದಂತೆ ಸುಮಾರು 600ಕ್ಕೂ ಹೆಚ್ಚು ಯುವತಿಯರಿಗೆ ಉದ್ಯೋಗಿ ಕೊಡಿಸುವ ನೆಪದಲ್ಲಿ ಅವರನ್ನು ಬೆತ್ತಲೆ ಗೊಳಿಸಿ ನಗ್ನ ಫೋಟೋ ಮತ್ತು ವಿಡಿಯೋಗಳನ್ನು ಮಾಡಿಕೊಳ್ಳುತ್ತಿದ್ದ ಟೆಕ್ಕಿಯೊರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ದೇಶದ ನಾನಾ ರಾಜ್ಯಗಳಲ್ಲಿ ಯುವತಿಯರಿಗೆ ಕೆಲಸ ಕೊಡಿಸುವ ನೆಪದಲ್ಲಿ 33 ವರ್ಷದ ಕ್ಲೆಮಂಟ್ ರಾಜ್ ಅಲಿಯಾಸ್ ಪ್ರದೀಪ್ ಎಂಬಾತ ಯುವತಿಯರಿಗೆ ಫೋನ್ ಮಾಡಿ ಸುಂದರವಾದ ಯುವತಿಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವಂತೆ ತಮ್ಮ ಹಿರಿಯ ಅಧಿಕಾರಿ ಆದೇಶಿಸಿದ್ದಾರೆ ಹೀಗಾಗಿ ನಿಮ್ಮ ಸುಂದರ ದೇಹದ ವಿಡಿಯೋವನ್ನು ಕಳುಹಿಸುವಂತೆ ಕೇಳುತ್ತಿದ್ದ.
ಬಳಿಕ ವಾಟ್ಸ್ ಆ್ಯಪ್ ನಂಬರ್ ತೆಗೆದುಕೊಂಡು ನೇರವಾಗಿ ವಿಡಿಯೋ ಕಾಲ್ ಮಾಡಿ ಯುವತಿಯರಿಗೆ ಬಟ್ಟೆ ಬಿಚ್ಚುವಂತೆ ಹೇಳುತ್ತಿದ್ದ ಅದನ್ನು ಸಾಫ್ಟ್ ವೇರ್ ಮೂಲಕ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ. ಹೀಗೆ ಪ್ರದೀಪ್ ನ ಕೃತ್ಯ ಕಂಡು ಯುವತಿಯೋರ್ವಳು ಪೊಲೀಸರಿಗೆ ದೂರು ನೀಡಿದ್ದು ಈ ದೂರಿನನ್ವಯ ಆತನನ್ನು ಬಂಧಿಸಿದ್ದಾರೆ.
ಇನ್ನು ಪ್ರದೀಪ್ ತನ್ನ ಮೊಬೈಲ್ ನಲ್ಲಿ ಸಾಕಷ್ಟು ಅಶ್ಲೀಲ ಫೋಟೋಗಳು ಹಾಗೂ ವಿಡಿಯೋಗಳನ್ನು ಸೇವ್ ಮಾಡಿರುವುದು ತಿಳಿದುಬಂದಿದ್ದು ಈ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚಿನ ತನಿಖೆಗಾಗಿ ಆತನ ಮೊಬೈಲ್ ಅನ್ನು ವಶಕ್ಕೆ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


