ಇಟಲಿಯ ಲೇಕ್ ಕೊಮೋದಲ್ಲಿ ಇಶಾ ಅಂಬಾನಿ, ಆನಂದ್ ಪಿರಾಮಲ್ ನಿಶ್ಚಿತಾರ್ಥ
ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಮತ್ತು ಆನಂದ್ ಪಿರಾಮಲ್ ಅವರ ನಿಶ್ಚಿತಾರ್ಥ ಇಟಲಿಯಲ್ಲಿ ಅದ್ಧೂರಿಯಾಗಿ ನೆರವೇರಿದೆ.

Published On :
ನವದೆಹಲಿ: ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಮತ್ತು ಆನಂದ್ ಪಿರಾಮಲ್ ಅವರ ನಿಶ್ಚಿತಾರ್ಥ ಇಟಲಿಯಲ್ಲಿ ಅದ್ಧೂರಿಯಾಗಿ ನೆರವೇರಿದೆ.
ಭಾರತದ ಶ್ರೀಮಂತ ಉದ್ಯಮಿ ಎಂದೇ ಖ್ಯಾತರಾಗಿರುವ ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ತಮ್ಮ ಸ್ನೇಹಿತ ಆನಂದ್ ಪಿರಾಮಲ್ ಜತೆ ಇಟಲಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇಶಾ ಅಂಬಾನಿ ಹಾಗೂ ಆಕೆಯ ಭಾವಿ ಪತಿ ಆನಂದ್ ಪಿರಾಮಲ್ ನಿಶ್ಚಿತಾರ್ಥ ಉಂಗುರವನ್ನು ಬದಲಿಸಿಕೊಂಡಿದ್ದಾರೆ.
ಆನಂದ್ ಪಿರಾಮಲ್ ಅವರು ಪಿರಾಮಲ್ ಗ್ರೂಪ್ ಆಫ್ ಕಂಪನಿ ಅಧ್ಯಕ್ಷ ಅಜಯ್ ಪಿರಾಮಲ್ ಅವರ ಪುತ್ರರಾಗಿದ್ದಾರೆ.
ಇನ್ನು ಅಂಬಾನಿ ಪುತ್ರಿಯ ನಿಶ್ಚಿತಾರ್ಥಕ್ಕೆ ಬಾಲಿವುಡ್ ನ ಹಲವು ಸ್ಟಾರ್ಗಳು ಭೇಟಿ ನೀಡಿದ್ದು, ಅವರಲ್ಲಿ ಕೆಲವರು ತಾವು ಇಟಲಿಯಲ್ಲಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ನಟಿ ಜೂಹಿ ಚಾವ್ಲಾ ಒಂದು ಫೋಟೋ ಹಾಕಿದ್ದು, ಇಟಲಿಯಲ್ಲಿ ನಡೆದ ವಿಶೇಷ ಸಂದರ್ಭವೊಂದರ ವಿನೋದದ ಸಂದರ್ಭ ಎಂದು ಅದಕ್ಕೆ ಕ್ಯಾಪ್ಷನ್ ಹಾಕಿದ್ದಾರೆ. ಹಾಗೇ ಅನಿಲ್ ಕಪೂರ್ ಕೂಡ ಲಿಯೋ ಟಾಲ್ಸ್ಟಾಯ್ ಅವರ ಸಂದೇಶವುಳ್ಳ ದೋಣಿಯಲ್ಲಿ ಕುಳಿತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Bollywoodಬಾಲಿವುಡ್engagementItalyಇಟಲಿನಿಶ್ಚಿತಾರ್ಥಮುಖೇಶ್ ಅಂಬಾನಿIsha Ambaniಇಶಾ ಅಂಬಾನಿMukhesh AmbaniAnand Piramalಆನಂದ್ ಪಿರಾಮಲ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


