ಇಟಲಿಯಲ್ಲಿ 3 ದಿನ ಮುಖೇಶ್ ಅಂಬಾನಿ ಪುತ್ರಿ ಇಶಾ ಅದ್ಧೂರಿ ನಿಶ್ಚಿತಾರ್ಥ, ತಾರಾ ಮೆರಗು!
ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಇತ್ತೀಚೆಗಷ್ಟೇ ತಮ್ಮ ಪುತ್ರ ಆಕಾಶ್ ಅಂಬಾನಿ ನಿಶ್ಚಿತಾರ್ಥವನ್ನು ಅದ್ಧೂರಿಯಾಗಿ ನೆರವೇರಿಸಿದ್ದು ಇದೀಗ ತಮ್ಮ ಪುತ್ರಿ ಇಶಾ...

Published On :
ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಇತ್ತೀಚೆಗಷ್ಟೇ ತಮ್ಮ ಪುತ್ರ ಆಕಾಶ್ ಅಂಬಾನಿ ನಿಶ್ಚಿತಾರ್ಥವನ್ನು ಅದ್ಧೂರಿಯಾಗಿ ನೆರವೇರಿಸಿದ್ದು ಇದೀಗ ತಮ್ಮ ಪುತ್ರಿ ಇಶಾ ಅಂಬಾನಿಯ ನಿಶ್ಚಿತಾರ್ಥವನ್ನು ಇಟಲಿಯಲ್ಲಿ ಅದ್ಧೂರಿಯಾಗಿ ನಡೆಸಲಿದ್ದಾರೆ.
ಇಟಲಿಯಲ್ಲಿ ಮೂರು ದಿನಗಳ ಕಾಲ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದ್ದು ನಿಶ್ಚಿತಾರ್ಥಕ್ಕೆ ಅದಾಗಲೆ ಬಾಲಿವುಡ್ ನಟ ಅನಿಲ್ ಕಪೂರ್, ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್, ಜಾಹ್ನವಿ ಕಪೂರ್, ಸೋಮನ್ ಕಪೂರ್ ಸೇರಿದಂತೆ ಹಲವು ತಾರೆಯರು ಇಟಲಿಗೆ ತೆರಳಿದ್ದಾರೆ.
ಇಶಾ ಅಂಬಾನಿ ಅಜಯ್ ಪಿರಾಮಲ್ ಪುತ್ರ ಆನಂದ್ ಪಿರಾಮಲ್ ಜೊತೆಗೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ. ಅಂಬಾನಿ ಹಾಗೂ ಪಿರಾಮಲ್ ಕುಟುಂಬದ ಮಧ್ಯೆ ಅನೇಕ ವರ್ಷಗಳಿಂದ ಸ್ನೇಹ ಸಂಬಂಧವಿತ್ತು. ಈ ಮದುವೆ ಮೂಲಕ ಎರಡು ಕುಟುಂಬಗಳು ಸಂಬಂಧಿಗಳಾಗುತ್ತಿದ್ದಾರೆ.
ಸೆಪ್ಟೆಂಬರ್ 21ರಿಂದಲೇ ನಿಶ್ಚಿತಾರ್ಥ ಕಾರ್ಯಕ್ರಮಗಳು ನಡೆಯುತ್ತಿವೆ. ಇನ್ನು ಡಿಸೆಂಬರ್ ತಿಂಗಳಲ್ಲಿ ಮದುವೆ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
engagementಮುಕೇಶ್ ಅಂಬಾನಿItalyಅನಿಲ್ ಕಪೂರ್Mukesh AmbaniAnil Kapoorಪ್ರಿಯಾಂಕಾPriyankaಜಾಹ್ನವಿIsha Ambaniಇಶಾ ಅಂಬಾನಿAnand Piramalಆನಂದ್ ಪಿರಾಮಲ್NickJanhviನಿಕ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


