'ಏರ್ ಇಂಡಿಯಾ'ದಲ್ಲಿ ತಾಂತ್ರಿಕ ದೋಷ; ಹಾರಾಟದಲ್ಲಿ 6 ಗಂಟೆ ವಿಳಂಬ, ಪ್ರಯಾಣಿಕರ ಪರದಾಟ
ಏರ್ ಇಂಡಿಯಾದ ಚೆಕ್ ಇನ್ ಸಾಫ್ಟ್ ವೇರ್ ಕಾರ್ಯಾಚರಣೆ ನಿಂತುಹೋದ ಕಾರಣ ವಿಶ್ವದಾದ್ಯಂತ ಹಲವು ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಸುಮಾರು 6 ಗಂಟೆಗಳ ಕಾಲ ಕಾಯಬೇಕಾದ...

Published On :
ನವದೆಹಲಿ: ಏರ್ ಇಂಡಿಯಾದ ಚೆಕ್ ಇನ್ ಸಾಫ್ಟ್ ವೇರ್ ಕಾರ್ಯಾಚರಣೆ ನಿಂತುಹೋದ ಕಾರಣ ವಿಶ್ವದಾದ್ಯಂತ ಹಲವು ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಸುಮಾರು 6 ಗಂಟೆಗಳ ಕಾಲ ಕಾಯಬೇಕಾದ ಪರಿಸ್ಥಿತಿ ಶನಿವಾರ ಬೆಳಗಿನ ಜಾವ ಉಂಟಾಯಿತು. ನಂತರ ಕೆಲ ಸಮಯಗಳ ನಂತರ ವ್ಯವಸ್ಥೆಯನ್ನು ಸರಿಪಡಿಸಲಾಯಿತು.
ಅಂಟ್ಲಾಂಟಾ ಮೂಲದ ಸೀಟಾ ಕಂಪೆನಿಯ ಸಾಫ್ಟ್ ವೇರ್ ಇಂದು ನಸುಕಿನ ಜಾವ 3 ಗಂಟೆಯಿಂದ 9 ಗಂಟೆಯವರೆಗೆ ಕಾರ್ಯನಿರ್ವಹಿಸದೆ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಕಾದು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಉಂಟಾಯಿತು ಎಂದು ವಿಮಾನಯಾನ ಮೂಲಗಳು ತಿಳಿಸಿವೆ.
ಇದೇ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಬೋರ್ಡಿಂಗ್ ಪಾಸ್ ಗಳನ್ನು ಸಹ ನೀಡಲಾಗಲಿಲ್ಲ. ಇದರಿಂದ ಹಲವು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಕಾರ್ಯಾಚರಣೆಯಲ್ಲಿ ವಿಳಂಬವಾದವು.
ವಿಳಂಬವಾಗಿದ್ದಕ್ಕೆ ಎಲ್ಲಾ ವಿಮಾನಗಳನ್ನು ಸಹಜವಾಗಿ ಕಾರ್ಯಾರಂಭ ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ. ಆದರೆ ಇಂದು ವಿಮಾನದ ಹಾರಾಟದಲ್ಲಿ ಸುಮಾರು 2 ಗಂಟೆ ವಿಳಂಬವಾಗಬಹುದು ಎಂದು ಲೊಹನಿ ಹೇಳಿದ್ದಾರೆ.
ನಸುಕಿನ ಜಾವ 3.30ರಿಂದ 4.30ರ ಮಧ್ಯೆ ಏರ್ ಇಂಡಿಯಾದ ಪ್ರಯಾಣಿಕರ ಸೇವಾ ವ್ಯವಸ್ಥೆಯನ್ನು ದುರಸ್ತಿಗೆ ಒಯ್ಯಲಾಯಿತು. ನಂತರ ಬೆಳಗ್ಗೆ 8.45ರವರೆಗೆ ವಿಳಂಬವಾಗಿ ನಂತರ ದುರಸ್ತಿ ಮಾಡಲಾಯಿತು. ಇಂದಿಡೀ ದಿನ ವಿಮಾನ ಹಾರಾಟ ಸಮಯದಲ್ಲಿ ವಿಳಂಬ ಮತ್ತು ವ್ಯತ್ಯಯ ಉಂಟಾಗಲಿದೆ ಎಂದು ಲೊಹಲಿ ತಿಳಿಸಿದರು.
ವಿಶ್ವಾದ್ಯಂತ ಹಲವು ಪ್ರಯಾಣಿಕರು ನಿಲ್ದಾಣಗಳಲ್ಲಿ ಸಿಲುಕಿಹಾಕಿಕೊಂಡಿದ್ದು ಪ್ರಯಾಣಿಕರು ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


