ಮಧ್ಯಪ್ರದೇಶ: ನೀರು ಕೇಳಿದ ಬುಡಕಟ್ಟು ಜನರಿಗೆ ಮೂತ್ರ ಕುಡಿಸಿದ ಪೊಲೀಸರು; ಅಧಿಕಾರಿಗಳ ಅಮಾನತು!
ವಶಕ್ಕೆ ಪಡೆದಿದ್ದ ಬುಡಕಟ್ಟು ಜನರ ಮೇಲೆ ಹಲ್ಲೆ ನಡೆಸಿ, ನೀರು ಕೇಳಿದರೆ ಮೂತ್ರ ಕುಡಿಸಿದ ಮಧ್ಯಪ್ರದೇಶದ ಪೊಲೀಸರನ್ನು ಅಮಾನತು ಮಾಡಲಾಗಿದೆ.

ಭೋಪಾಲ್: ವಶಕ್ಕೆ ಪಡೆದಿದ್ದ ಬುಡಕಟ್ಟು ಜನರ ಮೇಲೆ ಹಲ್ಲೆ ನಡೆಸಿ, ನೀರು ಕೇಳಿದರೆ ಮೂತ್ರ ಕುಡಿಸಿದ ಮಧ್ಯಪ್ರದೇಶದ ಪೊಲೀಸರನ್ನು ಅಮಾನತು ಮಾಡಲಾಗಿದೆ.
ಅಲಿರಾಜ್ ಪುರದ ನಾನ್ ಪುರ ಪೊಲೀಸ್ ಠಾಣೆಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಬುಡಕಟ್ಟು ಜನಾಂಗದ ಯುವಕರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಈ ರೀತಿ ವಶಕ್ಕೆ ಪಡೆಯಲಾಗಿದ್ದ ಬುಡಕಟ್ಟು ಜನಾಂಗಕ್ಕೆ ಸೇರಿದ 5 ರನ್ನು ಪೊಲೀಸರು ಮನಸೋ ಇಚ್ಛೆ ಥಳಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸ್ ಕಸ್ಟಡಿಯಲ್ಲಿದ್ದ ಬುಡಕಟ್ಟು ಜನರು ಕುಡಿಯುವುದಕ್ಕೆ ನೀರು ಕೇಳಿದರೆ ಪೊಲೀಸ್ ಅಧಿಕಾರಿಗಳು ಮೂತ್ರ ಕುಡಿಸಿ ವಿಕೃತಿ ಮೆರೆದಿದ್ದಾರೆ.
ಅಮಾನವೀಯ ನಡತೆ ತೋರಿರುವ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದ್ದು, ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿದೆ.
ಘಟನೆಯ ಹಿನ್ನೆಲೆ: 5 ಯುವಕರ ಪೈಕಿ ಓರ್ವನ ಸಹೋದರಿಗೆ ಮತ್ತೋರ್ವ ಯುವಕ ಕಿರುಕುಳ ನೀಡುತ್ತಿದ್ದ. ಈ ಹಿನ್ನೆಲೆಯಲ್ಲಿ 5 ಯುವಕರು ಕಿರುಕುಳ ನೀಡುತ್ತಿದ್ದ ಯುವಕನ ಬೆನ್ನಟ್ಟಿದ್ದರು. ಭಯಗೊಂಡಿದ್ದ ಆತ ಪೊಲೀಸರ ಮೊರೆ ಹೋಗಿದ್ದ. ಐವರನ್ನು ಕರೆಸಿದ ಪೊಲೀಸರು ವಿಚಾರಣೆ ಪ್ರಾರಂಭಿಸಿದಾಗ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾರೆ. 5 ಜನರ ಮೇಲೆ ಬೇರೆ ಯಾರೂ ಪ್ರಕರಣ ದಾಖಲಿಸಿಲ್ಲವಾದರೂ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


