ದೇಶ

ಕೇರಳ ಆಯ್ತು, ಈಗ ಉತ್ತರ ಪ್ರದೇಶ ಸರದಿ; ಶಂಕಿತ ಜ್ವರಕ್ಕೆ 84 ಬಲಿ!

ಕೇರಳ ಪ್ರವಾಹದ ಬಳಿಕ ಕೇರಳದಲ್ಲಿ ಮರಣ ಮೃದಂಗ ಭಾರಿಸಿದ್ದ ಶಂಕಿತ ಇಲಿ ಜ್ವರ ವಿಚಾರ ಇನ್ನೂ ಹಸಿರಾಗಿರುವಾಗಲೇ ಅಂತಹುದೇ ಮತ್ತೊಂದು ಪ್ರಕರಣ ಉತ್ತರ ಪ್ರದೇಶದಿಂದ ವರದಿಯಾಗಿದೆ.

ಕೇರಳ ಆಯ್ತು, ಈಗ ಉತ್ತರ ಪ್ರದೇಶ ಸರದಿ; ಶಂಕಿತ ಜ್ವರಕ್ಕೆ 84 ಬಲಿ!
ಸಂಗ್ರಹ ಚಿತ್ರ
Published On :
ಲಖನೌ: ಕೇರಳ ಪ್ರವಾಹದ ಬಳಿಕ ಕೇರಳದಲ್ಲಿ ಮರಣ ಮೃದಂಗ ಭಾರಿಸಿದ್ದ ಶಂಕಿತ ಇಲಿ ಜ್ವರ ವಿಚಾರ ಇನ್ನೂ ಹಸಿರಾಗಿರುವಾಗಲೇ ಅಂತಹುದೇ ಮತ್ತೊಂದು ಪ್ರಕರಣ ಉತ್ತರ ಪ್ರದೇಶದಿಂದ ವರದಿಯಾಗಿದೆ.
ಉತ್ತರ ಪ್ರದೇಶದಲ್ಲಿ ಕಳೆದ ಮೂರು ವಾರಗಳ ಅವಧಿಯಲ್ಲಿ ಸುಮಾರು 84 ಮಂದಿ ರೋಗಿಗಳು ಶಂಕಿತ ಜ್ವರಕ್ಕೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ಉತ್ತರ ಪ್ರದೇಶದಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಶಂಕಿತ ಜ್ವರ ಯಾವುದು ಎಂಬುದುರ ಬಗ್ಗಿ ಖಚಿತ ಮಾಹಿತಿ ಇಲ್ಲವಾದರೂ, ಕೇವಲ ಮೂರು ವಾರಗಳ ಅವಧಿಯಲ್ಲಿ ಈ ಶಂಕಿತ ಜ್ವರ 6 ಜಿಲ್ಲೆಗಳಿಗೆ ಹಬ್ಬಿ ಈ ವರೆಗೂ 84 ಮಂದಿಯ ಜೀವ ಪಡೆದಿದೆ ಎನ್ನಲಾಗಿದೆ.
ಈ ಹಿನ್ನಲೆಯಲ್ಲಿ ಉತ್ತರ ಪ್ರದೇಶದ ಬರೇಲಿ, ಬದೌನ್, ಹಾರ್ದೊಯ್, ಸಿತಾಪೂರ್, ಬಹ್ರಾಯ್ಚ್ ಮತ್ತು ಷಹಜಹಾನ್ಪುರದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಈ ಶಂಕಿತ ಜ್ವರಕ್ಕೆ ಈ ವರೆಗೂ ಬರೇಲಿಯಲ್ಲಿ 24 ಮಂದಿ ಸಾವನ್ನಪ್ಪಿದ್ದರೆ, ಬದೌನ್ ಜಿಲ್ಲೆಯಲ್ಲಿ 23 ಮಂದಿ ಸಾವಿಗೀಡಾಗಿದ್ದಾರೆ. ಇದಲ್ಲದೇ ರಾಜ್ಯದಲ್ಲಿ ಈ ಜ್ವರದ ಲಕ್ಷಣಗಳಿರುವ ಸಾಕಷ್ಟು ರೋಗಿಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸಾವಿನ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾದ ಬೆನ್ನಲ್ಲೇ ಉತ್ತರ ಪ್ರದೇಶ ಆರೋಗ್ಯ ಇಲಾಖೆ ಈ ಸಂಬಂಧ ತನಿಖೆ ನಡೆಸುವಂತೆ ಮತ್ತು ಈ ಜ್ವರಿಂದ ಸಾವನ್ನಪ್ಪಿರುವವ ಕುರಿತು ಮಾಹಿತಿ ದಾಖಲಿಸುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದೆ. ಅಂತೆಯೇ ಉತ್ತರ ಪ್ರದೇಶದ ಎಲ್ಲ ಜಿಲ್ಲೆ ಮತ್ತು ಗ್ರಾಮಗಳಲ್ಲಿ ಸೊಳ್ಳೆ ನಿಯಂತ್ರಕಗಳನ್ನು ಮತ್ತು ಹೊಗೆ ಯಂತ್ರಗಳ ಮೂಲಕ ಸೊಳ್ಳೆ ನಿಯಂತ್ರಣಕ್ಕೆ ಜಿಲ್ಲಾಡಳಿತಗಳಿಗೆ ಆದೇಶ ನೀಡಲಾಗಿದೆ. ಅಂತೆಯೇ ಎಲ್ಲ ಜಿಲ್ಲಾಸ್ಪತ್ರೆಗಳಿಗೂ ಮಲೇರಿಯಾ, ಡೆಂಗ್ಯೂ ಸೇರಿದಂತೆ ವೈರಾಣು ಸೋಂಕಿನಂತಹ ಜ್ವರಗಳಿಗೆ ನೀಡಲಾಗುವ ಔಷಧಿಗಳನ್ನು ದಾಸ್ತಾನು ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.