ಸಾಕು, ಮನೆಗೆ ಬಾ ಮಗನೇ: ಪುತ್ರ ತೇಜ್ ಪ್ರತಾಪ್‌ಗೆ ರಾಬ್ರಿ ದೇವಿ ಭಾವನಾತ್ಮಕ ಮನವಿ
ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ಪತ್ನಿ, ಮಾಜಿ ಬಿಹಾರ ಮುಖ್ಯಮಂತ್ರಿ ರಾಬ್ರಿ ದೇವಿ ಅವರು ತನ್ನ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಗೆ ‘ಇನ್ನಾದರೂ ಬೇಗನೆ ....

Published On :
ಪಾಟ್ನಾ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ಪತ್ನಿ, ಮಾಜಿ ಬಿಹಾರ ಮುಖ್ಯಮಂತ್ರಿ ರಾಬ್ರಿ ದೇವಿ ಅವರು ತನ್ನ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಗೆ ‘ಇನ್ನಾದರೂ ಬೇಗನೆ ಮನೆಗೆ ಮರಳಿ ಬಾ ಮಗನೇ’ ಎಂದು ಅತ್ಯಂತ ಭಾವನಾತ್ಮಕವಾಗಿ ಮನವಿ ಮಾಡಿಕೊಂಡಿದ್ದಾರೆ.
ತೇಜ್ ಪ್ರತಾಪ್ ಯಾದವ್ ಅವರು ತಾನು ನೂತನವಾಗಿ ವಿವಾಹವಾಗಿರುವ ಪತ್ನಿಯಿಂದ ವಿಚ್ಚೇದನ ಪಡೆಯಲು ಕೋರ್ಟಿಗೆ ಅರ್ಜಿ ಸಲ್ಲಿಸಿದ ಬಳಿಕ ಲಾಲು ಅವರನ್ನು ಕಳೆದ ವರ್ಷ ರಾಂಚಿ ಜೈಲಿನಲ್ಲಿ ಭೇಟಿಯಾದಾಗಿನಿಂದ ಈ ವರೆಗೂ ಮನೆಗೆ ಮರಳಿಲ್ಲ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಬಿಹಾರದಲ್ಲಿ ನಡೆದಿದ್ದ ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿದ ಒಂದು ದಿನದ ತರುವಾಯ ರಾಬ್ರಿ ದೇವಿ ಅವರು ತನ್ನ ಪುತ್ರ ತೇಜ್ ಪ್ರತಾಪ್ ಗೆ ಮನ ಕರಗುವ ರೀತಿಯಲ್ಲಿ , “ಬಹುತ್ ಹುವಾ, ಲೌಟ್ ಆವೋ ಬೇಟಾ’ (ಸಾಕಷ್ಟು ಆಯಿತು ಮಗಾ, ಇನ್ನಾದರೂ ಮನೆಗೆ ಮರಳಿ ಬಾ) ಎಂದು ವಿನಂತಿಸಿಕೊಂಡಿದ್ದಾರೆ.
ತೇಜ್ ಪ್ರತಾಪ್ ಯಾದವ್ ಅವರು ಕಳೆದ ವರ್ಷ ಮೇ ತಿಂಗಳಲ್ಲಿ ಆರ್‌ಜೆಡಿ ಹಿರಿಯ ನಾಯಕನ ಪುತ್ರಿ ಐಶ್ವರ್ಯಾ ರಾಯ್ ಅವರನ್ನು ವಿವಾಹವಾಗಿದ್ದರು.
ತನ್ನ ಇಬ್ಬರು ಪುತ್ರರಾಗಿರುವ ತೇಜ್ ಪ್ರತಾಪ್ ಮತ್ತು ತೇಜಸ್ವಿ ಯಾದವ್ ಅವರ ನಡುವೆ ಯಾವುದೇ ಬಿನ್ನಾಭಿಪ್ರಾಯವಿಲ್ಲ ಎಂದು ಹೇಳಿರುವ ಅವರು ನಮ್ಮ ಕುಟುಂಬ ಒಡೆಯಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.
ನಾನು ಲಾಲುಜೀ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ, ಅವರು ನನ್ನ ಜೊತೆ ಇಲ್ಲದ್ದು ನನಗೆ ನೋವು ತಂದಿದೆ, ಅವರಿಲ್ಲದೇ ಎಲ್ಲವೂ ಉಪಯೋಗಕ್ಕೆ ಬರುತ್ತಿಲ್ಲ, ಅವರು ಬೇಗನೇ ವಾಪಸ್ ಮನೆಗೆ ಬರುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


