ಶಿಮ್ಲಾ: ಕಂದಕಕ್ಕೆ ಉರುಳಿದ ಬಸ್, ಮೂವರು ದಂಪತಿ ಸೇರಿ 13 ಸಾವು
ಖಾಸಗಿ ಬಸ್ ವೊಂದು ಕಂದಕಕ್ಕೆ ಉರುಳಿ ಮೂವರು ದಂಪತಿ ಸೇರಿದಂತೆ 13 ಜನ ಮೃತಪಟ್ಟಿರುವ ದಾರುಣ ಘಟನೆ...

Published On :
ಶಿಮ್ಲಾ: ಖಾಸಗಿ ಬಸ್ ವೊಂದು ಕಂದಕಕ್ಕೆ ಉರುಳಿ ಮೂವರು ದಂಪತಿ ಸೇರಿದಂತೆ 13 ಜನ ಮೃತಪಟ್ಟಿರುವ ದಾರುಣ ಘಟನೆ ಹಿಮಾಚಲ ಪ್ರದೇಶದ ಸನೈಲ್‌ನಲ್ಲಿ ಶನಿವಾರ ನಡೆದಿದೆ.
ಶಿಮ್ಲಾದಿಂದ 65 ಕಿ. ಮೀ. ದೂರದಲ್ಲಿ ಈ ಅಪಘಾತ ಸಂಭವಿಸಿದ್ದು, ಬಸ್ ಹಕೋಟಿಯಿಂದ ಉತ್ತರಾಖಂಡ್ ನ ತಿಯುನಿಗೆ ತೆರಳುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಮೂವರು ದಂಪತಿಗಳು ಹಾಗೂ ಏಳು ವರ್ಷದ ಮಗು ಸೇರಿದಂತೆ 10 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಶಿಮ್ಲಾ ಪೊಲೀಸ್ ಅಧೀಕ್ಷಕ ಓಂಪತಿ ಜಮ್ವಾಲ್ ಹೇಳಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಮೂವರು ಚಿಕಿತ್ಸೆ ಫಲಕಾರಿಯಾಗದೆ ರೊಹ್ರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮೃತರನ್ನು ಮತ್ವರ್ ಸಿಂಗ್ (48) ಅವರ ಪತ್ನಿ ಬಸಂತಿ ದೇವಿ (44), ಪುತ್ರ ಮುನೀಶ್ (24), ಪ್ರೇಮ್ ಸಿಂಗ್ (38) ಅವರ ಪತ್ನಿ ಪೂನಮ್(30), ಮಗು ರಿಧಿಮಾ (6), ಅತ್ತರ್ ಸಿಂಗ್ (44) ಪತ್ನಿ ಮುನ್ನಾ ದೇವಿ , ಬಿಟ್ಟು (42), ಬಂದಿ ದೇವಿ (48) ನೆರ್ ಸಿಂಗ್ (35), ಮನೋಜ್ 9350 ಮತ್ತು ಅನಿಲ್ (28) ಎಂದು ಗುರುತಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


