ದೇಶ

ಕಗ್ಗತ್ತಲಲ್ಲಿ ನಮ್ಮ ವೀರ ಯೋಧರ ರೋಚಕ ಸಾಹಸದ 'ಸರ್ಜಿಕಲ್ ಸ್ಟ್ರೈಕ್' ಮತ್ತೆರಡು ವಿಡಿಯೋ ಬಿಡುಗಡೆ!

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಉರಿ ಸೇನಾ ನೆಲೆ ಮೇಲೆ ಉಗ್ರರು ನಡೆಸಿದ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದೊಳಕ್ಕೆ ನುಗ್ಗಿ...

ಕಗ್ಗತ್ತಲಲ್ಲಿ ನಮ್ಮ ವೀರ ಯೋಧರ ರೋಚಕ ಸಾಹಸದ 'ಸರ್ಜಿಕಲ್ ಸ್ಟ್ರೈಕ್' ಮತ್ತೆರಡು ವಿಡಿಯೋ ಬಿಡುಗಡೆ!
ಸರ್ಜಿಕಲ್ ಸ್ಟ್ರೈಕ್
Published On :
ನವದೆಹಲಿ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಉರಿ ಸೇನಾ ನೆಲೆ ಮೇಲೆ ಉಗ್ರರು ನಡೆಸಿದ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದೊಳಕ್ಕೆ ನುಗ್ಗಿ ಉಗ್ರ ಶಿಬಿರಗಳನ್ನು ಧ್ವಂಸ ಮಾಡಿದ್ದ ಸರ್ಜಿಕಲ್ ದಾಳಿಯ ಎರಡನೇ ವರ್ಷಾಚರಣೆಗೂ ಮುನ್ನವೇ ಕೇಂದ್ರ ಸರ್ಕಾರ ರೋಚಕ ಸಾಹಸದ ಮತ್ತೆರಡು ವಿಡಿಯೋಗಳನ್ನು ಬಿಡುಗಡೆ ಮಾಡಿದೆ. 
ಭಾರತೀಯ ಯೋಧರ ಸರ್ಜಿಕಲ್ ದಾಳಿಯನ್ನೇ ಅನುಮಾನಿಸಿಕೊಂಡು ಬಂದಿದ್ದ ರಾಜಕೀಯ ಪಕ್ಷಗಳಿಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ಉತ್ತರ ಕೊಟ್ಟಿದೆ. ಭಾರತೀಯ ಯೋಧರು ಥರ್ಮಲ್ ಇಮೇಜಿಂಗ್ ಮತ್ತು ಡ್ರೋನ್ ಗಳಿಗೆ ಅಳವಡಿಸಿದ್ದ ಕ್ಯಾಮೆರಾಗಳಲ್ಲಿ ಸೆರೆಹಿಡಿದ ದೃಶ್ಯಾವಳಿಗಳು ಇದರಲ್ಲಿವೆ. 
ಭಾರತೀಯ ಸೇನೆಯ ಕಮಾಂಡೋಗಳು ಕಗ್ಗತ್ತಲ ರಾತ್ರಿಯಲ್ಲಿ ದುರ್ಗಮ ಹಾದಿಯಲ್ಲಿ ಸಾಗಿ ಜೀವ ಪಣಕ್ಕಿಟ್ಟು 2016ರ ಸೆಪ್ಟೆಂಬರ್ 28-29ರಂದು ವೀರಾವೇಷದ ಕಾರ್ಯಾಚರಣೆ ಕೈಗೊಂಡು 38 ಉಗ್ರರನ್ನು ಹತ್ಯೆ ಮಾಡಿ ಟೆರರ್ ಕ್ಯಾಂಪ್ ಗಳನ್ನು ಧ್ವಂಸಗೊಳಿಸಿದ ಸಾಹಸ ವಿಡಿಯೋದಲ್ಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.