ದೇಶ

ರಾಫೆಲ್ ಡೀಲ್ ಎಚ್ಎಎಲ್ ಬದಲು 45 ಸಾವಿರ ಕೋಟಿ ಸುಸ್ತಿದಾರ ಅಂಬಾನಿಗೆ ಕೊಟ್ಟಿದ್ದು ಏಕೆ?: ರಾಹುಲ್

ರಾಫೆಲ್ ಡೀಲ್ ಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉದ್ಯಮಿ ಅನಿಲ್ ಅಂಬಾನಿ...

ರಾಫೆಲ್ ಡೀಲ್ ಎಚ್ಎಎಲ್ ಬದಲು 45 ಸಾವಿರ ಕೋಟಿ ಸುಸ್ತಿದಾರ ಅಂಬಾನಿಗೆ ಕೊಟ್ಟಿದ್ದು ಏಕೆ?: ರಾಹುಲ್
ರಾಹುಲ್ ಗಾಂಧಿ
Published On :
ಚಿತ್ರಕೂಟ(ಮಧ್ಯ ಪ್ರದೇಶ): ರಾಫೆಲ್ ಡೀಲ್ ಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉದ್ಯಮಿ ಅನಿಲ್ ಅಂಬಾನಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ರಾಫೆಲ್ ಯುದ್ಧ ವಿಮಾನ ನಿರ್ಮಾಣದ ಗುತ್ತಿಗೆಯನ್ನು ಎಚ್ಎಎಲ್ ಗೆ ನೀಡುವ ಬದಲು ರಿಲಯನ್ಸ್ ಡಿಫೆನ್ಸ್ ಗೆ ನೀಡುವ ಮೂಲಕ ಪ್ರಧಾನಿ ಮೋದಿ ಅನಿಲ್ ಅಂಬಾನಿಗೆ ಲಾಭ ಮಾಡಿಕೊಟ್ಟಿದ್ದಾರೆ ಎಂದು ಗುರುವಾರ ಆರೋಪಿಸಿದ್ದಾರೆ.
ಡಿಸೆಂಬರ್ ನಲ್ಲಿ ಚುನಾವಣೆ ಎದುರಿಸಲಿರುವ ಮಧ್ಯ ಪ್ರದೇಶದ ಚಿತ್ರಕೂಟದಲ್ಲಿ ಇಂದು ಕಾಂಗ್ರೆಸ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಅನಿಲ್ ಅಂಬಾನಿ ಈಗಾಗಲೇ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಿಂದ ಪಡೆದ 45 ಸಾವಿರ ಕೋಟಿ ರುಪಾಯಿ ಸಾಲ ಮರುಪಾವತಿಸದೆ ಸುಸ್ತಿದಾರ ಆಗಿದ್ದಾರೆ ಎಂದು ದೂರಿದರು.
ಅನಿಲ್ ಅಂಬಾನಿ ತಮ್ಮ ಜೀವಮಾನದಲ್ಲಿ ಒಂದೇ ಒಂದು ಯುದ್ಧ ವಿಮಾನ ನಿರ್ಮಿಸಿಲ್ಲ. ಅಲ್ಲದೆ 45 ಸಾವಿರ ಕೋಟಿ ರುಪಾಯಿ ಸುಸ್ತಿದಾರ. ಆದರೂ ಪ್ರಧಾನಿ ಮೋದಿ ಅವರು ಎಚ್ಎಎಲ್ ಬದಲು ಅಂಬಾನಿಗೆ ರಾಫೆಲ್ ಗುತ್ತಿಗೆ ನೀಡಿದ್ದು ಏಕೆ? ಎಂದು ರಾಹುಲ್ ಪ್ರಶ್ನಿಸಿದ್ದಾರೆ.
ರಾಫೆಲ್ ಡೀಲ್ ಗೂ ಕೇವಲ 10 ದಿನಗಳ ಮುನ್ನ ರಿಲಯನ್ಸ್ ಡಿಫೆನ್ಸ್ ಸ್ಥಾಪಿಸಲಾಗಿದೆ. ಅಂತಹ ಅನುಭವ ಇಲ್ಲದ ಕಂಪನಿಗೆ ರಾಫೆಲ್ ಡೀಲ್ ನೀಡುವ ಬದಲು ಬೆಂಗಳೂರು ಮೂಲದ ಎಚ್ಎಎಲ್ ಗೆ ನೀಡಿದ್ದರೆ ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗುತ್ತಿದ್ದವು. ಅಲ್ಲದೆ ಎಚ್ಎಎಲ್ ಗೆ 70 ವರ್ಷಗಳ ಅನುಭವ ಇದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.