ದೇಶ

ಐಎಲ್ & ಎಫ್ಎಸ್ ಪ್ರಕರಣ: ಮಹಾ ಮಾಜಿ ಸಿಎಂ ಮನೋಹರ್ ಜೋಶಿ ಪುತ್ರ, ಎಂಎನ್ಎಸ್ ಮುಖಂಡ ರಾಜ್ ಠಾಕ್ರೆಗೆ ಇಡಿ ಸಮನ್ಸ್

ಹಣ ಪಾವತಿಯ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಲ್ ಆಂಡ್ ಎಫ್ಎಸ್ ಆರೋಪದ ಹಿನ್ನೆಲೆಯಲ್ಲಿ ಎಂಎನ್ಎಸ್ ಪಕ್ಷದ ಮುಖ್ಯಸ್ಥ ರಾಜ್ ಠಾಕ್ರೆ ಅವರಿಗೆ ಅಕ್ರಮ ಹಣ ವರ್ಗಾವಣೆ ದೂರಿನಡಿ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿಗೊಳಿಸಿದೆ.

ಐಎಲ್ & ಎಫ್ಎಸ್ ಪ್ರಕರಣ: ಮಹಾ ಮಾಜಿ ಸಿಎಂ ಮನೋಹರ್ ಜೋಶಿ ಪುತ್ರ, ಎಂಎನ್ಎಸ್ ಮುಖಂಡ ರಾಜ್ ಠಾಕ್ರೆಗೆ ಇಡಿ ಸಮನ್ಸ್
ರಾಜ್ ಠಾಕ್ರೆ
Published On :

ನವದೆಹಲಿ: ಹಣ ಪಾವತಿಯ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಲ್ ಆಂಡ್ ಎಫ್ಎಸ್ ಆರೋಪದ ಹಿನ್ನೆಲೆಯಲ್ಲಿ ಎಂಎನ್ಎಸ್ ಪಕ್ಷದ ಮುಖ್ಯಸ್ಥ ರಾಜ್ ಠಾಕ್ರೆ ಅವರಿಗೆ ಅಕ್ರಮ ಹಣ ವರ್ಗಾವಣೆ ದೂರಿನಡಿ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿಗೊಳಿಸಿದೆ.

ಆಗಸ್ಟ್ 22 ರಂದು ಪ್ರಕರಣದ ತನಿಖಾಧಿಕಾರಿ ಎದುರು ಹಾಜರಾಗುವಂತೆ ಮಹಾರಾಷ್ಟ್ರ ನವನಿರ್ಮಾಣ್ ಸೇನೆ ಮುಖ್ಯಸ್ಥರಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದೇ ಪ್ರಕರಣದಲ್ಲಿ ಮಹಾರಾಷ್ಟ್ರದ ಮಾಜಿ  ಮುಖ್ಯಮಂತ್ರಿ ಮತ್ತು ಶಿವಸೇನಾ ನಾಯಕ ಮನೋಹರ್ ಜೋಶಿಯವರ ಪುತ್ರ ಉನ್ಮೇಶ್ ಜೋಶಿ ಅವರಿಗೆ ಸಹ ಸಮನ್ಸ್ ಜಾರಿಯಾಗಿದೆ. ಜೋಶಿ ಸೋಮವಾರ ಅಥವಾ ಮಂಗಳವಾರ ಹಾಜರಾಗಲಿದ್ದಾರೆ ಎಂದು ಇಡಿ ಮೂಲಗಳು ಹೇಳಿದೆ.

ಕೊಹಿನೂರ್ ಸಿಟಿಎನ್ಎಲ್ ಎಂಬ ಕಂಪನಿಯಲ್ಲಿ ಐಎಲ್ ಆಂಡ್  ಎಫ್ಎಸ್ ಸಮೂಹದ ಸಾಲ ಇಕ್ವಿಟಿ ಹೂಡಿಕೆಗೆ ಸಂಬಂಧಿಸಿದಂತೆ ಈ ಪ್ರಕರಣದಲ್ಲಿ ಠಾಕ್ರೆ ಭಾಗಿಯಾಗಿರುವುದನ್ನು ಸಂಸ್ಥೆ ಪರಿಶೀಲಿಸುತ್ತಿದೆ.ಈ ಸಂಸ್ಥೆಯ ಪರ ಜೋಶಿ ಪ್ರಚಾರ ನಡೆಸಿದ್ದರು.ಅಲ್ಲದೆ ಸಂಸ್ಥೆಯನ್ನು ರೂಪಿಸಿದ ಬಳಿಕ ಠಾಕ್ರೆ ಮತ್ತು ಜೋಶಿ ಜಂಟಿಯಾಗಿ ಕೆಲವು ಆಸ್ತಿಗಳಿಗೆ ಬಿಡ್ ಮಾಡಿದ್ದರು ಆದರೆ ನಂತರ ಠಾಕ್ರೆ ಈ ವ್ಯವಹಾರದಿಂದ ಹೊರನಡೆದಿದ್ದರು.ಇದೀಗ ಇಡಿಸಂಪೂರ್ಣ ವಹಿವಾಟಿನ ತನಿಖೆಗೆ ಮುಂದಾಗಿದ್ದು ಇಬ್ಬರಿಗೂ ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ಆಹ್ವಾನಿಸಿದೆ.ಪ್ರಕರಣಕ್ಕೆ ಸಂಬಂಧ ಇಡಿ ಕಳೆದ ವಾರವಷ್ಟೇ  ಚಾರ್ಜ್‌ಶೀಟ್ ಸಲ್ಲಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.