ಪ್ರಧಾನಿ ಮೋದಿ ವಿದ್ಯಾಭ್ಯಾಸ ಕುರಿತು ಟ್ವೀಟ್; ತಮ್ಮ ಎಡವಟ್ಟು ಒಪ್ಪಿಕೊಂಡ ರಮ್ಯಾ
ನಾನು ಪ್ರೌಢ ಶಾಲೆವರೆಗೆ ವಿದ್ಯಾಭ್ಯಾಸ ಮಾಡಿದ್ದೇನೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದ ಅರ್ಧಂಬರ್ಧ ವಿಡಿಯೋವಿನ ತುಣಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ನಟಿ ರಮ್ಯಾ ಅವರು ಪೇಚಿಗೆ ಸಿಲುಕಿದ ಘಟನೆ ನಡೆಯಿತು...

Published On :
ನವದೆಹಲಿ: ನಾನು ಪ್ರೌಢ ಶಾಲೆವರೆಗೆ ವಿದ್ಯಾಭ್ಯಾಸ ಮಾಡಿದ್ದೇನೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದ ಅರ್ಧಂಬರ್ಧ ವಿಡಿಯೋವಿನ ತುಣಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ನಟಿ ರಮ್ಯಾ ಅವರು ಪೇಚಿಗೆ ಸಿಲುಕಿದ ಘಟನೆ ನಡೆಯಿತು.
1998ರ ನಡೆಸಲಾಗಿದ್ದ ಸಂದರ್ಶನವೊಂದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾತನಾಡಿದ್ದ ವಿಡಿಯೋವಿನ ಸಣ್ಣ ತುಣುಕನ್ನು ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಹಾಗೂ ನಟಿ ರಮ್ಯಾ ಅವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರು.
ತುಂಬಾ ಕಷ್ಟಪಟ್ಟು ಈ ವಿಡಿಯೋವನ್ನು ಹುಡುಕಲಾಗಿದೆ. ಇದು 1998ರ ಸಂದರ್ಶನ. ಇದರಲ್ಲಿ ಸಾಹೇಬರು ಸ್ವತಃ ಶಾಲೆವರೆಗೂ ಮಾತ್ರ ವಿದ್ಯಾಭ್ಯಾಸ ಮಾಡಿದ್ದೇನೆ ಎಂದು ಹೇಳಿದ್ದಾರೆ. ಆದರೆ, ಇಂದು ಸಾಹೇಬರ ಬಳಿ ಪದವಿ ಇದೆ. ಅವರು, 1979ರಲ್ಲಿ ಪದವಿ ಪಡೆದಿದ್ದಾರೆಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದರು.
ವಿಡಿಯೋದಲ್ಲಿ ಮೋದಿಯವರು, ಮೊದಲನೆಯದಾಗಿ ಹೇಳುವುದಾದರೆ ನಾನು ಓದಿರುವ, ಬರೆದಿರುವ ವ್ಯಕ್ತಿಯಲ್ಲ. ಆದರೆ, ಪರಮಾತ್ಮನ ಕೃಪೆಯಿದೆ. ಅದರಿಂದ ನನಗೆ ಹೊಸ ಹೊಸ ವಿಷಯಗಳನ್ನು ಕಲಿಯುವ ಆಸಕ್ತಿ ಇತ್ತು. ನಾನು 17ನೇ ವಯಸ್ಸಿನಲ್ಲಿ ಮನೆಯಿನ್ನು ಬಿಟ್ಟು ಹೊರ ಬಂದಿದ್ದೆ. ಈ ಹೈಸ್ಕೂಲ್ ಶಿಕ್ಷಣ ಪೂರ್ಣಗೊಳಿಸಿದ್ದೆ. ಶಾಲಾ ಶಿಕ್ಷಣದ ನಂತರವೇ ಮನೆ ತೊರೆದುಬಿಟ್ಟೆ. ಅಲ್ಲಿದಂ ಹೊಸದನ್ನು ಕಲಿಯಲು ನಿರಂತರವಾಗಿ ಅಲೆಯುತ್ತಿದ್ದೇನೆಂದು ಹೇಳಿದ್ದರು.
ಸಂದರ್ಶನದ ಅರ್ಧಂಬರ್ಧ ವಿಡಿಯೋವನ್ನು ನಟಿ ರಮ್ಯಾ ಹಂಚಿಕೊಂಚಿದ್ದು, ವಿಡಿಯೋ ಹಂಚಿಕೊಂಡ 3 ಗಂಟೆಗಳಲ್ಲಿಯೇ 16,000ಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅಲ್ಲದೆ, 1,200ಕ್ಕೂ ಹೆಚ್ಚು ಮಂದಿ ರೀಟ್ವೀಟ್ ಮಾಡಿದ್ದಾರೆ.
ಈ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿದ್ಯಾಭ್ಯಾಸ ಕುರಿತು ಕೇಂದ್ರ ಸರ್ಕಾರ ತಪ್ಪು ಮಾಹಿತಿ ನೀಡಿದೆ ಎಂದು ಪರೋಕ್ಷವಾಗಿ ಹೇಳಲು ಯತ್ನ ನಡೆಸಿದ್ದರು.
ಆದರೆ, ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸಂದರ್ಶನದ ನಿಜವಾದ ವಿಡಿಯೋ ಕುರಿತು ಮಾತುಕತೆಗಳು ಆರಂಭವಾಗ ತೊಡಗಿದವು. ಈ ವೇಳೆ ರಮ್ಯಾ ಅವರು ತಾವು ಅರ್ಧಂಬರ್ಧ ವಿಡಿಯೋವನ್ನು ಹಂಚಿಕೊಂಡಿದ್ದು, ನಿಜವಾದ ವಿಡಿಯೋ ಇದಲ್ಲ ಎಂಬುದು ತಿಳಿದುಬಂದಿದೆ.
ಬಳಿಕ ಮತ್ತೊಂದು ಟ್ವೀಟ್ ಮಾಡಿದ ರಮ್ಯಾ, ಇಂದು ಸಂದರ್ಶನದ ಸಂಪೂರ್ಣ ವಿಡಿಯೋ ಅಲ್ಲ. ವಾಟ್ಸ್'ಆ್ಯಪ್'ನಿಂದಾದ ಎಡವಟ್ಟು ಎಂದು ತಿಳಿಸಿದ್ದಾರೆ.
So that’s not the entire clip! Whatsapp
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


