ವಿರೋಧಿಗಳಿಗೆ ಸೆಡ್ಡು ಹೊಡೆಯಲು ಬಿಜೆಪಿ ಪರ ಅಭಿಯಾನ ಆರಂಭಿಸಿದ ಕಲಾವಿದರೂ, ಮೋದಿಗೆ ಸಿಕ್ಕ ಬೆಂಬಲ?
ಲೋಕಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಮತ ಚಲಾಯಿಸುವಂತೆ ರಂಗಭೂಮಿ ಕಲಾವಿದರರು ಅಭಿಮಾನ ಆರಂಭಿಸಿದ್ದು...

Published On :
ಲೋಕಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಮತ ಚಲಾಯಿಸುವಂತೆ ರಂಗಭೂಮಿ ಕಲಾವಿದರರು ಅಭಿಮಾನ ಆರಂಭಿಸಿದ್ದು ಇದರಲ್ಲಿ ವಿರೋಧಗಿಂತ ಬಿಜೆಪಿ ಪರವಾಗಿ ಮತ ಚಲಾಯಿಸಿರುವವರ ಸಂಖ್ಯೆ ಹೆಚ್ಚಾಗಿದೆ.
ಪಂಡಿತ್ ಜಾಸ್ ರಾಜ್, ವಿವೇಕ್ ಒಬರಾಯ್ ಮತ್ತು ರಿಟಾ ಗಂಗೂಲಿ ಸೇರಿದಂತೆ 900ಕ್ಕೂ ಹೆಚ್ಚು ಕಲಾವಿದರೂ ಬಿಜೆಪಿ ಪರ ಅಭಿಯಾನ ಆರಂಭಿಸಿದ್ದು ನಮಗೆ ಮಜಬೂತ್ ಸರ್ಕಾರ ಬೇಕೇ ಹೊರತು ಮಜಬೂರ್ ಸರ್ಕಾರ ಬೇಡ ಎಂದು ಹೇಳಿದ್ದಾರೆ.
ಕಲಾವಿದರೂ ಜನರಿಗೆ ಯಾವುದೇ ಒತ್ತಡ ಹಾಗೂ ಪೂರ್ವಗ್ರಹ ಪೀಡಿತರಾಗಿ ಮತ ಚಲಾಯಿಸಬೇಡಿ. ನಮ್ಮ ದೇಶಕ್ಕೆ ಬಲಿಷ್ಠ ಪ್ರಧಾನಿ ಬೇಕು. ಭಯೋತ್ಪಾದನೆಯನ್ನು ನಿಗ್ರಹಿಸಬೇಕಾದರೇ ನಮಗೆ ಮಜಬೂತ್ ಸರ್ಕಾರ ಬೇಕು ಎಂದು ಹೇಳಿದ್ದಾರೆ.
ಈ ಹಿಂದೆ 600ಕ್ಕೂ ಹೆಚ್ಚು ಕಲಾವಿದರೂ ಅಭಿಯಾನ ಪ್ರಾರಂಭಿಸಿದ್ದ ಗಿರೀಶ್ ಕಾರ್ನಾಡ್, ಅರುಂಧತಿ ರಾಯ್, ಅಮೋಲ್ ಪಾಲೇಕರ್, ನಾಸೀರುದ್ದೀನ್ ಶಾ ಮತ್ತು ಉಶಾ ಗಂಗೂಲಿ ಸೇರಿದಂತೆ ಹಲವು ಕಲಾವಿದರು ಬಿಜೆಪಿ ವಿರುದ್ಧವಾಗಿ ಮತ ಚಲಾಯಿಸುವಂತೆ ಮನವಿ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


