ಆಕಸ್ಮಿಕವಾಗಿ ಗುಂಡು ಹಾರಿಸಿಕೊಂಡ ಭಾರತೀಯ ವಾಯುಪಡೆ ಉಪ ಮುಖ್ಯಸ್ಥ !
ಭಾರತೀಯ ವಾಯುಪಡೆ ಉಪಮುಖ್ಯಸ್ಥ ಏರ್ ಮಾರ್ಷಲ್ ಶಿರಿಶ್ ಬಾಬನ್ ದೇವ್ ಅವರು ಆಕಸ್ಮಿಕವಾಗಿ ತಮ್ಮ ತೊಡೆಗೆ ತಾವೇ ಗುಂಡು ಹೊಡೆದುಕೊಂಡಿದ್ದಾರೆ.

Published On :
ನವದೆಹಲಿ: ಭಾರತೀಯ ವಾಯುಪಡೆ ಉಪಮುಖ್ಯಸ್ಥ ಏರ್ ಮಾರ್ಷಲ್ ಶಿರಿಶ್ ಬಾಬನ್ ದೇವ್ ಅವರು ಆಕಸ್ಮಿಕವಾಗಿ ತಮ್ಮ ತೊಡೆಗೆ ತಾವೇ ಗುಂಡು ಹೊಡೆದುಕೊಂಡಿದ್ದಾರೆ.
ಗಾಯಗೊಂಡಿರುವ ಅವರನ್ನು ದೆಹಲಿ ಮಿಲಿಟರಿ ಆಸ್ಪತ್ರೆಗೆ ಸೇರಿಸಲಾಗಿದೆ. ಶಸ್ತ್ರಚಿಕಿತ್ಸೆ ಮೂಲಕ ಗುಂಡು ತೆಗೆಯಲಾಗಿದೆ. ತೊಡೆ ಭಾಗದಲ್ಲಿ ಮೂಳೆ ಮುರಿದಿರುವುದರಿಂದ ಪ್ಲೇಟ್ ಅಳವಡಿಸಲಾಗಿದೆ.
ದೇವ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಘಟನೆ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ದೇವ್ ಅವರು ಐಎಎಫ್ ಉಪ ಮುಖ್ಯಸ್ಥರಾಗಿ ಜುಲೈನಲ್ಲಿ ಅಧಿಕಾರ ಸ್ವೀಕರಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


