ದೇಶ

ಅಮೇಥಿಯಲ್ಲಿ ರಾಹುಲ್ ಗಾಂಧಿ ಮೇಲೆ ಗನ್ ಪಾಯಿಂಟ್: ಕಾಂಗ್ರೆಸ್ ಕಳವಳ

ಅಮೇಥಿಯಲ್ಲಿ ನಿನ್ನೆ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದಾಗ ಅವರ ಲೇಸರ್ ಲೈಟ್ ಕಾಣಿಸಿಕೊಂಡಿದ್ದು ಇದು ಗನ್ ಪಾಯಿಂಟ್ ಇರಬಹುದು ಎಂಬ...

ಅಮೇಥಿಯಲ್ಲಿ ರಾಹುಲ್ ಗಾಂಧಿ ಮೇಲೆ ಗನ್ ಪಾಯಿಂಟ್: ಕಾಂಗ್ರೆಸ್ ಕಳವಳ
ರಾಹುಲ್ ಗಾಂಧಿ
Published On :
ಅಮೇಥಿ: ಅಮೇಥಿಯಲ್ಲಿ ನಿನ್ನೆ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದಾಗ ಅವರ ಲೇಸರ್ ಲೈಟ್ ಕಾಣಿಸಿಕೊಂಡಿದ್ದು ಇದು ಗನ್ ಪಾಯಿಂಟ್ ಇರಬಹುದು ಎಂಬ ಆತಂಕವನ್ನು ಕಾಂಗ್ರೆಸ್ ವ್ಯಕ್ತಪಡಿಸಿದೆ. 
ರಾಹುಲ್ ಗಾಂಧಿ ಮೇಲೆ 7 ಬಾರಿ ಹಸಿರು ಲೇಸರ್ ಲೈಟ್ ಕಾಣಿಸಿಕೊಂಡಿದ್ದು ಸ್ನೈಪರ್ ಗನ್ ಪಾಯಿಂಟ್ ಇರಬಹುದು. ಅವರ ಜೀವಕ್ಕೆ ಅಪಾಯವಿರುವ ಸಾಧ್ಯತೆ ಇದೆ. ಹೀಗಾಗಿ ಅವರ ಭದ್ರತೆಯನ್ನು ಹೆಚ್ಚಿಸುವಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಿದ್ದಾರೆ.
ಕೂಡಲೇ ಈ ಕುರಿತು ತನಿಖೆಗೆ ಆಗ್ರಹಿಸುವಂತೆ ಕಾಂಗ್ರೆಸ್ ತಮ್ಮ ಮನವಿ ಪತ್ರದಲ್ಲಿ ತಿಳಿಸಿದೆ. ಅಲ್ಲದೆ ರಾಹುಲ್ ಗಾಂಧಿಯ ಪ್ರಚಾರ ಸಭೆಗಳು ಮತ್ತು ರ್ಯಾಲಿಗಳ ಸಂದರ್ಭದಲ್ಲಿ ಹೆಚ್ಚಿನ ಭದ್ರತೆಯನ್ನು ಒದಗಿಸುವಂತೆ ಮನವಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.