ಹಿಮಾಚಲ ಪ್ರದೇಶ: ನಾಪತ್ತೆಯಾಗಿದ್ದ 8 ಮಂದಿ ಪ್ರವಾಸಿಗರು ಸುರಕ್ಷಿತ: ಅಧಿಕಾರಿಗಳು
ಹಿಮಾಚಲ ಪ್ರದೇಶದಲ್ಲಿ ಟ್ರೆಕಿಂಗ್ ಗೆ ತೆರಳಿ ಸೋಮವಾರ ರಾತ್ರಿ ನಾಪತ್ತೆಯಾಗಿದ್ದ 8 ಮಂದಿ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

Published On :
ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಟ್ರೆಕಿಂಗ್ ಗೆ ತೆರಳಿ ಸೋಮವಾರ ರಾತ್ರಿ ನಾಪತ್ತೆಯಾಗಿದ್ದ 8 ಮಂದಿ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಕೀಲಾಂಗ್ ಎಸ್ ಡಿಎಂ ಅಮರ್ ಸಿಂಗ್ ನೇಗಿ ಅವರು, ಸೋಮವಾರ ಹಿಮಾಚಲ ಪ್ರದೇಶದ ಲಹೌಲ್ ಮತ್ತು ಸ್ಪಿಟಿಯಲ್ಲಿ ಟ್ರೆಕಿಂಗ್ ಗೆ ತೆರಳಿದ್ದ 8 ಪ್ರವಾಸಿಗರ ತಂಡ ನಾಪತ್ತೆಯಾಗಿತ್ತು. ಹೀಗಾಗಿ ನಾಪತ್ತೆಯಾದವರಿಗಾಗಿ ಶೋಧ ಕಾರ್ಯಾಚರಣೆ ಆರಂಭವಾಗಿತ್ತು. ಇದೀಗ ಈ ತಂಡ ಸುರಕ್ಷಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ನೇಗಿ ಮಾಹಿತಿ ನೀಡಿದರು.
ನೇಗಿ ನೀಡಿರುವ ಮಾಹಿತಿಯನ್ವಯ ಬ್ರುನೇ ಮೂಲದ ಓರ್ವ ಮಹಿಳೆಯೂ ಸೇರಿದಂತೆ ಎಲ್ಲ 8 ಮಂದಿ ಪ್ರವಾಸಿಗರೂ ಸುರಕ್ಷಿತವಾಗಿದ್ದಾರೆ. ಈ 8 ಮಂದಿಯ ಪೈಕಿ ಓರ್ವ ಮಹಿಳೆ ಬ್ರೂನೇ ಮೂಲದವರಾಗಿದ್ದು, ಓರ್ವ ವ್ಯಕ್ತಿ ನೆದರ್ ಲ್ಯಾಂಡ್ ನವನಾಗಿದ್ದಾನೆ. ಆತನ ಹೆಸರು ಆಬ್ಬಿ ಲಿಮ್ ಎಂದು ಗುರುತಿಸಲಾಗಿದೆ. ಅಂತೆಯೇ ಪ್ರಿಯಾಂಕೋ ವೋರಾ, ಪಾಯಲ್ ದೇಸಾಯಿ, ದೀಪಿಕಾ, ದಿವ್ಯಾ ಅಗರ್ವಾಲ್, ಅಭಿನವ್ ಚಂಡಾಲ್ ಮತ್ತು ಅಶೋಕ್ ಎಂಬ ಭಾರತೀಯ ಪ್ರವಾಸಿಗರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಇದೇ ಲಹೌಲ್ ಮತ್ತು ಸ್ಪಿಟಿಯಲ್ಲಿ ನಾಪತ್ತೆಯಾಗಿರುವ 45 ಟ್ರೆಕ್ಕರ್ ಗಳ ಕುರಿತು ಇನ್ನೂ ಮಾಹಿತಿ ಲಭ್ಯವಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಹಿಮಾಚಲ ಪ್ರದೇಶHimachal PradeshShimlaಶಿಮ್ಲಾHeavy Snowfallಭಾರಿ ಹಿಮಪಾತStudents Missingವಿದ್ಯಾರ್ಥಿಗಳು ನಾಪತ್ತೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


